
ಹಿರಿಯೂರು ನಗರಸಭೆಯಲ್ಲಿ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆ ಏಕೀಕೃತ ಸಾರ್ವಜನಿಕ ಕುಂದುಕೊರತೆ ಜನಸ್ಪಂದನಾ ವಿಭಾಗಕ್ಕೆ ಸಲ್ಲಿಸಿದ್ದ ಹಲವಾರು ಐ ಪಿ ಜಿ ಆರ್ ಎಸ್ ದೂರುಗಳಿಗೆ ಪದೇ ಪದೇ ಅದೇ ಸುಳ್ಳು ಮಾಹಿತಿ ನೀಡಿ ದೂರನ್ನು ಮುಕ್ತಾಯ ಮಾಡುತ್ತಿರುವ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ನಗರಸಭೆ ಪೌರಾಯುಕ್ತರಾದ ಎ ವಾಸೀಂ ರವರಿಗೆ ಡಾಗ್ ಸರ್ಕಲ್ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.
3 ನೇ ವಾರ್ಡ್ ಶಿವಶಂಕರಪ್ಪ ಲೇ ಔಟ್ ನಲ್ಲಿ ಒತ್ತುವರಿ ಕಾಂಪೌಂಡ್ ಗೋಡೆ ತೆರವು ಮಾಡಿಸಿಕೊಡಬೇಕೆಂದು ಸಲ್ಲಿಸಿದ ದೂರಿಗೆ ಆಗಸ್ಟ್ 22 ರಂದು ನೀಡಿದ ನ್ಯಾಯಾಲಯದ ತಡೆಯಾಜ್ಞೆಯನ್ನು ಆಗಸ್ಟ್ 14 ಕ್ಕೆ ತಡೆಯಾಜ್ಞೆ ಇತ್ತೆಂದು ಮುಂಚಿತವಾಗಿ ಸುಳ್ಳು ವರದಿ ಮಾಡಿ ದೂರನ್ನು ಮುಕ್ತಾಯ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚಂದ್ರಾ ಲೇ ಔಟ್ ಡಾಗ್ ಸರ್ಕಲ್ ರಸ್ತೆ ಮದ್ಯದಲ್ಲಿರುವ ತಗ್ಗು ಗುಂಡಿಗಳಲ್ಲಿ ಮಣ್ಣು ಹಾಕಿಸಿಕೊಡುಬೇಕೆಂದು ಸಲ್ಲಿಸಿದ್ದ ದೂರಿಗೆ ಸುಳ್ಳು ವರದಿ ನೀಡಿ ಕುಂದುಕೊರತೆ ಅರ್ಜಿ ವಿಲೆ ಪಡಿಸಿದ್ದಾರೆ,ಈ ಭಾಗದ ರಸ್ತೆ ಸಮಸ್ಯೆ ಬಗ್ಗೆ,ಆರೋಗ್ಯ ನಿರೀಕ್ಷಕರು,ಎಂಜಿನಿಯರ್, ನಗರಸಭೆ ಕಮಿಷನರ್ ಹಾಗೂ ನಗರ ಯೋಜನೆ ಯೋಜನಾ ನಿರ್ದೇಶಕರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಕೂಡ ಯಾರೊಬ್ಬರು ಗಮನ ಹರಿಸಿಲ್ಲ ಎಂದು ಎಸ್ ವಿ ರಂಗನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಈಗಲಾದರೂ ಪೌರಾಯುಕ್ತರು ಒಮ್ಮೆ ಈ ಭಾಗಕ್ಕೆ ಭೇಟಿ ನೀಡಿ ರಸ್ತೆ ಸಮಸ್ಯೆಯನ್ನು ಕಣ್ಣಾರೆ ನೋಡಿ ಚಂದ್ರಾ ಲೇ ಔಟ್ ಡಾಗ್ ಸರ್ಕಲ್ ರಸ್ತೆ ಅಗಲೀಕರಣ ಮಾಡಿ ತಗ್ಗು ಗುಂಡಿಗಳಲ್ಲಿ ಮಣ್ಣು ಹಾಕಿಸಿಕೊಡುಬೇಕೆಂದು ಎಸ್ ವಿ ರಂಗನಾಥ್ ಮನವಿ ಮಾಡಿದ್ದಾರೆ.

About The Author
Discover more from JANADHWANI NEWS
Subscribe to get the latest posts sent to your email.