March 16, 2026
FB_IMG_1737211756334.jpg


ಹಿರಿಯೂರು :
ತಾಲೂಕಿನಲ್ಲಿ ವಾಣಿವಿಲಾಸ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದರೂ ಕೆರೆಗಳಿಗೆ ನೀರು ತುಂಬಿಸದಿರುವ ಕಾರಣ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಹಿನ್ನೆಲೆಯಲ್ಲಿ ಜನವರಿ 20 ರಸೋಮವಾರ ಹಿರಿಯೂರ್ ನಗರವನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಹಿರಿಯೂರು ತಾಲೂಕು ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ನಾಗರೀಕರು ಸ್ವಯಂ ಪ್ರೇರಣ ಬಂದ್ ಪ್ರಯುಕ್ತ ನಗರದ ಪ್ರಮುಖ ಬೀದಿಯಲ್ಲಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸುವ ಜಾಗೃತಿ ಜಾತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲೂಕಿನ ಬಹುತೇಕ ಮಣ್ಣಿನ ಕೆರೆಗಳು ಖಾಲಿಯಾಗಿವೆ, ಜವನಗೊಂಡನಹಳ್ಳಿ ಹೋಬಳಿಯಲ್ಲಿ ಆ ಭಾಗದ ಗಾಯತ್ರಿ ಜಲಾಶಯ ಹಾಗೂ 16 ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದಾಗಿ 212 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ ಕಸಬಾ ಹಾಗೂ ಐಮಂಗಳ ಹೋಬಳಿಯ 6 ಕೆರೆಗಳಿಗೂ ನೀರು ತುಂಬಿಸಬೇಕು ಎಂದು ನಿರಂತರವಾಗಿ ನಾನಾ ರೀತಿಯ ಹೋರಾಟಗಳನ್ನು ರೈತರು ಮಾಡುತ್ತಾ ಬಂದಿದ್ದಾರೆ,
ಆ ಭಾಗದಲ್ಲಿ ಅಂತರ್ಜಲ ಸಂಪೂರ್ಣ ಕುಸಿದು ಸಾವಿರಾರು ಅಡಿ ಬೋರ್ವೆಲ್ ಕೊರೆದರು ನೀರು ಬರುತ್ತಿಲ್ಲ ಬೋರ್ವೆಲ್ ಕೊರಸಿ ಕೊರಸಿ ರೈತ ತುಂಬಾ ಸಾಲಗಾರನಾಗಿದ್ದಾನೆ ರೈತನ ಬದುಕು ತುಂಬಾ ದುಃಸ್ತರ ಸ್ಥಿತಿಗೆ ತಲುಪಿದೆ ರೈತಾಪಿ ವರ್ಗ ತುಂಬಾ ಕಷ್ಟಕರ ಜೀವನ ನಡೆಸುತ್ತಿದ್ದಾರೆ ಗ್ರಾಮೀಣ ಭಾಗದ ರೈತರ ಮಕ್ಕಳು ಬಹುತೇಕ ನಗರಗಳನ್ನು ಸೇರಿಕೊಂಡು ಅವರ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಯಸ್ಸಾದ ತಂದೆ ತಾಯಿಗಳು ವೃದ್ಧರು ಅಂಗವಿಕಲರು ವಾಸ ಮಾಡುತ್ತಿದ್ದು ಅವರನ್ನು ಯಾರು ನೋಡಿಕೊಳ್ಳದ ಸ್ಥಿತಿ ನಿರ್ಮಾಣವಾಗಿದ್ದು ಅವರು ಜೀವನ ನಡೆಸುವುದೇ ತುಂಬಾ ಕಷ್ಟಕರವಾಗಿದೆ ವ್ಯವಸಾಯ ಲಾಭದಾಯಕ ಅಲ್ಲವೆಂದು ಅನೇಕ ಕುಟುಂಬಗಳು ವ್ಯವಸಾಯವನ್ನೇ ಕೈ ಬಿಟ್ಟಿದ್ದಾರೆ ಇದು ಹೀಗೆ ಮುಂದುವರೆದರೆ ಮುಂದೆ ಆಹಾರದ ಅಭಾವ ಉಂಟಾಗುತ್ತದೆ
ಇದನ್ನ ಮನಗಂಡು ಸರ್ಕಾರಕ್ಕೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರೂ ಸಹ ಸರ್ಕಾರದಿಂದ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ ಆದ್ದರಿಂದ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಹಿನ್ನೆಲೆಯಲ್ಲಿ ಹಿರಿಯೂರು ಬಂದ್ ಗೆ ಕರೆ ನೀಡಲಾಗುತ್ತಿದೆ ಎಂಬುದಾಗಿ ಅವರು ತಿಳಿಸಿದರಲ್ಲದೆ,
ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಗರದ ಗಾಂಧಿವೃತ್ತದ ಕಣಿವೆಮಾರಮ್ಮ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಆದ್ದರಿಂದ ತಾವುಗಳು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿಕೊಂಡು ನಮ್ಮೊಂದಿಗೆ ಕೈಜೋಡಿಸಬೇಕಾಗಿ ವಿನಂತಿಸಿದರಲ್ಲದೆ,
ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಆಟೋ ಚಾಲಕರು ಬಸ್ ಮಾಲೀಕರು ಟ್ಯಾಕ್ಸಿ ಚಾಲಕರು ಬೀದಿ ಬದಿ ವ್ಯಾಪಾರಸ್ಥರು ಎಲ್ಲಾ ಕಾರ್ಮಿಕ ಸಂಘಟನೆ ಮಹಿಳಾ ಸಂಘಟನೆಗಳು ಹಮಾಲರ ಸಂಘಟನೆ, ದಲಿತ ಪರ, ಕನ್ನಡಪರ, ರೈತಪರ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ಈ ಬಂದ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ರೈತಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಮಲ್ಲಿಕಾರ್ಜುನ, ಸಣ್ಣತಿಮ್ಮಣ್ಣ, ಬಸವರೆಡ್ಡಿ, ನಿಜಲಿಂಗಪ್ಪ, ನಾಗರಾಜಪ್ಪ, ರವಿಕುಮಾರ್, ಪ್ರಸನ್ನ ಹಳ್ಳಿಕೇರಿ, ತಿಪ್ಪೇಸ್ವಾಮಿ, ತಿಮ್ಮರೆಡ್ಡಿ, ರಂಗಸ್ವಾಮಿ, ಈರಣ್ಣ, ಚಿಕ್ಕಣ್ಣ, ಶಿವಣ್ಣ, ವಿರುಪಾಕ್ಷ, ನಿಂಗಪ್ಪ, ಚಿತ್ರಲಿಂಗಪ್ಪ, ಕರಿಯಪ್ಪ, ಮಂಜುನಾಥ್, ಬಾಲಕೃಷ್ಣ, ರಾಮಕೃಷ್ಣ, ರಾಜಣ್ಣ, ರಮೇಶ್, ತಿಪ್ಪೇಸ್ವಾಮಿ, ಗೋವಿಂದಪ್ಪ, ಸುರೇಶ್, ಮಾಲಿಂಗಪ್ಪ, ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading