ಚಳ್ಳಕೆರೆ ಜ.
ಒಂದೆಡೆ ಕೃಷಿ ಇಲಾಖೆ ಅನೇಕ ಆಧುನಿಕ ಕೃಷಿ ಯಂತ್ರಗಳ ಬಳಕೆಗೆ ಮನವಿ ಮಾಡುತ್ತಲೇ ಇದೆ. ಇನ್ನೊಂದೆಡೆ ರೈತರು ಬೆಳೆದ ಉತ್ಪನ್ನಗಳ ರಸ್ತೆಗಳಿಗೆ ತಂದು ಸುರಿದು ಒಕ್ಕಲುತನಕ್ಕೆ ಮುಂದಾಗುತ್ತಿದ್ದಾರೆ. ಈ ರಸ್ತೆ ಮೇಲಿನ ಒಕ್ಕಲು ವಾಹನ ಸವಾರರ ನಡೆಗೆ ಸವಾಲು ಒಡ್ಡುತ್ತಿದೆ..!
ಹೌದು ತಾಲೂಕಿನಬಹುತೇಕ ಗ್ರಾಮಗಳಲ್ಲಿರಸ್ತೆಯ ಮೇಲೆ ಹುರುಳಿ. ತೊಗರಿ ಬೆಳೆ ಹಾಕಿ ವಾಹನಗಳ ಸಂಚಾರಕ್ಕೆ ಕಿರಿಕಿರಿಯಾದರೆ ಇತ್ತ ತಾಲೂಕಿನ ಚನ್ನಮ್ಮ ನಾಗತಿಹಳ್ಳಿ ಗ್ರಾಮದ ಸುಪ್ರಸಿದ್ದ ಶ್ರೀ ಆಂಜನೇಯ ದೇವಸ್ಥಾನ ಆವರದಲ್ಲಿ ಮೆಕ್ಕೆ ಜೋಳ .ತೊಗರಿ ಸೇರಿದಂತೆ ವಿವಿಧ ದವಸ ಧಾನ್ಯಗಳನ್ನು ಹಾಕಿ ಒಣಗಿಸುತ್ತಿರುವುದರಿಂದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಿರಿಕಿರಿಯಾಗುತ್ತಿದೆ.
ಗ್ರಾಮದಕದಲ್ಲಿ ಸರಕಾರಿ ಜಾಗವಿದ್ದು ನರೇಗಾ ಯೋಜನೆ ಅಥವಾ ಯಾವುದೇ ಯೋಜನೆಯಡಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಒಕ್ಕಲು ಕಣ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.








About The Author
Discover more from JANADHWANI NEWS
Subscribe to get the latest posts sent to your email.