
ನಾಯಕನಹಟ್ಟಿ:: ಹೋಬಳಿಯ ನಲಗೇತನಹಟ್ಟಿ ಗ್ರಾಮಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಪ್ರಾಧ್ಯಾಪಕರು ಆದ ಶ್ರೀ ಡಾ.ಮಂಜುನಾಥ ರವರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮ್ಮುಖದಲ್ಲಿ ಗೌರವ ಸನ್ಮಾನಿಸಲಾಯಿತು.
ಇನ್ನೂ ಡಾ. ಮಂಜುನಾಥ್ ನಲಗೇತನಹಟ್ಟಿ ಗ್ರಾಮದ
ಸಿ ಬಿ ತಿಪ್ಪೇಸ್ವಾಮಿ ಅವರ ಮಾರ್ಗದರ್ಶಕರು ಆದ ಕಾರಣ ನಲಗೇತನಹಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಇದೆ ವೇಳೆ ಡಾ. ಮಂಜುನಾಥ ಕುಲಸಚಿವರು ಊರಿಗೆ ಅಭಿವೃದ್ಧಿ ಕುರಿತು ಕೆಲವು ಮಾತುಗಳನ್ನಾಡಿದರು.



ಇನ್ನೂ ಗ್ರಾಮ ಪಂಚಾಯಿತಿ ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ ಮಾತನಾಡಿದ ಅವರು ಎಸ್ ಸಿ ಎಸ್ ಟಿ ಸಮುದಾಯದ ಯುವಕರಿಗೆ ಎಚ್ಚಿನ ಪ್ರೋತ್ಸಾಹ ನೀಡುವಂತೆ ಡಾ. ಮಂಜುನಾಥ ಅವರಲ್ಲಿ ಮನವಿ ಮಾಡಿಕೊಂಡು ಊರಿನ ವಿದ್ಯಾವಂತ ಯುವಕರು ಹೆಚ್ಚಾಗಿ ಇದ್ದು ಅವರಿಗೆ ಸರಿಯಾದ ಅವಕಾಶ ಸಿಗದೇ ಊರಲ್ಲೇ ಉಳಿಯುವ ಪರಿಸ್ಥಿತಿ ಬಂದಿದೆ ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಉಪಾಧ್ಯಕ್ಷ ಈಗಲೂ ಬೋರಯ್ಯ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಬೋರೆಯ್ಯ, ಗ್ರಾಮಸ್ಥರಾದ ನಲ್ಲನ ಮುತ್ತಯ್ಯ,ಬೋರಮ್ಮ ನಿಂಗರಾಜ್,
ಸಂಶೋಧಕರು ಎಂ ಪಿ ಮಂಜುನಾಥ, ಪಿ ಕೆ ಬೋರಯ್ಯ,ಡಾ. ಕೆ ಬೊಮ್ಮಯ್ಯ, ಪಿ ಬಿ ಕೇಶವಮೂರ್ತಿ, ಟಿ ಸಿ ಸಣ್ಣಬೋರಯ್ಯ, ರಾಮಕೃಷ್ಣ ಮೊದಲಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.