December 14, 2025
IMG-20241117-WA0232.jpg

ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲನ ಗ್ರಾಮದೇವತೆ ಶ್ರೀಮಾರಿಕಾಂಭದೇವಸ್ಥಾನಲ್ಲಿ ಗೌರಿಹಬ್ಬ ಆಚರಣೆ ಅಂಗವಾಗಿ ಗೌರಿ ಹುಣ್ಣಿಮೆ ರಾತದರಿ ಗೌರಿಮೂತ್ರಿ ಪ್ರತಿಷ್ಠಾಪನೆ ಮಾಡಲಾಗಿದೆ.

ಪ್ರತಿವರ್ಷ ಗೌರಿ ಹುಣ್ಣಿಮೆಯ ದಿನ ಗ್ರಾಮದ ಯುವತಿಯರು   ಕೆರೆ ಕಟ್ಟೆಯಲ್ಲಿನ ಕೆಂಪು ಅಂಟಿನ ಮಣ್ಣನ್ನು ತಂದು ಮಡಿಕೆ ಮಾಡುವ ಕುಂಬಾರನನ್ನು ಕರೆಸಿ ಮಣ್ಣನ್ನು ಹದ ಮಾಡಿ ಆನೆಯ ಮೂರ್ತಿಯನ್ನು ಮಾಡಿ ಅದರ ಮೇಲೆ ಗೌರಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ಶನಿವಾರದಿಂದ ಬುಧವಾರದವರೆಗೆ ಐದು ದಿನಗಳ ಕಾಲ ಹಬ್ಬವನ್ನು ಹೆಣ್ಣು ಮಕ್ಕಳು ಆಚರಣೆ ಮಾಡುತ್ತಾರೆ ಜತೆಗೆ ಗ್ರಾಮದ ಪ್ರಮುಖರು ಸಾಥ್ ನೀಡುತ್ತಾರೆ.

ಪ್ರತಿದಿನ ಸಂಜೆ ಭಜನೆ, ಕೋಲಾಟ, ಜಾನಪದ ಗೀತೆ, ದೇವರ ಭಕ್ತಿ ಗೀತೆಗಳು, ಇನ್ನು ಮುಂತಾದ ಕಾರ್ಯಕ್ರಮಗಳನ್ನು ಗೌರಿಯನ್ನು ಕೂರಿಸಿರುವ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಗಂಗಾ ಪೂಜೆಯೊಂದಿಗೆ ಗ್ರಾಮದ ಮುತ್ತೈದೆ ಹೆಣ್ಣು ಮಕ್ಕಳು, ಗೌರಿ ಮಕ್ಕಳು ಗಂಗಾ ಪೂಜೆಯನ್ನು ನೆರವೇರಿಸಿ ಗಂಗಪೂಜೆ ಮಾಡಿ ಐನಾರ್ ಮನೆಯಲ್ಲಿ ಗೌರಿಯನ್ನು ಶೃಂಗರಿಸುತ್ತಾರೆ. ಗೌರಿ ಮಕ್ಕಳು ಗ್ರಾಮಸ್ಥರು ತೆರಳಿ ಗೌರಿಯನ್ನು  ಪ್ರತಿಷ್ಠಾಪನೆ ಮಾಡಲಾಗುವುದು..

ಗ್ರಾಮದ ಹೆಣ್ಣು ಮಕ್ಕಳ ವಿಶೇಷ ಹಬ್ಬ: ಗ್ರಾಮದ ಹೆಣ್ಣು ಮಕ್ಕಳು ಗೌರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಮಾಡಲು ಪ್ರತಿಯೊಬ್ಬರು ಸೀರೆಯನ್ನು ಹಾಕಿಕೊಂಡು ಶೃಂಗಾರಗೊಂಡು ದೇವಸ್ಥಾನದ ಮುಂಭಾಗದಲ್ಲಿ ಚಲಿಸುವ ವಾಹನಗಳನ್ನು ತಡೆದು ಎಲೆ ಅಡಿಕೆಯನ್ನು ನೀಡುತ್ತಾರೆ ಅದನು ಸ್ವೀಕರಿಸಿದ ಸವಾರರು ಗೌರಿ ಹೆಣ್ಣು ಮಕ್ಕಳಿಗೆ  ಹಣವನ್ನು ನೀಡುತ್ತಾರೆ. ಹೀಗೆ ಗ್ರಾಮದ ಹೆಣ್ಣು ಮಕ್ಕಳು ಗೌರಿಯರಾಗಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

ವಿದ್ಯುತ್ ದೀಪಗಳಿಂದ ಜಗಮಿಸುವ ದೇವಸ್ಥಾನ: ಮಾರಮ್ಮ ದೇವಸ್ಥಾನವು ಗೌರಿ ಹಬ್ಬ ಮುಗಿಯುವ ಐದು ದಿನಗಳ ಕಾಲ ವಿದ್ಯುತ್ ದೀಪಗಳ ಅಲಂಕಾರದಿಂದ ಕೂಡಿರುತ್ತದೆ ಹಾಗೂ ತಳಿರು ತೋರಣಗಳಿಂದ ಕೂಡಿರುತ್ತದೆ ಸಂಜೆಯ ಸಮಯದಲ್ಲಿ ವಿವಿಧ ರೀತಿಯ ಮನರಂಜನೆಯ ಕಾರ್ಯಕ್ರಮ ನಡೆಸಲಾಗುತ್ತದೆ.

ಕೇಸರಿಮಯವಾದ ಬಸ್ ನಿಲ್ದಾಣ: ಗೌರಿ ಹಬ್ಬದಲ್ಲಿ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ಬಸ್ ನಿಲ್ದಾಣವು ಕೇಸರಿ ಬಣ್ಣದಿಂದ ಕಂಗೊಳಿಸುತ್ತದೆ. ಇದರಿಂದ ಬಸ್ ನಿಲ್ದಾಣ ಸುಂದರ ಕೇಸರಿಯ ಮಯವಾಗಿ ಕಾಣಿಸುತ್ತದೆ.

ಅಕ್ಕ-ಪಕ್ಕ ಊರುಗಳ ಜನರು ಸಹ ಗೌರಿ ಹಬ್ಬ ವೀಕ್ಷಣೆ ಮಾಡಲು ಸಂಜೆ ಸಮಯದಲ್ಲಿ ಬರುತ್ತಾರೆ ಹಾಗೂ ವಿವಿಧ ಕಲಾತಂಡಗಳನ ಕರೆಸಿ ಗೌರಿ ಹಬ್ಬವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತೇವೆ ಎಂದು ಗ್ರಾಮದ ಬಸವರಾಜು, ಶ್ರೀನಿವಾಸ್, ಭರತೇಶ್ ದೇವಸ್ಥಾನದ ಪೂಜಾರಿ ಮಾಹಿತಿ ನೀಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading