ವಿಶ್ವಕರ್ಮ ಸಮುದಾಯದವರು ವಾಸ್ತು ಶಿಲ್ಪದ ನೈಪುಣ್ಯತೆಯನ್ನು ಪಡೆದು ತಮ್ಮ ಪಂಚ ಕಸುವಿನ ಜೊತೆ ಮೈಗೂಡಿಸಿಕೊಂಡು ಸೃಷ್ಟಿಕರ್ತರಾಗಿದ್ದಾರೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು,




ಇವರು ನಗರದ ತಾಲೂಕು ಕಚೇರಿ ಹಾಗೂ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ 48ನೇ ವರ್ಷದ ಶ್ರೀ ಭಗವಾನ್ ವಿಶ್ವಕರ್ಮ ಜಯಂತೋತ್ಸವ ಸಮಾರಂಭಕ್ಕೆ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು,





ವಿಶ್ವಕರ್ಮರು ಪುರಾತನ ಹಿಂದೂ ಧರ್ಮದ ಸಂಸ್ಕೃತಿ ಅಡಿಯಲ್ಲಿ ಬಂದಂತಹ ಸಮುದಾಯ ವಾಗಿದ್ದು, ಈ ಸಮುದಾಯವು ಹಂಚ ಕಸುಬುಗಳನ್ನು ಅವಲಂಬಿಸಿಕೊಂಡು ಚಿನ್ನ ಬೆಳ್ಳಿ ಮರಕೆಲಸ ಹಿತ್ತಾಳೆ ಕಂಚು ಕಬ್ಬಿಣ ಸೇರಿದಂತೆ ಅಸ್ತ್ರಗಳು ಸಹ ಮಾಡಿ ಎಲ್ಲ ಸಮುದಾಯಗಳಿಗೆ ಮಾದರಿಯಾಗಿದ್ದಾರೆ, ಇದು ಅಲ್ಲದೆ ಸಾಧನ-ಸಲಕರಣೆಗಳು, ರಥಗಳು, ಮಹಲುಗಳು, ಸೇರಿದಂತೆ ವಾಸ್ತುಶಿಲ್ಪದ ನೈಪುಣ್ಯತೆಯನ್ನು ಸಮಾಜಕ್ಕೆ ತೋರಿಸಿ ತಮ್ಮ ನೆಲಗಟ್ಟಿನ ಸಂಸ್ಕೃತಿಯಲ್ಲಿ ಬದುಕಿರುವಂತಹ ವಿಶ್ವ ಬ್ರಾಹ್ಮಣರು, ಈ ಜಗತ್ತಿಗೆ ಬೇಕಾದ ಎಲ್ಲವನ್ನೂ ಸೃಷ್ಟಿ ಮಾಡಿದಂತವರು ವಿಶ್ವಕರ್ಮರು.
ಕಲೆಯಲ್ಲಿ ನೈಪುಣ್ಯತೆ ಹೊಂದಿದ ವಿಶ್ವಕರ್ಮರು ಇಂದಿನ ರಾಷ್ಟ್ರ ರಾಜಕೀಯ ವಲಯದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವಂತ ಸಮಾಜ ವಾಗಿದ್ದು, ಇಂತಹ ಸಮಾಜಕ್ಕೆ ಸರ್ಕಾರ ಹೆಚ್ಚಿನ ಅನುದಾನವನ್ನು ಕೊಟ್ಟು ಮೇಲೆತ್ತಿರುವ ಕೆಲಸ ಮಾಡಬೇಕಾಗಿದೆ ಈ ಕುರಿತು ನಾನೊಬ್ಬ ಶಾಸಕನಾಗಿ ನಿಮ್ಮ ಸಮುದಾಯಗಳಿಗೆ ಸರಕಾರದಿಂದ ಬಂದಂತಹ ಎಲ್ಲ ರೀತಿಯ ಅನುದಾನಗಳನ್ನು ನೀಡಿದ್ದೇನೆ, ಇದು ಅಲ್ಲದೆ ಸಮುದಾಯದ ಬಡ ಕುಟುಂಬ ಇರುವಂತಹ ಕುಟುಂಬಗಳಿಗೆ ಸರ್ಕಾರದಿಂದ ಬಂದಿರುವ ಮನೆಗಳನ್ನು ನೀಡುತ್ತೇನೆ ಎಂದು ತಿಳಿಸಿದರು
ಇನ್ನು ಬಿಜೆಪಿ ಮುಖಂಡ ಕೆಟಿ ಕುಮಾರಸ್ವಾಮಿ ಮಾತನಾಡಿ
ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡವರು ವಿಶ್ವಕರ್ಮ ಸಮುದಾಯದವರು ಇಂತಹ ಸಮುದಾಯಕ್ಕೆ ರಾಜ್ಯ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ ಈ ಒಂದು ಹಿನ್ನೆಲೆಯಲ್ಲಿ ನಮ್ಮ ಕೇಂದ್ರ ಸರ್ಕಾರ ನರೇಂದ್ರ ಮೋದಿಜಿ ಅವರು ವಿಶ್ವಕರ್ಮ ಸಮುದಾಯಗಳಿಗೆ ಸಾವಿರಾರು ಕೋಟಿ ಅನುದಾನಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು
ಈ ಒಂದು ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದೆ ಯಶಶ್ವಿನಿ ಕೆ ವಿ ಆಚಾರ್ ತಮ್ಮ ಭರತನಾಟ್ಯದಿಂದ ಜನಮನ ಸೆಳೆದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು,
ನಗರಸಭೆ ಅಧ್ಯಕ್ಷೆ ಶಿಲ್ಪ.ಉಪಾಧ್ಯಕ್ಷೆ ಕವಿತ. ಸದಸ್ಯರಾದ ಮಲ್ಲಿಕಾರ್ಜುನ.ರಾಘವೇಂದ್ರ. ಮಂಜುಳ.ಕವಿತಬೋರಯ್ಯ.ಸುಮ.
ತಹಶೀಲ್ದಾರ್ ರೇಹಾನ್ ಪಾಷ. ತಾಪಂ ಇಒಶಶಿಧರ್. ನಗರಸಭೆ ಪೌರಾಯುಕ್ತ ಜಗ್ಗಾರೆಡ್ಡಿ, ಜೆಡಿಎಸ್ಸಿನ ರವೀಶ್, ಆರು ಪ್ರಸನ್ನ ಕುಮಾರ್. ಜಯ ವೀರಾಚಾರ್, ಯುವಕ ಸಂಘದ ಅಧ್ಯಕ್ಷ ವೆಂಕಟೇಶ್, ಶ್ರೀನಿವಾಸ್ಸರಸ್ವತಮ್ಮ.ಶಿಕ್ಷಕಿಯೋಗೇಶ್ವರಿ. ಸುಜಾತ, ಜಯ ವೀರಾಚಾರ್
ಪ್ರಸನ್ನ. ವೆಂಕಟೇಶ್ ಚಂದ್ರಶೇಖರ್ ಆಚಾರ್.ನಾಗರಾಜ್.ಸಿ.ಪ್ರಸನ್ನಕುಮಾರ್.ವೆಂಕಟೇಶ್.ಉಮದೇವಿ. ಕೃಷ್ಣಚಾರ್. ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.