March 18, 2026
FB_IMG_1737207136872.jpg


ಹಿರಿಯೂರು:
ದಕ್ಷಿಣ ಕಾಶಿ ಎಂದು ಪ್ರಸಿದ್ದವಾಗಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ತಹಶೀಲ್ದಾರ್ ರಾಜೇಶ್ ಕುಮಾರ್ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ನಾಗೇಂದ್ರನಾಯ್ಕ್ ರವರನ್ನು ಆಯ್ಕೆ ಮಾಡಲಾಯಿತು.

ಇದೇ ಫೆಬ್ರವರಿ 3ರಂದು ಕಂಕಣಕಲ್ಯಾಣೋತ್ಸವ, 4ರಂದು ಮಂಟಪೋತ್ಸವ, 5 ರಂದು ಗಿಳಿವಾಹನೋತ್ಸವ, 6 ರಂದು ಗಂಡಭೇರುಂಡ ವಾಹನೋತ್ಸವ, 7 ರಂದು ನವಿಲು ವಾಹನೋತ್ಸವ, 8ರಂದು ಸಿಂಹ ವಾಹನೋತ್ಸವ, 9ರಂದು ನಂದಿ ವಾಹನೋತ್ಸವ , 10ರಂದು ಸರ್ಪ ವಾಹನೋತ್ಸವ, 11 ಗಜವಾಹನೋತ್ಸವ, 12 ರಂದು ಬಸವಉತ್ಸವ, ಅಲ್ಲದೆ,
ಫೆಬ್ರವರಿ 13ರಂದು ಗುರುವಾರ ಮಧ್ಯಾಹ್ನ 12.00 ಗಂಟೆಗೆ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ಸಂಜೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ರಥೋತ್ಸವ ನಡೆಸಲಾಗುವುದು ಎಂಬುದಾಗಿ ತಹಶೀಲ್ದಾರ್ ರಾಜೇಶ್ ಕುಮಾರ್ ಸಭೆಗೆ ತಿಳಿಸಿದರು.
ಈ ಬಾರಿ ವಾಣಿವಿಲಾಸ ಸಾಗರ ಕೋಡಿ ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಅತ್ಯಂತ ಸಂಭ್ರಮದಿಂದ ಶ್ರೀತೇರುಮಲ್ಲೇಶ್ವರ ಸ್ವಾಮಿಯ ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಸಚಿವ ಡಿ.ಸುಧಾಕರ್ ರವರು ಸೂಚಿಸಿದ್ದಾರೆ ಎಂಬುದಾಗಿ ಅವರು ಹೇಳಿದರು.
ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಆರ್.ನಾಗೇಂದ್ರನಾಯ್ಕ್ ರವರು ಮಾತನಾಡಿ ದೇವಸ್ಥಾನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿವೆ. ರಂಗಮಂದಿರ ನಿರ್ಮಾಣ ಹಾಗೂ ಎರಡು ಮತ್ತು ಮೂರನೇಯ ತೇರುಗಳು ಹೊಸದಾಗಿ ನಿರ್ಮಿಸಬೇಕಾಗಿದೆ.
ದೇವಾಲಯಕ್ಕೆ ಸಿಬ್ಬಂದಿಗಳನ್ನು ನೇಮಿಸುವುದು ಮತ್ತು ಕಚೇರಿ ನಿರ್ಮಾಣ ಭಕ್ತರಿಗೆ ತಂಗಲು ವ್ಯವಸ್ಥೆ , ಅಡಿಗೆ ಕೋಣೆ ನಿರ್ಮಾಣ ಮತ್ತು ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಯೋಜನೆಯಿದ್ದು ಎಲ್ಲರೂ ಸಹಕಾರ ನೀಡಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಅಜಯ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರ ಹೆಚ್.ಎಸ್ .ಅನಿಲ್ ಕುಮಾರ್, ಮುಖಂಡರುಗಳಾದ ಜಿ.ಎಲ್.ಮೂರ್ತಿ, ದಿವುಶಂಕರ್, ರವೀಂದ್ರನಾಥ್, ಮಾಲತೇಶ್ ಅರಸ್, ಎನ್.ಬಸವರಾಜ್, ಜಗದೀಶ್ ಭಂಡಾರಿ, ಬೋಜಣ್ಣ, ಸತ್ಯನಾರಾಯಣಮೂರ್ತಿ, ಪ್ರಸನ್ನಕುಮಾರ್ ಜೋಯಿಸ್, ವಿಶ್ವನಾಥ್ ಆಚಾರ್ಯ ಮತ್ತು ಕೈವಾಡಸ್ಥರು, ಡಾ.ವೆಂಕಟೇಶ್, ಅಶೋಕ್, ಎಂ.ಪಿ.ರಾಜು, ವಿನೋದ್, ಕೃಷ್ಣ, ವೀರಣ್ಣ, ಪಿ.ಎಸ್.ಐ.ಲಕ್ಷ್ಮೀನಾರಾಯಣ್, ತಾಲ್ಲೂಕು ಕಚೇರಿ ಸಿಬ್ಬಂದಿ ಸ್ವಾಮಿ, ಚನ್ನಬಸವರಾಜು, ರಾಜು, ದಾಸೇಗೌಡ್ರು, ಚಿಕ್ಕಳ್ಳಿನಾಯಕ, ವಲಯ ಅರಣ್ಯ ಅಧಿಕಾರಿ ಶಶಿಧರ್, ಅಗ್ನಿಶಾಮಕ ಅಧಿಕಾರಿ ಸುಬಾನ್, ಅನೇಕ ಯುವಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading