December 14, 2025
Challakere-Municipal-Council-Election-Congress-BJP.jpg

ಚಳ್ಳಕೆರೆ ಡಿ.17

ತೆರಿಗೆ ಹಣವನ್ನು ಬ್ಯಾಂಕ್‌ ಖಾತೆಗೆ
ಜಮೆ ಮಾಡದೆ, ನಕಲಿ ಸೀಲು-ಸಹಿಯ ರಸೀತಿ ನೀಡಿ ನಗರಸಭೆ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಪ್ರಕರಣ ತನಿಖೆ ಹಂತದಲ್ಲಿರುವಾಗಲೆ ಮತ್ತೊಂದು ಪ್ರಕರಣ ಬೆಳಕಿಗೆ
ಹೌದು ಇದು ಚಳ್ಳಕೆರೆ ನಗರಸಭೆ ಕಂದಾಯ ವಿಭಾಗದಲ್ಲಿ ಪ್ರತಿ ವರ್ಷವು ಸಹ ನಿವೇಶನದ ಕಂದಾಯವನ್ನು ಐ ಸಿ ಐಸಿ ಐ ಬ್ಯಾಂಕ್ ಶಾಖೆಗೆ ಚಲನ್ ಮೂಲಕ ಕಂದಾಯ ಸಂದಾಯ ಮಾಡಿದ್ದಾರೆ. ಅದೇರೀತಿ 2024-25 ನೇ ಸಾಲಿನ ಕಂದಾಯ ಪಾವತಿಸಲು ಕಚೇರಿಗೆ ಹೋದಾಗ 2012 ರಿಂದ2024 ರವರೆಗೆ ಕಂದಾಯ ಕಟ್ಟಿಲ್ಲ ಅಲ್ಲಿಂದ 2024-25 ಸಾಲಿನ ವರೆಗೆ ಕಟ್ಟ ಬೇಕು ಎಂದು ಬರೆದು ಕೊಟ್ಟಿದ್ದಾರೆ.
ಖಾತೆದಾರ ಇಲ್ಲ ನಾನ್ನದು ಯಾವುದೇ ಬಾಕಿಯಿಲ್ಲ ಪ್ರತಿ ವರ್ಷ ಕಟ್ಟಿದ್ದೇನೆ 2024-25 ನೇ ಸಾಲಿನದು ಮಾತ್ರ ಬಾಕಿ ಇದೆ ಎಂದಿದ್ದಾರೆ.

ಬ್ಯಾಂಕ್ ಖಾತೆಗೆ ಕಂದಾಯ ಸಂದಾಯ ಮಾಡಿದರು ಪುಸ್ತಕದಲ್ಲಿ‌ಎಂಟ್ರಿ ಮಾಡದೆ ನಗರಸಭೆ ನಿರ್ಲಕ್ಷ

ನೀವು ಕಟ್ಟಿಲ್ಲ ನಾವು ಎಂಟ್ರಿ ಮಾಡಿಲ್ಲ ನೀವು ಕಟ್ಟಿದ್ದರೆ ನಾವು ಎಂಟ್ರಿ ಮಾಡಿತ್ತಿದ್ದೇವೆ ಚಲನ್ ಕಳಿದಿವೆ ಎಂದಿದ್ದಾರೆ. ಆಗ ಇಲ್ಲ ಮತ್ತೆ ಕಟ್ಟಿ ತನ್ನಿ ಎಂಟ್ರಿ ಮಾಡುತ್ತೇನೆ ಎಂದು ನಗರಸಭೆ ಸಿಬ್ಬಂದಿ ಹೇಳಿದ್ದಾರೆ.
ಖಾತೆ ದಾರ ಮನೆಯಲ್ಲಿ ಹುಡುಕಾಟ ನಡೆಸಿದಾಗ ಕಟ್ಟಿದ ಚಲನ್ ಗಳು ಲಬ್ಯವಾಗಿವೆ ಚಲನ್ ಕಳೆದುಕೊಂಡಿದ್ದರೆ ಮತ್ತೆ ಕಂದಾಯ ಪಾವತಿಸ ಬೇಕಿತ್ತು ಈ ಬಗ್ಗೆ ಪೌರಾಯುಕ್ತ ಜಗರೆಡ್ಡಿ ಬಳಿ ದೂರು ನೀಡಿದರೆ ಚಲನ್ ಜೆರಾಕ್ಸ್ ಕೊಡಿ ಎಂಟ್ರಿ ಮಾಡಿಸುತ್ತೇನೆ ನೀವು ಕಟ್ಟಿದ ಹಣ ನಗರಸಭೆ ಖಾತೆಗೆ ಜಮೆ ಆಗಿರುತ್ತದೆ ಸಿಬ್ಬಂದಿ ಎಂಟ್ರಿ ಮಾಡಬೇಕಿತ್ತು ಮಾಡಿಲ್ಲ ಈಗ ಎಂಟ್ರಿ ಮಾಡಿಸುತ್ತೇನೆ ಎಂದು ಪೌರಾಯುಕ್ತರು ಸಾಮಾದಾನದ ಉತ್ತರ ನೀಡುತ್ತಾರೆ.
ಆಸ್ತಿ ಮಾಲಿಕರು ಕಟ್ಟಿದ ಕಂದಾಯವನ್ನು ನಿಗದಿತವಾಗಿ ಪುಸ್ತಕದಲ್ಲಿ ನಮೂದಿಸದೆ ಇರುವುದರಿಂದ ಕಳೆದ ಹಲವು ವರ್ಷಗಳ ಕಂದಾಯ ಸಂದಾಯದ ಮಾಹಿತಿಯೇ ಇಲ್ಲದಂತಾಗಿದೆ ಎಂಬ ಆರೋಪಗಳಿಗೆ ಪುಷ್ಠಿ ಸಿಕ್ಕಂಂತಾಗಿದೆ.

ನಗರದ ಕಂದಾಯ ವಿಭಾಗದಲ್ಲಿ ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ಪ್ರತಿವರ್ಷವೂ ಕಂದಾಯ ಸಂದಾಯ ಮಾಡಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಂದಾಯ ಪುಸ್ತಕಕ್ಕೆ ನಮೂದಿಸದೆ ಎರಡೆರಡು ಬಾರಿ ಕಂದಾಯ ಕಟ್ಟುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಂದಾಯ ವಸೂಲಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿರುವ ಬಗ್ಗೆ 2-6-2022 ರಲ್ಲಿ ಮಾಧ್ಯಮದಲ್ಲಿ ನಗರಸಭೆ ಕಚೇರಿಯಲ್ಲಿ ತೆರಿಗೆ ವಂಚನೆ ಬಗ್ಗೆ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ವಿವಿಧ ತಾಕೂಕಿನ ಅಧಿಕಾರಿಗಳಿಂದ ತನಿಖೆ ನಡೆಸಿ 6 ಜನ ಕಚೇರಿ ಸಿಬ್ಬಂದಿಗಳ ಮೇಲೆ ತನಿಖೆ ನಡೆಸಲು ಆದೇಶ ನೀಡಿ ಎರಡು ವರ್ಷಗಳು ಕಳೆದರೂ ತನಿಖೆ ಮಂದಗತಿಯಲ್ಲಿ ಸಾಗಿದ್ದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿದ್ದು ಕಟ್ಟಿದ ಕಂದಾಯ ಎಂಟ್ರಿ ಮಾಡದೆ ಇರುವುದರ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading