ನಾಯಕನಹಟ್ಟಿ:: ಪಟ್ಟಣದ ಶ್ರೀ ಚನ್ನಕೇಶವ ಸ್ವಾಮಿ ದೇವರ ಉತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.
ಕುರುಬ ಜನಾಂಗದ ಆರಾಧ್ಯದೈವ ಚನ್ನಕೇಶವ ಸ್ವಾಮಿ ದೇವರ ಉತ್ಸವದ ಅಂಗವಾಗಿ ಚೆನ್ನಕೇಶವ ದೇವಾಲಯದಿಂದ ರಂಗನಾಥ ಸ್ವಾಮಿ( ಮರಡಿ ರಂಗನಾಥ) ದೇವಾಲಯದವರೆಗೆ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಯಿತು.




ಚನ್ನಕೇಶವ ದೇವರ ಕುಲ ದೇವರಾಗಿ ಹೊಂದಿರುವ ಜಿಲ್ಲೆಯ ನೇರಲಗುಂಟೆ ಗೌಡಗೆರೆ ಕೊಂಡ್ಲಹಳ್ಳಿ ಕೋನಸಾಗರ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಚನ್ನಕೇಶವ ಸ್ವಾಮಿ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಯಿತು..
ಇನ್ನೂ ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಚನ್ನಕೇಶವ ಸ್ವಾಮಿ ದೇವರ ಉತ್ಸವ ದೇವಾಲಯದಿಂದ ಹೊರಟ ಮೆರವಣಿಗೆ ತೇರು ಬೀದಿ ಮೂಲಕ ಮರಡಿ ರಂಗನಾಥ ಸ್ವಾಮಿ ದೇವಾಲಯ ತಲುಪಿತು.
ಜಾನಪದ ಶೈಲಿಯ ವಾದ್ಯಗಳಾದ ಡೊಳ್ಳು ವಾದ್ಯಗಳು ಹಾಗೂ ಹರಿಕೆ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿದ್ದರೂ.
ಪಲ್ಲಕ್ಕಿಯ ಸುತ್ತ ಕುರಿ ಮರಿಗಳನ್ನ ಪ್ರದಕ್ಷಿಣೆ ನಡೆಸುವುದು ವಿಶಿಷ್ಟ ಆಚರಣೆ ಇಲ್ಲಿ ರೂಢಿಯಲ್ಲಿದೆ. ಮೆರವಣಿಗೆ ಪಾದಗಟ್ಟೆ ಪ್ರದೇಶಕ್ಕೆ ಬಂದಾಗ ನೂರಾರು ಕುರಿಗಳ ಹಿಂಡನ್ನು ಚನ್ನಕೇಶ್ವರ ಸ್ವಾಮಿ ಪಲ್ಲಕ್ಕಿಯ ಸುತ್ತ ಪ್ರದಕ್ಷಿಣೆ ಮಾಡಿಸಲಾಯಿತು.
ಕುರಿಗಾರರು ಕುರಿಗಳನ್ನು ಒಂದಾದ ಎಳೆದು ತಂದು ಪಲ್ಲಕ್ಕಿ ಸುತ್ತ ಸುತ್ತಿಸಿದರು. ಮೊದಲು ನಿಧಾನವಾಗಿ ಸುತ್ತಿದ ಕುರಿಗಳು ಎರಡು ಹಾಗೂ ಮೂರನೇ ಸುತ್ತಿನಲ್ಲಿ ವೇಗವಾಗಿ ಚಲಿಸಿದವು. ದೇವರ ಸುತ್ತ ಕುರಿಗಳು ಸರಾಗವಾಗಿ ಚಲಿಸಿದರೆ ಕುರಿಗಳಿಗೆ ದೇವರ ಆಶೀರ್ವಾದವಿದೆ ಎನ್ನುವ ಭಾವನೆ ಕುರಿಗಾರರಲ್ಲಿದೆ ಕುರಿಗಳು ವೇಗವಾಗಿ ಸುತ್ತುವಾಗ ನೆರೆದಿದ್ದ ಭಕ್ತರು ಸಿಳ್ಳೆ.ಚಪ್ಪಾಳೆಯೊಂದಿಗೆ ಸಂತಸ ಪಟ್ಟರು.
ಕುರುಬ ಸಮಾಜದ ಮಾಜಿ ಅಧ್ಯಕ್ಷ ಕಂಠಪ್ಪರ ಮುನಿಯಪ್ಪ, ಮಾತನಾಡಿ ಸುಮಾರು 600, 500 ವರ್ಷಗಳ ಹಿಂದೆ ನಮ್ಮ ಮೂಲ ಸಂಸ್ಕೃತಿಯ ಪ್ರತೀಕರಾದ ಕುರಿಗಾಹಿಗಳು ಅನಂತಪುರ ಜಿಲ್ಲೆಯಿಂದ ಕುರಿಗಳನ್ನು ಮೇಯಿಸಿಕೊಂಡು ಹಳ್ಳದಾಟಿ ಬರುವ ಸಂದರ್ಭದಲ್ಲಿ ನಮ್ಮ ದೈವಿ ಸ್ರ್ರೀಯೊಬ್ಬಳು ನಾನು ಬರುತ್ತೇನೆ ಎನ್ನಲು ಈ ಸಂದರ್ಭದಲ್ಲಿ ನಮ್ಮ ಕುಲದ ಹೆಣ್ಣುಮಕ್ಕಳು ಯಾರಿದು ನಾನು ಬರುತ್ತೇನೆ ಎಂದು ಹೇಳುತ್ತಿರುವರು ಎಂದು ಆಲೋಚಿಸಿ ಅದನ್ನು ಹಿರಿಯರಿಗೆ ತಿಳಿಸಲು ಹಿರಿಯರು ಆ ಸ್ಥಳಕ್ಕೆ ಬಂದು ಆ ಸ್ರ್ರೀಯನ್ನು ಕರೆಯಲು ಆಕೆ ಬರಲಿಲ್ಲ, ಆ ಸಂದರ್ಭದಲ್ಲಿ ರಾಮ ಬಾಣ ಬಂತು ಅದು ಸಾಮಾನ್ಯ ಬಾಣವೆಂದು ಬಾವಿಸಿ ಅವುಗಳನ್ನು ಜೊತೆಗೆ ಕೊಂಡೊಯ್ಯುತ್ತ ಕುರಿಗಳನ್ನು ಮೇಯಿಸಿಕೊಂಡು ನಾಯಕನಹಟ್ಟಿ ಕೆರೆಯಂಗಳಕ್ಕೆ ಬರಲು ಅಲ್ಲಿ ಕುರಿ ಹಟ್ಟಿಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಕಳ್ಳೆಯೊಂದಿಗೆ ಆ ಬಾಣಗಳನ್ನು ಇಡಲಾಗುತ್ತದೆ ಈ ಸಂದರ್ಭದಲ್ಲಿ ದೈವ ಕೃಪೆಯಿಂದ ಕುರಿಹಟ್ಟಿಗೆ ಬೆಂಕಿ ಬೀಳಲು ಇಡೀ ಕುರಿಹಟ್ಟಿ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಲು ಆ ಬಾಣಗಳು ಮಾತ್ರ ಆಗೆ ಯತಾ ಸ್ಥಿತಿಯಲ್ಲಿರಲು ಇದರಿಂದ ದಿಗ್ಭ್ರಾಂತರಾದ ನಮ್ಮ ಪೂರ್ವಜರು ಜ್ಯೋತಿಷ್ಯ ಕೇಳಲು ಇದು ಸಾಮಾನ್ಯ ಬಾಣಗಳಲ್ಲ ದೈವಕೃಪೆ ಸಾಕ್ಷಾತ್ ತಿರುಪತಿ ತಮ್ಮಪ್ಪನೆ ನಿಮಗೆ ಒಲಿದಿದ್ದಾನೆ ಗೌಡ್ರುಕುರುಬರ ವಂಶಸ್ಥರಾದ ನೀವು ಇಲ್ಲಿ ದೇವಾಲಯವನ್ನು ನಿರ್ಮಿಸಿ ಪೂಜಿಸಿ ಎನ್ನಲು ನಮ್ಮಪೂರ್ವಜರು ಹಟ್ಟಿಮಲ್ಲಪ್ಪ ನಾಯಕ ಸಂಸ್ಥಾನದಲ್ಲಿ ಜಾಗ ಪಡೆದು ದೇವಾಲಯ ನಿರ್ಮಿಸಿ ವರ್ಷಕ್ಕೊಮ್ಮೆ ದಸರಾ ಹಾಗೂ ದೀಪಾವಳಿ ಯಲ್ಲಿ ಶ್ರೀ ಸ್ವಾಮಿಯನ್ನು ಪೂಜಿಸಿಕೊಂಡು ಹೋಗುತ್ತಿದ್ದೇವೆ ಹಾಗೂ ಇತ್ತೀಚೆಗೆ ನಮ್ಮ ವಂಶಸ್ಥರ ಕುಟುಂಬಗಳು ವಿಸ್ತರಿಸಿದ್ದು ಹಲವಾರು ಜಿಲ್ಲೆಗಳಿಂದ ಆಗಮಿಸಿ ಸ್ವಾಮಿಯನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತೇವೆ ಈ ಹಬ್ಬದ ವಿಶಿಷ್ಟ ಆಚರಣೆ ಏನೆಂದರೆ ನಮ್ಮ ಕುರಿ ಹಾಗೂ ದನಕರುಗಳಿದೆ ಯಾವುದೇ ರೋಗ ರುಜಿನ ಬಾರದಿರಲು ಶನಿವಾರ ಬೆಳಗ್ಗೆ 2 ಗಂಟೆಯಿಂದ 5 ಗಂಟೆಯ ಒಳಗೆ ಭೂತರಾಜನಿಗೆ ಆಹಾರ ನೀಡುವುದು ಈ ಮೂಲಕ ಸ್ವಾಮಿಯ ಕೃಪೆಯಿಂದ ಸರ್ವರಿಗೆ ಒಳಿತಾಗಲೆಂದು ಪ್ರಾರ್ಥಿಸಿಕೊಳ್ಳುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನ ಸೇವಾ ಸಮಿತಿ( ರಿ) ಕಾರ್ಯಕಾರಿ ಮಂಡಳಿ ಸಮಿತಿಯ ಅಧ್ಯಕ್ಷ ಕಾಳಪ್ಪ, ಉಪಾಧ್ಯಕ್ಷ ಬಿ ಟಿ ಗುರುಸ್ವಾಮಿ. ಖಜಾಂಚಿ ಸಿ. ರಂಗನಾಥ್, ನಿರ್ದೇಶಕರಾದ ಕೆ. ನಾಗೇಂದ್ರಪ್ಪ, ಸಿ ತಿಪ್ಪೇಸ್ವಾಮಿ( ದೊಡ್ಡಣ್ಣ), ಗೌಡರ ತಿಪ್ಪೇಸ್ವಾಮಿ, ಡ್ರೈವರ್ ತಿಪ್ಪೇಸ್ವಾಮಿ, ಸೋಮಶೇಖರ್, ಆರ್ ಮಂಜಣ್ಣ,ಎಲ್ಐಸಿ. ಚನ್ನಯ್ಯ, ಎಸ್.ಆರ್ ರೇವಣ್ಣ, ಸಿ ,ಹನುಮಂತಪ್ಪ ,ರುದ್ರಪ್ಪ, ಮಂಜುನಾಥ್, ಅರ್ಚಕರಾದ ಪೂಜಾರಿ ಟಿ ಕಾಂತರಾಜ್, ಸೇರಿದಂತೆ ಸಮಸ್ತ ಕುರುಬ ಸಮಾಜದ ಮುಖಂಡರು ಯುವಕರು ಮಹಿಳೆಯರು ಭಕ್ತಾದಿಗಳು
ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.