December 15, 2025
IMG-20241017-WA0213.jpg

ಚಿತ್ರದುರ್ಗ‌ ಅ.17  ಮಳೆಗೆ ಮನೆ ಕುಸಿದು ಬಿದ್ದು ಮೃತಪಟ್ಟ ಕುಟುಂಭಕ್ಕೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಪರಿಹಾರದ ಚೆಕ್ ವಿತರಿಸಿದರು.

ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಈಚಲನಾಗೇನಹಳ್ಳಿ ಗ್ರಾಮದ ವಾಸಿಯಾದ ರಂಗಮ್ಮ ಕೋಂ ತಿಪ್ಪೇಸ್ವಾಮಿ ಇವರು ದಿನಾಂಕ:16-10-2024 ರಂದು ಬಂದಂತಹ ಮಳೆಯಿಂದಾಗಿ ಮನೆ ಬಿದ್ದು ಮೃತ ಪಟ್ಟಿದ್ದು ಸ್ಥಳಕ್ಕೆ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ರವರು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.

ಮೃತ ಮಹಿಳೆ ರಂಗಮ್ಮ ಸುಮಾರು 63ವರ್ಷ ವಯಸ್ಸಿನವರಾಗಿದ್ದು ಇಬ್ಬರು ಹೆಣ್ಣು,ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತ ಮಹಿಳೆ ತನ್ನ ಮಗನೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದು ತನ್ನ ಮಗ ಕೆಲಸಕ್ಕೆ ತೆರಳಿದ್ದು ತಾನು ಮನೆಯಲಿದ್ದ ಸಂಧರ್ಭದಲ್ಲಿ ಮನೆಯ ಗೋಡೆ ಮತ್ತು ಚಾವಡಿ ಕುಸಿದು ಬಿದ್ದು ಸಾವನ್ನಿಪ್ಪಿದ್ದಾರೆ.

ಸ್ಥಳಕ್ಕೆ ಬೇಟಿ ನೀಡಿದ ಶಾಸಕರಾದ ವೀರೇಂದ್ರ ಪಪ್ಪಿ ರವರು ಈ ಕೂಡಲೇ ಮೃತರ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರನ್ವಯ ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪ್ರಕೃತಿ ವಿಕೋಪದಿಂದಾಗಿ ಜೀವ ಹಾನಿಯಾದಂತಹ ಸಂದರ್ಭದಲ್ಲಿ ಸದರಿ ಮೃತರ ವಾರಸುದಾರರಿಗೆ ರೂ.4.00 ಲಕ್ಷಗಳನ್ನು ಪಾವತಿ ಮಾಡುವಂತೆ ಆದೇಶಿಸಿರುತ್ತಾರೆ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಮೃತರ ಕುಟುಂಬಕ್ಕೆ ಹೆಚ್ಚುವರಿಯಾಗಿ ರೂ.1.00 ಲಕ್ಷಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದು ಒಟ್ಟು ರೂ.5.00 ಲಕ್ಷಗಳನ್ನು ಪ್ರಕೃತಿ ವಿಕೋಪದಿಂದಾಗಿ ಜೀವ ಹಾನಿಯಾದಂತಹ ಸಂದರ್ಭದಲ್ಲಿ ಪರಿಹಾರ ಪಾವತಿಸುವಂತೆ ಆದೇಶಿಸಿರುತ್ತಾರೆ.

ಪ್ರಯುಕ್ತ ದಿನಾಂಕ:16-10-2024 ರಂದು ಬಂದಂತಹ ಮಳೆಯಿಂದಾಗಿ ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಈಚಲನಾಗೇನಹಳ್ಳಿ ಗ್ರಾಮದ ವಾಸಿಯಾದ ರಂಗಮ್ಮ ಕೋಂ ತಿಪ್ಪೇಸ್ವಾಮಿ ಇವರು ಮನೆ ಬಿದ್ದು ಮೃತ ಪಟ್ಟಿದ್ದು ಸದರಿಯರ ಕುಟುಂಬಕ್ಕೆ ರೂ.5.00 ಲಕ್ಷಗಳನ್ನು ಮಂಜೂರು ಮಾಡಿ ಕುಟುಂಬದವರಿಗೆ ಆದೇಶ ಪ್ರತಿಯನ್ನು ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ರವರು ಮತ್ತು ತಹಶೀಲ್ದಾರರಾದ ನಾಗವೇಣಿರವರು ನೀಡಿದರು. ಈ ಸ್ಥಳದಲ್ಲಿ ಪಂಚಾಯ್ತಿ ಅಧ್ಯಕ್ಷರಾದ ನಿರ್ಮಲ ದೇವರಾಜ್,ಸದಸ್ಯರಾದ ಸುರೇಶ್,ಮಾಜಿ ಸದಸ್ಯರಾದ ಸಿದ್ದಣ್ಣ,ಜಿಲ್ಲಾ ಕಾಂಗ್ರೆಸ್ ಪದವೀಧರರ ವಿಭಾಗದ ಅಧ್ಯಕ್ಷರಾದ ಪ್ರಕಾಶ್ ರಾಮಾನಾಯ್ಕ್,ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಸಯ್ಯದ್ ಖುದ್ದೂಸ್ ,ಎಸ್ಟಿ ವಿಭಾಗದ ಅಧ್ಯಕ್ಷರಾದ ಬಿ ಮಂಜುನಾಥ್ ,ಕೆಡಿಪಿ ಸದಸ್ಯರಾದ ನಾಗರಾಜ್,ಜಗದೀಶ್ ಮತ್ತಿತರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading