ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ವಿಶ್ವಕರ್ಮ ಸಮುದಾಯವು ತಮ್ಮ ಕಾಯಕದ ಪಂಚ ಕಸುಬುಗಳಾದ ಚಿನ್ನ, ಬೆಳ್ಳಿ, ಹಿತ್ತಾಳೆ, ಮರಗೆಲಸ, ಕಂಚು, ಕಬ್ಬಿಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುವ ಮೂಲಕ ಇತರ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ತಹಶೀಲ್ದಾರ್ ರುಕೀಯಾ ಬೇಗಂ ಹೇಳಿದರು.


ಅವರು ಪಟ್ಟಣದಲ್ಲಿ ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಶ್ವಕರ್ಮರು ಪುರಾತನ ಹಿಂದೂ ಧರ್ಮದ ಸಂಸ್ಕೃತಿ ಅಡಿಯಲ್ಲಿ ಬಂದಂತಹ ಸಮುದಾಯವಾಗಿದೆ.
ವಿಶ್ವಕರ್ಮ ಸಮುದಾಯದವರು ಸಾಧನ ಸಲಕರಣೆಗಳಾದ ಮರದ ರಥಗಳು, ಮಹಲುಗಳು, ಸೇರಿದಂತೆ ವಾಸ್ತು ಶಿಲ್ಪದಲ್ಲಿ ತಮ್ಮದೇ ಆದ ಚಾಕಚಕ್ಯತೆ ಮೂಡಿಸಿದ್ದಾರೆ ಎಂದರು.
ಸರ್ವರೂ ಮಹನೀಯರ, ದಾರ್ಶನಿಕರ, ಹಿರಿಯರ ಹಾದಿಯಲ್ಲಿ ಸಾಗಬೇಕು ಅವರ ಆದರ್ಶ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಸಮಾರಂಭದಲ್ಲಿ ತಹಶೀಲ್ದಾರ್ ರುಖಿಯಾ ಬೇಗಂ ಸೇರಿದಂತೆ ಹಲವು ಗಣ್ಯರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಳೆ ತಜ್ಞ ವೈದ್ಯ ಡಾ.ಸಾ.ರಾ.ಧನುಷ್, ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸೇವಾ ಸಂಘದ ಗೌರವಾಧ್ಯಕ್ಷ ನಾಗೇಂದ್ರ ಚಾರ್, ಅಧ್ಯಕ್ಷ ಪ್ರಕಾಶಚಾರ್, ಉಪಾಧ್ಯಕ್ಷ ಶಂಕರಾಚಾರ್, ಕಾರ್ಯದರ್ಶಿ ದೇವೇಂದ್ರ, ಮಿರ್ಲೆ ಹೋಬಳಿ ಅಧ್ಯಕ್ಷ ಎಂ.ಸಿ.ರಾಜು, ಚುಂಚನಕಟ್ಟೆ ಹೋಬಳಿ ಅಧ್ಯಕ್ಷ ಕ್ಷೇತ್ರಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಘು, ಗ್ರಂಥ ಪಾಲಕಿ ದಿವ್ಯಕುಮಾರಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸುಧಾರೇವಣ್ಣ, ಮುಖಂಡರುಗಳಾದ ನಾಗರಾಜಚಾರ್, ನಾಗೇಶಚಾರ್, ಜಲೇಂದ್ರಚಾರ್, ಕೋಮಲಾಚಾರಿ, ಮಣಿರಾಜು, ಪ್ರಕಾಶಚಾರ್, ಅಶೋಕ್, ರೇಣುಕಾಚಾರ್, ಜಯರಾಮ, ಮಂಜಚಾರ್, ರಾಮಾಚಾರ್, ಮಹದೇವಚಾರ್, ಕಾಂತಚಾರ್, ಪ್ರಸನ್ನಚಾರ್, ರಾಜಾಚಾರ್, ದಿಲೀಪ್ ಕುಮಾರ್, ರವೀಂದ್ರ, ಪುಟ್ಟಚಾರ್, ರಜಿನಿ, ಸುವರ್ಣಮ್ಮ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.