
ಚಳ್ಳಕೆರೆ: ಪರಿವರ್ತನೆ ಜಗದ ನಿಯಮ ಲೋಕಕಲ್ಯಾಣದ ಉದ್ದೇಶದಿಂದ ಮಹರ್ಷಿ ವಾಲ್ಮೀಕಿ ಅವರು ರಾಮಾಯಣವನ್ನು ರಚಿಸಿದ್ದಾರೆ ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಯನ್ನು ಬಯಸಿದವರು ಎಂದು ಟಿ ರಘುಮೂರ್ತಿ ಅಭಿಪ್ರಾಯಪಟ್ಟರು
ನಗರದ ಶ್ರೀ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಸಮುದಾಯದ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ವ್ಯವಸ್ಥೆಯಲ್ಲಿ ಅನೇಕ ತಾರತಮ್ಯಗಳಿವೆ ಈ ತಾರತಮ್ಯ ಹೋಗಲಾಡಿಸಬೇಕಾದರೆ ಬುದ್ಧ ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಜಾತಿ ವ್ಯವಸ್ಥೆ ಹೋಗಿ ನೀತಿ ವ್ಯವಸ್ಥೆ ಜಾರಿಗೆ ಬರಬೇಕು. ಕರ್ನಾಟಕ ಇತಿಹಾಸ ಎಂದರೆ ಅದು ನಾಯಕ ಜನಾಂಗದ ಇತಿಹಾಸ ಶಿವಭಕ್ತ ಬೇಡರ ಕಣ್ಣಪ್ಪ .ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ ಬುಕ್ಕ ಚಿತ್ರದುರ್ಗದ ಪಾಳೆಯಗಾರರು ಹೀಗೆ ಹಲವರು ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ.ವಾಲ್ಮೀಕಿ ಸಮುದಾಯದಲ್ಲಿ357ಉಪ.ಜಾತಿಗಳಿದ್ದು ಅವುಗಳೆಲ್ಲವುಕ್ಕೂ ಸಮಾನ.ನ್ಯಾಯ ಸಿಗಬೇಕು






ಇದೇ ವೇಳೆ ಸಮುದಾಯದ ಎಲ್ಲಾ ಮುಖಂಡರು ಪಕ್ಷ ಬೇಧ ಮರೆತು ಒಟ್ಟಾಗಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿರುವುದಕ್ಕೆ ಮುಖಂಡರನ್ನು ಶ್ಲಾಘಿಸಿದರು.
ಮುಂದಿನ ದಿನಗಳಲ್ಲಿ ಮದಕರಿ ನಾಯಕನ ಪುತ್ತಳಿ ನಿರ್ಮಿಸಿ ಜಯಂತಿ ಆಚರಿಸಲಾಗುವುದು ಎಂದು ಭರವಸೆ ನೀಡಿದರು.




ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೆಹಾನ್ ಪಾಷ ರಾಮಾಯಣದ ಮೂಲಕ ಮನುಕುಲಕ್ಕೆ ಜೀವನದ ಮೌಲ್ಯಗಳನ್ನು ಜಗತ್ತಿಗೆ ಪಸರಿಸಿದ ಶ್ರೇಯ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ.ರಾಮಾಯಣ ಕಾವ್ಯದಲ್ಲಿ ವ್ಯಕ್ತಿಗಳನ್ನು ವೈಭವವಿಕರಿಸದೆ ಅವರ ಆದರ್ಶಗಳನ್ನು ಸಮಾಜಕ್ಕೆ ಸಾರಿದ್ದಾರೆ. ಅವುಗಳನ್ನು ಅಳವಡಿಸಿಕೊಂಡು ಬಾಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಜಯಮ್ಮ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.










ಈ ವೇಳೆ ಬಿಜೆಪಿ ಮುಖಂಡ ಕೆ ಟಿ ಕುಮಾರಸ್ವಾಮಿ ನಗರಸಭಾ ಸದಸ್ಯೆ ಕವಿತಾ ಬೋರಯ್ಯ ಮಾತನಾಡಿದರು.
ಸಮಾರಂಭದಲ್ಲಿ ಕಲೆ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು ಎಸ್ ಎಸ್ ಎಲ್ ಸಿ , ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅದ್ದೂರಿಯಾಗಿ ಡಿಜೆ ಸದ್ದಿನೊಂದಿಗೆ ವಾಲ್ಮೀಕಿ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.ಸಮುದಾಯದ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಜೈ ತುಂಬಿ ಉಪಾಧ್ಯಕ್ಷ ಸುಜಾತ ನಗರಸಭಾ ಸದಸ್ಯರಾದ ಸುಮ ಬರಮಯ್ಯ ಶಿವಕುಮಾರ್ ಶ್ರೀನಿವಾಸ್ ತಿಪ್ಪೇಸ್ವಾಮಿ ಬಿಇಒ ಕೆ ಎಸ್ ಸುರೇಶ್ ಪೌರಾಯುಕ್ತ ಜಗ್ಗಾರೆಡ್ಡಿ ಡಿಜೆ ತಿಪ್ಪೇಸ್ವಾಮಿ ಎಲ್ಐಸಿ ತಿಪ್ಪೇಸ್ವಾಮಿ ವೀರಭದ್ರಪ್ಪ ಜಿಟಿ ವೀರಭದ್ರ ಸ್ವಾಮಿ ಸಂದೀಪ್ ಪಿ ತಿಪ್ಪೇಸ್ವಾಮಿ ಸೇರಿದಂತೆ ಮಹಿಳಾ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.