
ಚಳ್ಳಕೆರೆ ನ.17
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿನಿಲಯಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ “ಇಲಾಖೆಯ ಅಧಿಕಾರಿಗಳ, ಸಿಬ್ಬಂದಿ ನಡೆ ವಿದ್ಯಾರ್ಥಿ ನಿಲಯದ ಕಡೆ ” ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಪ್ರತಿ ತಿಂಗಳ 3ನೇ ಶನಿವಾರ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲೂಕು ಕಚೇರಿಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

























ಇದರ ಬೆನ್ನಲ್ಲೆ ನ. 16 ಮೂರನೇ ಶನಿವಾರ ಜಿಲ್ಲಾ ಮತ್ತು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ವಿದ್ಯಾರ್ಥಿ ನಿಲಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಪೌಂಡ್, ಫೆನ್ಸಿಂಗ್ ಇದೆಯೇ? ಆವರಣದಲ್ಲಿ ಕೈ ತೋಟ, ಗಿಡಗಳನ್ನು ಬೆಳೆಸುತ್ತಿರುವ ಬಗ್ಗೆ, ಕಾಂಪೋಸ್ಟ್ ಗುಂಡಿ ಇರುವ ಬಗ್ಗೆ, ಕಟ್ಟಡದ ಸುತ್ತಲಿನ ವಾತಾವರಣ ಮಕ್ಕಳ ಸುರಕ್ಷತೆಗೆ ಪೂರಕವಾಗಿರವ ಬಗ್ಗೆ, ಕಟ್ಟಡಕ್ಕೆ ತಾಗಿಕೊಂಡು ನೀರಿನ ಗುಂಡಿ, ಕೋಳಚೆ ನೀರಿನ ಕಾಲುವೆ, ಕಟ್ಟಡದ ಮೇಲೆ ಹೈಟೆನ್ಷನ್ ವಿದ್ಯುತ್ ಲೈನ್‌ನ ಅಪಾಯ ಇಲ್ಲದಿರುವ ಬಗ್ಗೆ, ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರುವ ಬಗ್ಗೆ, ನಿಯಮಿತವಾಗಿ ನೀರಿನ ಸಂಪು, ಟ್ಯಾಂಕ್ ಸ್ವಚ್ಛಗೊಳಸಿರುವ ಬಗ್ಗೆ, ಸೊಳ್ಳೆಗಳು ಬಾರದಂತೆ ಕ್ರಮವಹಿಸುವ ಬಗ್ಗೆ ಸಮಗ್ರವಾಗಿ
.ತಾಲೂಕು ಕಲ್ಯಾಣಾಧಿಕಾರಿ ಎಸ್.ರಮೇಶ್. ವಿಸ್ತಾರಣಾಧಿಕಾರಿ ಲೀಲಾವತಿ ಪರಿಶೀಲನೆ ನಡೆಸಿದ್ದಾರೆ
.
About The Author
Discover more from JANADHWANI NEWS
Subscribe to get the latest posts sent to your email.