ಚಿತ್ರದುರ್ಗ ಅ.17:
ಆರೋಗ್ಯವಂತ ಮಕ್ಕಳು ಜನಿಸಬೇಕಾದರೆ ಅರ್ಹ ದಂಪತಿಗಳು ಸರ್ಕಾರದಿಂದ ಸಿಗುವ ಕುಟುಂಬ ಯೋಜನೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೆಹರು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೈಯದ್ ಬಿಲಾಲ್ ಹೇಳಿದರು.
ಇಲ್ಲಿನ ನೆಹರು ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಂಗನವಾಡಿ “ಸಿ” ಕೇಂದ್ರದಲ್ಲಿ ಗುರುವಾರ ಲಸಿಕಾ ಕಾರ್ಯಕ್ರಮದಲ್ಲಿ ಹಾಜರಿದ್ದ ತಾಯಂದಿರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳಲು ಹೆಣ್ಣು ಮಕ್ಕಳಿಗೆ ತಾತ್ಕಾಲಿಕ ವಿಧಾನಗಳಾದ ಪಿಪಿಐಯುಸಿಡಿ, ದಿಮ್ಪಾ ಇಂಜಕ್ಷನ್, ಛಾಯಾ ಮಾತ್ರೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದು,್ದ ಇವುಗಳ ಸದುಪಯೋಗಪಡಿಸಿಕೊಂಡು ಕನಿಷ್ಠ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಮೂರು ವರ್ಷ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕುಟುಂಬ ಕಲ್ಯಾಣ ಶಾಶ್ವತ ವಿಧಾನಗಳಾದ ಹೆಣ್ಣು ಮಕ್ಕಳಿಗೆ ಟುಬೆಕ್ಟಮಿ, ಲ್ಯಾಪೆÇ್ರೀಸ್ಕೋಪಿಕ್ ಶಸ್ತ್ರ ಚಿಕಿತ್ಸೆ ಲಭ್ಯ ಇವೆ. ಪುರುಷರಿಗೆ ಸರಳ ಹಾಗೂ ಸುರಕ್ಷಿತ ಹೊಲಿಗೆ ಇಲ್ಲದ, ಗಾಯ ಇಲ್ಲದ, ಪುರುಷತ್ವಕ್ಕೆ ಹಾನಿ ಇಲ್ಲದ, ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಯನ್ನು ನುರಿತ ತಜ್ಞ ವೈದ್ಯರು ಕೇವಲ ಐದರಿಂದ ಹತ್ತು ನಿಮಿಷದಲ್ಲಿ ಮಾಡುತ್ತಾರೆ. ಮಕ್ಕಳು ಬೇಡವೆಂದು ಅರ್ಹ ದಂಪತಿಗಳು ನಿರ್ಧರಿಸಿದಾಗ ಪುರುಷ ಸಹಭಾಗಿತ್ವ ಬಹು ಮುಖ್ಯವಾದ್ದರಿಂದ ಪುರುಷರು ಈ ವಿಧಾನ ಅನುಸರಿಸಿ ಸುಖಮಯ ದಾಂಪತ್ಯ ಜೀವನ ನಡೆಸಬಹುದು. ಅಪಾಯದ ಅಂಚಿನಲ್ಲಿರುವ ಹೆಣ್ಣು ಮಕ್ಕಳು ತಮ್ಮ ಪತಿಯವರಿಗೆ ಮನವೊಲಿಸಿ, ಈ ಶಸ್ತ್ರಚಿಕಿತ್ಸೆ ಮಾಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಶಾ ಕಾರ್ಯಕರ್ತೆ ಅಥವಾ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಅಥವಾ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದರು .
ಲಸಿಕಾ ಅಧಿವೇಶನದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತಪ್ಪ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಮಂಜುಶ, ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣ, ಆಶಾಕಾರ್ಯಕರ್ತೆಯರಾದ ವಾಣಿ, ದ್ಯಾಮಕ್ಕ, ಅಂಗನವಾಡಿ ಸಹಾಯಕಿ ನೇತ್ರ, ಮಕ್ಕಳ ತಾಯಂದಿರು, ಸಾರ್ವಜನಿಕರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.