January 29, 2026
IMG-20250218-WA0214.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಮಕ್ಕಳಲ್ಲಿನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುವ ಉದ್ದೇಶದಿಂದ ಕಲಿಕಾ ಹಬ್ಬವನ್ನು ಮಾಡಲಾಗುತ್ತಿದೆ ಎಂದು ಶಿಕ್ಷಣ ಸಂಯೋಜಕ ಜನಾರ್ದನ್ ಹೇಳಿದರು.

ಅವರು ತಾಲೂಕಿನ ಗೇರದಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಬಲವರ್ಧನ ವರ್ಷ 2024-25ನೇ ಸಾಲಿನ ಕುಪ್ಪಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮರ್ಥ್ಯ ಭರಿತ ಕಲಿಕೆಗಾಗಿ, ಸುಲಭವಾಗಿ ಓದುವುದು, ಬರೆಯುವುದು, ಲೆಕ್ಕಗಳನ್ನು ಮಾಡುವುದು ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಸಿ ಆರ್ ಪಿ ವಸಂತ್ ಕುಮಾರ್ ಮಾತನಾಡಿ ಒಂದರಿಂದ ಐದನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಕಲಿಕಾ ಹಬ್ಬದಲ್ಲಿ ಮಾಡಲಾಗುವುದು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡಲು ಉತ್ತಮ ವೇದಿಕೆಯನ್ನು ನೀಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಬಹುಮಾನಗಳನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಲಾಗುತ್ತದೆ ಎಂದರು.

ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಪ್ರಕಾಶ್ ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನಮಾನಗಳನ್ನು ಗಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಫಿ ಕಾರ್ನರ್, ಸಂತೋಷದಾಯಕ ಗಣಿತ ಕಾರ್ನರ್, ಮೆಮೊರಿ ಪರೀಕ್ಷೆ,, ರಸಪ್ರಶ್ನೆ, ಪೋಷಕರು ಮತ್ತು ಮಕ್ಕಳ ಸಂಭಂದದ ವಲಯ ಕಾರ್ನರ್ ಚಟುವಟಿಕೆಗಳನ್ನು ಮಾಡಲಾಯಿತು.

ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯ ರವಿ, ಮುಖಂಡ ಚಂದ್ರಶೇಟ್ಟಿ, ಸಂಗೊಳ್ಳಿ ರಾಯಣ್ಣ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಚಿಕ್ಕೆಗೌಡ, ಮುಖ್ಯ ಶಿಕ್ಷಕರಾದ ಎಂ.ಎಸ್.ಉಮೇಶ್, ಕೃಷ್ಣೇಗೌಡ, ಸುಧಾಮಣಿ, ಶಿಕ್ಷಕರುಗಳಾದ ಎಸ್.ಕೆ.ರಮೇಶ್, ಜಲೇಂದ್ರ, ದಶರಥ, ಚಂದ್ರಶೇಖರ್, ರಾಘವೇಂದ್ರ, ಭದ್ರಯ್ಯ, ಕುಮಾರಶೆಟ್ಟಿ, ಹೇಮಂತ್, ಪ್ರದೀಪ್, ಎಲ್.ಶೃತಿ, ಕೋಮಲ, ಪಲ್ಲವಿ, ಕವಿತಾ, ಶಶಿರೇಖಾ,, ಶಿವರಂಜಿನಿ, ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಹಾಗೂ ಗ್ರಾಮಸ್ಥರುಗಳು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading