ಪರಶುರಾಂಪುರ ಜ.18
ದಾರ್ಶನಿಕರ ಪ್ರತಿಮೆ, ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಟಾಪಿಸುದಲ್ಲ ಬದಲಾಗಿ ಅವರ ತತ್ವಾದರ್ಶಗಳನ್ನು ನಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಜಗದ್ಘುರು ಶ್ರೀ ಶ್ರೀ ನಿರಂಜನಂದಪುರಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು
ಸಮೀಪದ ಪಿ ಓಬನಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮದ ಶ್ರೀ ಕನಕ ಯುವಕ ಸಂಘ (ರಿ) ಗ್ರಾಮದ ಕುರುಬ ಸಮುದಾಯ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದರು
ಸಾರ್ವಜನಿಕರು ಶರಣರ ದಾರ್ಶನಿಕರ ಹೆಸರಲ್ಲಿ ಮೋಜು ಮಸ್ತಿ ಮಾಡಬಾರದು ಬದಲಾಗಿ ಜಯಂತ್ಯುತ್ಸವಗಳಲ್ಲಿ ನಮ್ಮ ದೇಶದ ಪರಂಪರೆಯನ್ನು ಸಾರುವ ಜನಪದ ಕಲೆ ಸಾಹಿತ್ಯ ಪ್ರದರ್ಶನವಾಗಬೇಕು ಎಂದರು
ಸಮುದಾಯದ ಜನರಲ್ಲಿ ಸಂಘರ್ಷಗಳಿಗೆ ಕಾರಣವಾಗುವ ಪ್ರತಿಮೆ ಮೂರ್ತಿ ಅನಾವರಣವನ್ನು ಜನರು ಕೈಬಿಟ್ಟು ಶಿಕ್ಷಣ ಆರೋಗ್ಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದರು ಶೋಷಿತ, ದಲಿತ ಸಮುದಾಯದವರು ಅಂಬೇಡ್ಕರರ ತತ್ವಾದರ್ಶಗಳನ್ನು ಜೀವಿತದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮುಖ್ಯವಾಹಿನಿಗೆ ಬರಲಿಕ್ಕೆ ಸಾಧ್ಯ ಎಂದರು
ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ನಿಕಟಪೂರ್ವ ಅಧ್ಯಕ್ಷ ಟಿ ತಿಪ್ಪೇಸ್ವಾಮಿ ಮಾತನಾಡಿ ಗ್ರಾಮದ ಸರ್ಕಾರಿ ಶಾಲೆ ಅಭಿವೃಧ್ದಿ ಜತೆಗೆ ಗ್ರಾಮಕ್ಕೆ ಮೂಲ ಸೌಕರ್ಯಗಳ ಕಲ್ಪಿಸಲು ಶಾಸಕರ ಮೇಲೆ ಒತ್ತಡ ತರಲಾಗುವುದು ಕನಕದಾಸರ ನಿಸ್ವಾರ್ಥ ಬದುಕನ್ನು ನಾವು ಅರಿತುಕೊಳ್ಳಬೇಕು ಎಂದರು ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಮಾತನಾಡಿ ಜಯಂತಿಯ ವೇಳೆ ಪ್ರತಿಭಾವಂತರನ್ನು ಪುರಸ್ಕರಿಸಬೇಕು ಕನಕರಂತೆ ನಾವೂ ಕೂಡ ನಾನತ್ವವನ್ನು ತೊರೆಯಬೇಕು ಎಂದರು
ನಿವೃತ್ತ ಪ್ರಾಚಾರ್ಯ ಎಂ ಶಿವಲಿಂಗಪ್ಪ ಕನಕ ಜಯಂತ್ಯುತ್ಸವ ಕುರಿತು ಉಪನ್ಯಾಸ ನೀಡಿ ಸಮುದಾಯದ ಪ್ರತಿಭಾವಂತರ ಉನ್ನತ ಶಿಕ್ಷಣಕ್ಕೆ ಧನ ಸಹಾಯ ನೀಡಲು ಮುಂದೆ ಬರಬೇಕು ಎಂದರು
ನಿವೃತ್ತ ಡಿಡಿಪಿಐ ಜಿ ನಾಗೇಂದ್ರಪ್ಪ ಮಾತನಾಡಿ ಹಳ್ಳಿಗಾಡಿನ ಶಾಲೆ ಕಾಲೇಜುಗಳನ್ನು ಅಭಿವೃಧ್ದಿ ಪಡಿಸಲು ಸಮುದಾಯದ ಜನರು ಮುಂದೆ ಬರಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮುದಾಯದ ಮುಖಂಡ ತಿಮ್ಮಣ್ಣ ವಹಿಸಿ ಮಾತನಾಡಿದರು ಇದೇ ವೇಳೆ ಗ್ರಾಮದಲ್ಲಿ ಕನಕದಾಸರ ಭಾವಚಿತ್ರವನ್ನು ಸಾರೋಟಿನಲ್ಲಿ ಪ್ರತಿಷ್ಟಾಪಿಸಿ ವಿವಿಧ ಜನಪದ ಕಲಾತಂಡಗಳ ಮೂಲಕ ಮೆರವಣಿಗೆ ಕೈಗೊಂಡು ಶನಿವಾರ ರಾತ್ರಿ ವಿವಿಧ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮ ಕೈಗೊಂಡರು
ಸಂದರ್ಭದಲ್ಲಿ ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಟಿ ತಿಪ್ಪೇಸ್ವಾಮಿ, ಪಿಆರ್‌ಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಿ ಟಿ ಶಶಿಧರ, ಆರ್ ಮಲ್ಲೇಶಪ್ಪ, ರೇವಣ್ಣ, ಬೈಲಮ್ಮ, ರತ್ನಪ್ಪ, ಬಸವರಾಜು, ಹೊನ್ನೂರಪ್ಪ, ಸೋಮಲಿಂಗಪ್ಪ, ಪಾಪಣ್ಣ, ಪೂ ತಿಪ್ಪೇಸ್ವಾಮಿ, ರಾಮಕೃಷ್ಣಪ್ಪ, ಮಹಾಂತೇಶ, ಬಿ ನಾಗರಾಜು, ಪಿಯು ಕಾಲೇಜು ಉಪನ್ಯಾಸಕರ ನಿಕಟಪೂರ್ವ ಅಧ್ಯಕ್ಷ ಲಕ್ಷö್ಮಣ, ಪರಶುರಾಮಪ್ಪ, ಶಿವಣ್ಣ, ನಾಗೇಂದ್ರಪ್ಪ, ನಾಗಪ್ಪ, ಶಂಕರಪ್ಪ, ದೊಡ್ಡಮಾಳಪ್ಪ, ಗ್ರಾಮ ಹಾಗೂ ಓಂಕಾರನಗರದ ಗ್ರಾಮಸ್ಥರು ಸುತ್ತಲಿನ ಗ್ರಾಮಗಳ ಕುರುಬ ಸಮುದಾಯದವರು ಗ್ರಾಮಸ್ಥರು ಇದ್ದರು
(ಪೋಟೋ ಪಿಆರ್‌ಪುರ ಕಾಗಿನೆಲೆ ಸ್ವಾಮಿ ೧೮)
ಪರಶುರಾಮಪುರ ಸಮೀಪದ ಪಿ ಓಬನಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮದ ಶ್ರೀ ಕನಕ ಯುವಕ ಸಂಘ (ರಿ) ಗ್ರಾಮದ ಕುರುಬ ಸಮುದಾಯ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಜಗದ್ಘುರು ಶ್ರೀ ಶ್ರೀ ನಿರಂಜನಾAದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು



About The Author
Discover more from JANADHWANI NEWS
Subscribe to get the latest posts sent to your email.