ಚಳ್ಳಕೆರೆ ಜ.18
ಶಿಥಿಲಾವಸ್ಥೆಯಲ್ಲಿರುವ ನಗರಸಭೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆದಾರರಿಂದ ಖಾಲಿ ಮಾಡಿಸಿ ನೂತನವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವಂತೆ ಕರ್ನಾಟಕ ರಕ್ಷಣಾ – ವೇಧಿಕೆ ಪ್ರವೀಣ್ ಶೆಟ್ಟಿಬಣ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿರುವ ನಗರಸಭೆ ಮಳಿಗೆಗಳು ಕೆಲವೇ ಕೆಲವು ಶ್ರೀಮಂತರ ವಶದಲ್ಲಿದ್ದು ಸುಮಾರು ವರ್ಷಗಳಿಂದ ಮಳಿಗೆಗಳನ್ನು ತಮ್ಮ ಸ್ವಂತ ಅನುಭವದಲ್ಲಿಟ್ಟುಕೊಂಡು ತಮ್ಮ ಸ್ವಂತ ಆಸ್ತಿಯಂತೆ
ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಗರಸಭೆಯ ಆದಾಯ ಗಣನೀಯವಾಗಿ ಕುಸಿದಿದೆ.
ಇದರಿಂದ ನಗರದ ಅಭಿವೃದ್ಧಿಗೆ ತುಂಬಾ ತೊಂದರೆಯಾಗಿದೆ. ನಗರಸಭೆಯ ವಾಣಿಜ್ಯ ಮಳಿಗೆಗಳಿಂದ
ಸರಿಯಾದ ಬಾಡಿಗೆ ಸಿಕ್ಕರೆ ಅದನ್ನು ನಗರದ ಅಭಿವೃದ್ಧಿಗೆ ಬಳಸಬಹುದು.
ವಾಣಿಜ್ಯ ಮಳಿಗೆಗಳ ಬಗ್ಗೆ ನಗರಸಭಾ
ಅಧಿಕಾರಿಗಳು ಯಾವುದೇ ಲಾಭಿಗೆ ಮತ್ತು ಒತ್ತಡಕ್ಕೆ ಒಳಗಾಗದೆ ಆದಷ್ಟು ಬೇಗ ಖಾಲಿ ಮಾಡಿಸಿ
ನೂತನ ಸೂಪರ್ ಕಾಂಪ್ಲೆಕ್ಸ್ (ವಾಣಿಜ್ಯ ಮಳಿಗೆಗಳನ್ನು) ನಿರ್ಮಾಣ ಮಾಡಿ ಅವುಗಳನ್ನು ಅರ್ಹರಿಗೆ
ಬಾಡಿಗೆ ನೀಡುವ ಮೂಲಕ ನಗರದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವಂತೆ ಕರ್ನಾಟಕ ರಕ್ಷಣಾ – ವೇಧಿಕೆ ಪ್ರವೀಣ್ ಶೆಟ್ಟಿ ಒತ್ತಾಯಿಸಿ ಮನವಿ ನೀಡಿದ್ದಾರೆ.
ಕರವೇ ಬೋಜರಾಜ್.ಮುರಳಿ.ಚಂದ್ರಣ್ಣ.ವಿ.ಂಮಜುನಾಥ್ .ರಾಷ್ಟ್ರಪಕ್ಷ ಸಮಿತಿ ಮಹೇಶ್.ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.