January 29, 2026
FB_IMG_1737201392139.jpg


ಚಿತ್ರದುರ್ಗ ಜ.18:
ಸಂಪೂರ್ಣ ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತçಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಸಂಧ್ಯಾ ಕಾಲದ ಬಡ ರೋಗಿಗಳಿಗೆ ಇದು ವರದಾನವಾಗಲಿದ್ದು, ಅರ್ಹ ಬಿ.ಪಿ.ಎಲ್ ಕಾರ್ಡುದಾರಿಗೆ ಎ.ಬಿ.ಆರ್.ಕೆ ಅಡಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಈ ಕುರಿತು ಶನಿವಾರ ಜಿಲ್ಲಾ ಆಸ್ಪತ್ರೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಯಸ್ಸಾದಂತೆ ಹಲವು ಜನರಲ್ಲಿ ಸೊಂಟ ಹಾಗೂ ಮೊಣಕಾಲು ಸವೆತ ಉಂಟಾಗುತ್ತದೆ. ಇದರಿಂದ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ನಡೆಯಲು ಸಹ ಕಷ್ಟ ಪಡುವವರು, ಶಸ್ತçಚಿಕಿತ್ಸೆಯ ನಂತರ ಸಹಜವಾಗಿ ಓಡಾಟ ನಡೆಸಬಹುದು. ಸೊಂಟ,ಮೊಣಕಾಲು ಜೊತೆ ಬೆನ್ನುಹುರಿ ಶಸ್ತçಚಿಕಿತ್ಸೆಯನ್ನು ಸಹ ಜಿಲ್ಲಾ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುವುದು. ಪ್ರತಿ ಶನಿವಾರ ಅಥವಾ ಸೋಮವಾರದಂದು ನುರಿತ ತಜ್ಞರು ಶಸ್ತçಚಿಕಿತ್ಸಕೆ ನಡೆಸಲಿದ್ದಾರೆ. ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತçಚಿಕಿತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ರೂ.5 ರಿಂದ 6 ಲಕ್ಷದವರೆಗೂ ವೆಚ್ಚವಾಗುತ್ತದೆ. ಅದರೆ ಜಿಲ್ಲಾ ಆಸ್ಪತ್ರೆಯಲ್ಲಿ ಇನ್‌ಪ್ಲಾಂಟ್ಸ್ ಸಹಿತ ಬಿ.ಪಿ.ಎಲ್ ಕಾರ್ಡುದಾರಿಗೆ ಎ.ಬಿ.ಆರ್.ಕೆ ಅಡಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ಡಾ.ಎಸ್.ಪಿ.ರವೀಂದ್ರ ತಿಳಿಸಿದರು.
ಬೆಂಗಳೂರಿನ ಪ್ರಖ್ಯಾತ ಕೀಳುಮೂಳೆ ತಜ್ಞ ಡಾ.ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸದ್ಯ ಇಬ್ಬರು ರೋಗಿಗಳಿಗೆ ಟೋಟಲ್ ಹಿಪ್ ರೀಪ್ಲೇಸಮೆಂಟ್(ಟಿ.ಹೆಚ್.ಆರ್) ಶಸ್ತ್ರ ಚಿಕಿತ್ಸೆ ಕೈಗೊಳ್ಳಲು ತಯಾರಿ ನಡೆಸಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಆಪರೇಷನ್ ಥೆಯಟರ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಪ್ರತಿ ತಿಂಗಳು 100 ರಿಂದ 150 ಮೂಳೆ ಸಂಬAಧಿಸಿದ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗುತ್ತಿದೆ ಎಂದು ಕೀಳುಮೂಳೆ ವಿಭಾಗದ ತಜ್ಞವೈದ್ಯ ಡಾ.ಎಸ್.ಪಿ.ದಿನೇಶ್ ಮಾಹಿತಿ ನೀಡಿದರು. ಇವರೊಂದಿಗೆ ಜಿಲ್ಲಾಸ್ಪತ್ರೆಯ ಕೀಳುಮೂಳೆ ವಿಭಾಗದ ವೈದ್ಯರುಗಳಾದ ಡಾ.ಶ್ರೀಧರ್ ಹಾಗೂ ಡಾ.ಬಸವರಾಜ್ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರೂ.114 ಕೋಟಿ ಅನುದಾನದಲ್ಲಿ 180 ಬೆಡ್ ಆಸ್ಪತ್ರೆ ನಿರ್ಮಾಣ:ಜಿಲ್ಲಾ ಆಸ್ಪತ್ರೆ ಅವರಣದಲ್ಲಿ ಕೆ.ಎಂ.ಇ.ಆರ್.ಸಿ(ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ) ಅಡಿ ರೂ.114 ಕೋಟಿ ಅನುದಾನದಲ್ಲಿ 180 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ರೂ.114 ಕೋಟಿ ಅನುದಾನದಲ್ಲಿ ರೂ.90 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ, ರೂ.7 ಕೋಟಿ ವೆಚ್ಚದಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿ ಮಾಡಲಾಗುವುದು. ರೂ.7 ಕೋಟಿ ಅನುದಾನವನ್ನು ಎರೆಡು ವರ್ಷಗಳ ಮಾನವ ಸಂಪನ್ಮೂಲದ ವೇತನಕ್ಕಾಗಿ ಮೀಸಲು ಇರಿಸಲಾಗುವುದು. ರೂ.5 ಕೋಟಿ ವೆಚ್ಚದಲ್ಲಿ ಹಳೆಯ ಆಸ್ಪತ್ರೆ ಕಟ್ಟಡ ನವೀಕರಣ ಕಾಮಗಾರಿ ಕೈಗೊಳ್ಳಾಗುವುದು ಎಂದು ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
ರೂ.1.10 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಲ್ಯಾಬರೋಟರಿ ನಿರ್ಮಾಣ:
ಕೇಂದ್ರ ಸರ್ಕಾರ ಪಿ.ಎಂ.ಅಬೀಮ್(Pradhan Mantri Ayushman Bharat Health Infrastructure Mission) ಯೋಜನಯಡಿ ರೂ.1.10 ಕೋಟಿ ಅನುದಾನದಲ್ಲಿ ಜಿಲ್ಲಾ ಸಮಗ್ರ ಸಾರ್ವಜನಿಕ ಆರೋಗ್ಯ ಪರೀಕ್ಷಾ ಪ್ರಯೋಗಾಲಯ(District integrated public health laboratory) ಸ್ಥಾಪಿಸಲಾಗುವುದು. ಇದರಿಂದ ಎಲ್ಲಾ ರೀತಿ ವೈದ್ಯಕೀಯ ಪರೀಕ್ಷೆಗಳನ್ನು ಒಂದೇ ಸೂರಿನಡಿ ಸಾರ್ವಜನಿಕರಿಗೆ ಲಭಿಸಲಿವೆ. ಜನರು ವಿವಿಧ ಪರೀಕ್ಷೆಗಳಿಗಾಗಿ ಅಲೆದಾಡುವುದು ತಪ್ಪಲಿದೆ. ಜಿಲ್ಲಾಸ್ಪತೆಯ ಹಳೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಎರಡನೇ ಮಹಡಿಯಲ್ಲಿ ಶೀಘ್ರದಲ್ಲೇ ಇಂಟಿಗ್ರೇಟೆಡ್ ಲ್ಯಾಬರೋಟರಿ ಕಾರ್ಯನಿರ್ವಹಿಸಲಿದೆ ಎಂದು ಡಾ.ಎಸ್.ಪಿ.ರವೀಂದ್ರ ತಿಳಿಸಿದರು.
ಕಿಮೋಥೆರಪಿ ಘಟಕ ಆರಂಭ :ಕ್ಯಾನ್ಸರ್‌ಗೆ ಒಳಗಾದ ರೋಗಿಗಳಿಗೆ ಕಿಮೋಥೆರಪಿ ನೀಡಲು ಅನುಕೂಲವಾಗುವಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಶೀಘ್ರವೇ ಕಿಮೋಥೆರಪಿ ಘಟಕ ಕಾರ್ಯಾರಂಭ ಮಾಡಲಿದೆ. ನಿಮ್ಹಾಸ್ ಸಹಯೋಗದಲ್ಲಿ ಕರ್ನಾಟಕ ಬ್ರೆöÊನ್ ಹೆಲ್ತ್ ಇನ್ಸಿಯೇಟ್ (ಕಬಿ) ಕಾರ್ಯಕ್ರಮ ಜಿಲ್ಲಾ ಆಸ್ಪತ್ರೆಯಲ್ಲಿ ಶುರು ಮಾಡಲಾಗಿದೆ. ಪ್ರತಿ ಶುಕ್ರವಾರ ನಿಮ್ಹಾಸ್ ನರರೋಗ ತಜ್ಞ ಡಾ.ಕಿರಣ್‌ಗೌಡ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವರು. ದಾವರಣಗೆರೆ ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ಸೋಮವಾರ ಹಾಗೂ ಶುಕ್ರವಾರ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಇಂಡಿಯಾ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಪ್ರತಿ ಗುರುವಾರ ಹೃದಯ ರೋಗಿಗಳ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ಹಾಗೂ ಎಂಆರ್‌ಐ ಸ್ಕಾö್ಯನಿಂಗ್ ವಿಭಾಗದ ಕಾರ್ಯಕ್ಷಮತೆ ಹೆಚ್ಚಾಗಿದ್ದು, ದಾವಣಗೆರೆ, ವಿಜಯನಗರ, ಹಾವೇರಿ ಜಿಲ್ಲೆಗಳಿಂದಲೂ ರೋಗಿಗಳು ತಪಾಸಣೆ ಆಗಮಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಹಲವಾರು ಸುಧಾರಣೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಉತ್ತಮ ಸೇವೆ ನೀಡಲಾಗುತ್ತಿದೆ. ರೋಗಿಗಳು ಆಸ್ಪತ್ರೆಗೆ ಆಗಮಿಸುವಾಗ ತಪ್ಪದೇ ಆಧಾರ್ ಹಾಗೂ ಪಡಿತರ ಚೀಟಿಯನ್ನು ತರಬೇಕು. ಆಸ್ಪತ್ರೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಹಣವನ್ನು ನೀಡಬಾರದು. ಸಂದರ್ಶನದ ಅವಧಿಯಲ್ಲಿಯೇ ಒಳರೋಗಿಗಳನ್ನು ಭೇಟಿ ಮಾಡಬೇಕು. ವಾಹನಗಳನ್ನು ನಿಗಧಿತ ಪಾರ್ಕಿಂಗ್‌ಗಳಲ್ಲಿ ನಿಲುಗಡೆ ಮಾಡಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಡಾ.ಎಸ್.ಪಿ.ರವೀಂದ್ರ ಸಾರ್ವಜನಿಕರಿಗೆ ಮನವಿ ಮಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading