December 15, 2025
Screenshot_20241217_162457.png

ಚಳ್ಳಕೆರೆ ಡಿ.17.  ಸರಕಾರಿ ಶಾಲೆಗೆಸೇರಿದ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದು,ಸದರಿ ಖಾತೆಯನ್ನು ರದ್ದುಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹೌದು ಚಳ್ಳಕೆರೆ
ತಾಲ್ಲೂಕಿನ ಸೋದುಗುದ್ದು ಗ್ರಾಮದ ಹಳೆಯ ಶಾಲೆ ಸ್ವತಂತ್ರ ಪೂರ್ವದಲ್ಲಿ 1932 ರಲ್ಲಿ ಸ್ಥಾಪನೆಗೊಂಡು
ನಿರಂತರವಾಗಿ ಮಕ್ಕಳಿಗೆ ಅಕ್ಷರಜ್ಞಾನ ನೀಡಿದ ಸರಕಾರಿ ಶಾಲಾ
ಶಿಥಿಲಾವಸ್ಥೆಗೆ ತಲುಪಿತ್ತು. ಶಿಥಿಲವಾದ ಕಟ್ಟಡವನ್ನು ನೆಲಸಮ ಮಾಡಿದ ನಂತರ ಮುಖ್ಯ ರಸ್ತೆಯಲ್ಲಿರುವ ಶಾಲಾ ಕಟ್ಟಡಕ್ಕೆ ತರಗತಿಗಳು ಸ್ಥಳಾಂತರಗೊಂಡ ನಂತರ ಹಳೆ ಕಟ್ಟಡ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗೆ ಖಾತೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಜಾಗದಲ್ಲಿ ಈಗ ಪೆಟ್ಟಿಗೆ ಅಂಗಡಿಯನ್ನು ಪ್ರಾರಂಭಿಸಲಾಗಿದೆ.
ಮಕ್ಕಳಿಗೆ ಪಠ್ಯ ಚಟುವಟಿಕೆ ಎಷ್ಟು ಮುಖ್ಯವೋ ಕ್ರೀಡೆಯೂ ಅಷ್ಟೆ ಮುಖ್ಯ ಹಾಗಾಗಿ ಹಳೆ ಶಾಲಾ ಜಾಗದಲ್ಲಿ ಅಕ್ರಮ ಖಾತೆ ರದ್ದುಗೊಳಿಸಿ ಶಾಲಾ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಕ್ರೀಡಾಂಗಣ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ‌.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸರಕಾರಿ ಶಾಲೆಗೆ ಸೇರಿದ ಆಸ್ತಿಯನ್ನು ಉಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಆಟದ ಮೈದಾನ ಮಾಡಿಕೊಡುವರೇ ಕಾದು ನೋಡ ಬೇಕಿದೆ.

ಸಂಬಂಧ ಪಟ್ಟ ಇಕಾಖೆಗೆ ಗ್ರಾಮಸ್ಥರು ನೀಡಿದ ಮನವಿ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading