
ತಳಕು ನ.17.ಬದುಕು ಶ್ರೇಷ್ಠವಾಗಬೇಕೆಂದರೆ ಶ್ರೀ ರಾಮಾಯಣ ಕಾವ್ಯದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರ ತಳಕು ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿ ತಳುಕು ವಿಶಿಷ್ಟವಾದ ಗ್ರಾಮ ತ್ರಿವಳಿ ಕಾವ್ಯ ಕರ್ತೃಗಳನ್ನು ನೀಡಿದಂತ ಹೆಗ್ಗಳಿಕೆ ಗ್ರಾಮಕ್ಕೆ ಇದೆ ಶ್ರೀ ರಾಮಾಯಣ ಕಾವ್ಯ ಬದುಕನ್ನು ನಮ್ಮಗಳ ನಡವಳಿಕೆಯಿಂದ ಬದಲಾಯಿಸಿಕೊಳ್ಳುವುದಾದರೆ ತಾರಾಸು ಬರದಿರುವಂತಹ ಚಿತ್ರದುರ್ಗದ ಪಾಳ್ಳೇಗಾರರ ಇತಿಹಾಸ ಮತ್ತು ಪರಂಪರೆಯ ದುರ್ಗಾಸ್ತಮಾನ ರಕ್ತ ರಾತ್ರಿ ಮತ್ತು ಕಂಬನಿ ಕೊಯ್ಲು ಈ ಕಾದಂಬರಿಗಳು ಶ್ರೇಷ್ಠ ಬದುಕಿಗೆ ದಾರಿ ದೀಪವಾಗಿರುವ ಸ್ವಾಭಿಮಾನ ರಾಷ್ಟ್ರ ಪ್ರೇಮ ಧೈರ್ಯ ಪರಾಕ್ರಮ ಮತ್ತು ಸಹ ಬಾಳ್ವಿಗೆ ದಾರಿ ಮಾಡಿಕೊಡುತ್ತವೆ




ಶ್ರೀ ರಾಮಾಯಣ ಮಹಾ ಕಾವ್ಯ ಬದುಕಿಗೆ ಒಂದು ಜೀವಾಮೃತವಿದ್ದಂತೆ ಪ್ರಪಂಚದಲ್ಲಿಯೇ ವಾಲ್ಮೀಕಿ ಶ್ರೇಷ್ಠ ಕವಿ ಪ್ರಪಂಚದ ಬಹುಪಾಲು ಜನಸಂಖ್ಯೆ ಶ್ರೀ ರಾಮಾಯಣ ಮಹಾ ಕಾವ್ಯವನ್ನು ಪಠಿಸುತ್ತವೆ ಸಮಾಜದ ಪ್ರತಿಯೊಬ್ಬರು ಕೂಡ ಶ್ರೀ ರಾಮಾಯಣ ಮಹಾಕಾವ್ಯವನ್ನು ಓದಬೇಕು ಈ ಮಹಾಕಾವ್ಯದ ಆದರ್ಶಗಳು ಜೀವನಕ್ಕೆ ಆಸು ವಕ್ಕಾಗಬೇಕು
ಕನ್ನಡ ಸಾರಸ್ವತ ಲೋಕಕ್ಕೆ ಈ ಗ್ರಾಮ ಹಿಡಿದ ಕನ್ನಡಿ ಈ ಗ್ರಾಮದ ಪ್ರತಿಯೊಬ್ಬರು ಕೂಡ ಸ್ವಸಂಸ್ಕೃತರು ಮತ್ತು ಶ್ರೇಷ್ಠ ನಡವಳಿಕೆ ಉಳ್ಳವರು ಈ ಗ್ರಾಮದ ಇನ್ನೂ ಹೆಚ್ಚು ಹೆಚ್ಚು ಮಕ್ಕಳು ಗುಣಮಟ್ಟದ ಮತ್ತು ಆಧ್ಯಾತ್ಮದ ಶಿಕ್ಷಣವನ್ನು ಪಡೆದು ಗ್ರಾಮದ ಹಿರಿಮೆಯನ್ನು ಮತ್ತು ಸಾಹಿತ್ಯದ ಸೊಗಡುನ್ನು ಸಮಾಜಕ್ಕೆ ನೀಡಬೇಕು ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಗ್ರಾಮದಲ್ಲಿ ನಡೆಯುವಂತಾಗಬೇಕೆಂದು ಆಶಿಸಿದರು
ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದಂತ ಪಿಟಿಎಸ್ ಮಾಸ್ಟ್ರು ಮಾತನಾಡಿ ವಾಲ್ಮೀಕಿ ಅವರು ದರೋಡೆಕೋರರೆಂದು ಕೆಲವು ಕಡೆ ಪ್ರತಿಬಿಂಬಿಸುತ್ತಿದ್ದಾರೆ ವಾಲ್ಮೀಕಿಗೆ ಇದು ಮಾಡುತ್ತಿರುವ ಅಪಮಾನ ಇಂತಹ ಸುದ್ದಿಯನ್ನು ಹಬ್ಬಿಸುವವರ ವಿರುದ್ಧ ನ್ಯಾಯಾಲಯದಲ್ಲಿ ಕಟ್ಲೆ ಊಡಬಹುದೆಂದು ಉಚ್ಚ ನ್ಯಾಯಾಲಯದ ಆದೇಶವಿದೆ ಎಲ್ಲಿಯೂ ಕೂಡ ವಾಲ್ಮೀಕಿ ಅವರ ಬಗ್ಗೆ ಈ ರೀತಿ ತಪ್ಪು ಸಂದೇಶದ ಮಾತನಾಡಕ್ಕೂಡದೆಂದು ಎಚ್ಚರಿಕೆ ನೀಡಿದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದಂತಹ ಕಾಟಪ್ಪ ಮಹಾಂತೇಶ್ ರವಿ ಪಾಲಯ್ಯ ಮತ್ತು ಇನ್ನಿತರ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.