January 29, 2026
IMG-20250118-WA0154.jpg

ನಾಯಕನಹಟ್ಟಿ:: ಜ.18. ನಾಯಕನಹಟ್ಟಿ ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದ ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ. ನೂತನ ಆಡಳಿತ ಮಂಡಳಿ ನಿರ್ದೇಶಕರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ಜಿ .ತಿಪ್ಪೇಸ್ವಾಮಿ , ಇವರು ಹೆಚ್ಚಿನ 9.ಮತ ಪಡೆದು ಆಯ್ಕೆ ಆಗಿರುತ್ತಾರೆ.

ಇನ್ನೂ ಸಂಘದ ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಬಿನ್ ಚಿನ್ನೋಬಯ್ಯ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಚುನಾವಣೆಯಲ್ಲಿ ಒಟ್ಟು 13 ಜನ ನಿರ್ದೇಶಕರು ಮತ ಚಲಾಯಿಸಿರುತ್ತಾರೆ. ಎಂದು ಚುನಾವಣಾ ಅಧಿಕಾರಿ ಬಷೀರ್ ಖಾನ್ ತಿಳಿಸಿದರು.

ತಾಯಮ್ಮ ಕೋಂ ಸೂರಯ್ಯ ಇವರು ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು ಚುನಾವಣೆಯಲ್ಲಿ ನಾಲ್ಕು ಮತಗಳನ್ನು ಪಡೆದು ಪರಭವಗೊಂಡರು. ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ ತಿಪ್ಪೇಸ್ವಾಮಿ .9 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.

ಇದೆ ವೇಳೆ ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಜಿ. ತಿಪ್ಪೇಸ್ವಾಮಿ ಮಾತನಾಡಿದರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ನಿರ್ದೇಶಕರ ಸಹಕಾರದೊಂದಿಗೆ ಮುಂದಿನ ದಿನದಲ್ಲಿ ಸಂಘವನ್ನು ಅಭಿವೃದ್ಧಿ ಪದದತ್ತ ಕೊಂಡೊಯ್ಯಲು ಶ್ರಮಿಸುತ್ತೇನೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಿರ್ದೇಶಕರು ಹಾಗೂ ಸಹಕಾರ ನೀಡಿದ 8 ಹಳ್ಳಿಯ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು

ಇದೇ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸಿ.ಪಿ. ಮಹೇಶ್ ಕುಮಾರ್,ಗಿಡ್ಡೋಬಯ್ಯ, ಎಸ್.ಟಿ. ತಿಪ್ಪೇಸ್ವಾಮಿ, ಗುಂತಕೋಲಮ್ಮನಹಳ್ಳಿ ಸಿದ್ದಲಿಂಗಪ್ಪ, ಎಸ್. ಟಿ. ರಾಜಣ್ಣ, ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಿ ಬೋರಯ್ಯ, ಮುಖಂಡರಾದ ಜಿ.ವಿ. ಕರಿಯಣ್ಣ, ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶೈಲ ಮಂಜಣ್ಣ, ಉಪಾಧ್ಯಕ್ಷ ಎಂ. ತಿಪ್ಪೇಸ್ವಾಮಿ ರಾಮಸಾಗರ, ಎಲಿಯಾರ್ ತಿಪ್ಪೇಸ್ವಾಮಿ, ಜಂಬಯ್ಯನಹಟ್ಟಿ ರವಿಕುಮಾರ್, ಗಜ್ಜುಗಾನಹಳ್ಳಿ ಟಿ. ಶಂಕರ್ ಮೂರ್ತಿ, ಜಿ.ಎಸ್‌ ತಿಪ್ಪೇಸ್ವಾಮಿ, ರಾಮಸಾಗರ ಪಿ.ಪಿ. ಮಹಾಂತೇಶ್, ಸಣ್ಣ ಪಾಲಯ್ಯ, ಟಿ. ಸಣ್ಣ ತಿಪ್ಪಯ್ಯ, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಪಾಲಮ್ಮ ಜಿ. ಬೋರಯ್ಯ , ಓಬಯ್ಯನಹಟ್ಟಿ ಮಹದೇವಣ್ಣ, ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳಾದ ಟಿ .ಪ್ರದೀಪ್, ಎಂ ಪರ್ವತಯ್ಯ, ಸೇರಿದಂತೆ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್, ಸಿಬ್ಬಂದಿಗಳಾದ ಎಎಸ್ಐ ತಿಪ್ಪೇಸ್ವಾಮಿ, ಅಣ್ಣಪ್ಪನಾಯ್ಕ, ತಿಮ್ಮಪ್ಪಯ್ಯನಹಳ್ಳಿ ಹಟ್ಟಿ ಯಜಮಾನರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading