ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಖೋಖೋ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಚಿತ್ರದುರ್ಗ ಜಿಲ್ಲಾ ಖೋಖೋ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ನಿ.ಉಪಾಧ್ಯಕ್ಷ ಯತೀಶ್, ಅಶೋಕ ಕ್ಲಬ್ ಕಾರ್ಯದರ್ಶಿ ನಾರಾಯಣ ರಾವ್ ಹಾಗು ನೀವೃತ್ತ ದೈಹಿಕ ನಿರ್ದೇಶಕರಾದ ನಾಗಭೂಷಣ್, ಸಮ್ಮುಖದಲ್ಲಿ ಚಿತ್ರದುರ್ಗ ಜಿಲ್ಲಾ ಖೋಖೊ ಸಂಸ್ಥೆಗೆ 17 ಜನರ ನೂತನ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಲಾಯಿತು.

ನೂತನ ಗೌರವ ಅಧ್ಯಕ್ಷರಾಗಿ ಪಿ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷರಾಗಿ ಯುವರಾಜ್ ಪ್ರಧಾನ ಕಾರ್ಯದರ್ಶಿಯಾಗಿ ಓ.ಶ್ರೀನಿವಾಸ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹಿರಿಯೂರು ತಾಲ್ಲೂಕಿನ ರಾಮಕೃಷ್ಣ, ಚಿತ್ರದುರ್ಗದ ಮಹಮ್ಮದ್ ಹುಸೇನ್, ಎನ್ ಆರ್ ಪುರದ ನವೀನ್ ಕುಮಾರ್,ಚಳ್ಳಕೆರೆಯ ಓ.ಸಿದ್ದೇಶ್ ಅವರನ್ನು ನೇಮಿಸಲಾಯಿತು..ಜಿಲ್ಲಾ ಸಂಸ್ಥೆಯ ನೂತನ ಖಜಾಂಚಿಯಾಗಿ ಚಿತ್ರದುರ್ಗದ ಎಸ್.ಸಿದ್ದರಾಜು ಇವರನ್ನು ಒಮ್ಮತದಿಂದ ಎಲ್ಲಾ ಸದಸ್ಯರು ಘೋಷಿಸಿದ್ದು, ಸಹಕಾರ್ಯದರ್ಶಿಗಳಾಗಿ ಹಿರಿಯೂರಿನ ಶಿವುಪ್ರಸಾದ್,ಮೊಳಕಾಲ್ಮೂರಿನ ವಿನಯಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿ ಆಗಿ ಚಿತ್ರದುರ್ಗದ ಹಿರಿಯ ಕ್ರೀಡಾಪಟು, ದೈಹಿಕ ನಿರ್ದೇಶಕರಾದ ಎಸ್.ರಾಘವೇಂದ್ರ ,ಜಿಲ್ಲಾಸಮಿತಿಯ ನಿರ್ದೇಶಕರಾಗಿ ಶಿವಕುಮಾರ್,ಅಶೋಕ್, ವಿನಾಯಕ,ರಂಗನಾಥ ಸೇರಿದಂತೆ ಅಪೋಲೊ ಕ್ಲಬ್ ಓರ್ವ ಸದಸ್ಯರಿಗೆ ನಿರ್ದೇಶಕ ಸ್ಥಾನವನ್ನು ನೀಡಿ ನೇಮಕ ಮಾಡಲಾಗಿದೆ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಪಿ.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಜಿಲ್ಲಾ ಸಂಸ್ಥೆಯ ಸಲಹೆಗಾರರಾಗಿ ಹಿರಿಯ ಖೋಖೋ ಆಟಗಾರರುಹಾಗು ಪ್ರೋತ್ಸಾಹಕರಾದ ನಾರಾಯಣರಾವ್, ಅಶೋಕ್ ಅರಳಿಕಟ್ಟೆ,ಎಂ.ಎಚ್.ಜಯ್ಯಣ್ಣ,ನಾಗಭೂಷಣ್,
ಲೋಹಿತಾಶ್ವ, ಸಿವಿ ರಮೇಶ್ ಅವರನ್ನು ಸಮಿತಿ ನೇಮಿಸಿದ್ದು,ರೆಫ್ರಿ ಕನ್ವಿನರ್ ಆಗಿ ಎಂವಿ ಶ್ರೀನಿವಾಸ್,ಚೇರ್ಮನ್ ಆಗಿ ಪರಶುರಾಂಪುರ ತಿಪ್ಪೇಸ್ವಾಮಿಯವರನ್ನು ಘೋಷಿಸಲಾಯಿತು.
ಈ ವೇಳೆ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಅವರುಖೋಖೋ ಆಟ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಕ್ಲಬ್ ಗಳು ಒಟ್ಟಾಗಿಸಾಗಬೇಕು.ಇಡೀ ರಾಜ್ಹ ಚಿತ್ರದುರ್ಗ ಜಿಲ್ಲಾ ಖೋಖೋ ಅಭಿವೃದ್ಧಿ ಬಗ್ಹೆ ಮಾತನಾಡುವಂತೆ ಸಾಧಿಸಬೇಕೆಂದರು.ಅಸೋಸಿಯೇಷನ್ ಆರಂಭವಾದಾಗ ಎಲ್ಲಾ ಕ್ಲಬ್ ಗಳು ಆಟವನ್ನು ಮರೆತಿದ್ದವು.ಇಂದು ಎಲ್ಲಾ ಕ್ಲಬ್ ಗಳು ಮತ್ತೆ ಕ್ರಿಯಾಶೀಲವಾಗಿ ಜಿಲ್ಲಾ ಸಂಸ್ಥೆಯಲ್ಲಿ ಪಧಾಧಿಕಾರಿಗಳಾಗಿರುವುದು ಸಂತಸ ತಂದಿದೆ ಎಂದರು.ಇದೇ ವೇಳೆ ಪಿ.ತಿಪ್ಪೇಸ್ವಾಮಿ ಅವರು ಕ್ರೀಡಾಪಟು ಆಗಿದ್ದಾಗ ಆಂದ್ರ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಅಂದಿನ ಸಿಎಂ ಎನ್ ಟಿ ಆರ್ ಅವರು ಸೈಕಲ್ ಉಡುಗೊರೆಯಾಗಿ ನೀಡಿದ್ದನ್ನು ಹಿರಿಯರಾದ ನಾರಾಯಣ್ ರಾವ್ ಸ್ಮರಿಸಿದರು.
ಬಳಿಕ ನೂತನ ಜಿಲ್ಲಾಧ್ಯಕ್ಷಯುವರಾಜ್ ಅವರು ಖೋಖೋ ಬೆಳವಣಿಗೆಗೆ ನಿಸ್ವಾರ್ಥದಿಂದ ಶ್ರಮಿಸುತ್ತೇನೆ.ಎಲ್ಲರನ್ನೂ ಒಗ್ಗೂಡಿಸಿ ತಂಡವನ್ನು ಕಟ್ಟುತ್ತೇನೆ.ಎಲ್ಲಾ ಹಿರಿಯರು ಕೊಟ್ಟಿರುವ ಅವಕಾಶ ಬಳಸಿಕೊಂಡು ಖೋಖೋ ಆಟವನ್ನು ಉಳಿಸಲು ಸಹಕರಿಸುವುದಾಗಿತಿಳಿಸಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಹಿರಿಯರಾದ ನಾರಾಯಣರಾವ್ ಅವರು
ಜಿಲ್ಲೆಯಲ್ಲಿ ಖೋಖೋ ಬೆಳೆದು ಉಳಿಯಬೇಕು.ಯಾವ್ದೇ
ದುರುದ್ದೇಶವಿಲ್ಲದೇ ಖೋಖೋ ಅಭಿವೃದ್ಧಿಗೆ ಸ್ಪಂದಿಸಬೇಕೆಂದರು.ಬಳಿಕ ಮಾತನಾಡಿದ ಖಜಾಂಚಿ ಸಿದ್ದರಾಜು ಅವರು, ಇಡೀ ವಿಶ್ವವೇ ಖೋಖೋ ಆಟವನ್ನು ಪ್ರೀತಿಸುತ್ತಾ,ಹಲವು ಅವಕಾಶ ಖೋಖೋಗೆ ಸಿಗುತ್ತಿವೆ.ಆದರೆ ಇಂತಹ ವೇಳೆ ಚಿತ್ರದುರ್ಗ ಜಿಲ್ಲೆಯಾದ್ಯಂತ
ಖೋಖೋ ನಶಿಸುವ ಹಂತಕ್ಕೆ ತಲುಪಿದೆ.ಹೀಗಾಗಿ ಖೋಖೋಗೆ ಹಿನ್ನಡೆಯಾಗಬಾರದೆಂಬ ಉದ್ದೇಶದಿಂದ ಎಲ್ಲರು ಒಗ್ಗಟ್ಟಾಗಿ ಚಿತ್ರದುರ್ಗ ಜಿಲ್ಲಾ ಸಂಸ್ಥೆಯನ್ನು ಮುನ್ನಡೆಸಬೇಕು.ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಂಸ್ಥೆ ಸ್ಪೂರ್ತಿಯಾಗಬೇಕೆಂದರು.ಸಭೆಯಲ್ಲಿ ಹಿರಿಯ ಆಟಗಾರರಾದ ನಾಗರಾಜ್ ಸ್ವಾಗತಿಸಿದರು.ವಾಲ್ಷ್ ತಿಪ್ಪೇಸ್ವಾಮಿ ವಂದಿಸಿದರು.ಹಿರಿಯ ಖೋಖೋ ಆಟಗಾರರಾದ ರಾಮು, ವಿಶ್ವನಾಥ್,ನಾಗರಾಜ್,ಕಿರಣ್,ಟಿ.ಶಿವಣ್ಣ,
ಎಸ್.ಶ್ರೀನಿವಾಸ, ಇದ್ದರು…
About The Author
Discover more from JANADHWANI NEWS
Subscribe to get the latest posts sent to your email.