September 14, 2025
IMG-20250817-WA0123.jpg

ವರದಿ: ಕೆ.ಟಿ ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ:: ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸುವುದು ಅಗತ್ಯ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಪಾಂಡುರಂಗಪ್ಪ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಭೂಮಿ ಪೂಜೆ ಹಾಗೂ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾನೂನು ಪಾಲನೆ ಮಾಡಿಕೊಂಡು ಗಣೇಶ ಹಬ್ಬವನ್ನು ಸಂತೋಷದಿಂದ ಸಾಮರಸ್ಯದಿಂದ ಕಾನೂನು ಸುವಸ್ಥೆಗೆ ಸಹಕಾರ ನೀಡಿ ನಿಮಗೆ ಏನೇ ಸಮಸ್ಯೆ ಇದ್ದರೂ ನಾವು ಸಹಕಾರ ನೀಡುವುದಾಗಿ ಭರವಸೆ ನೀಡುತ್ತೇವೆ ಯಾರೇ ವೈಯಕ್ತಿಕ ವಿಚಾರವನ್ನು ಹಬ್ಬ ಆಚರಣೆಗಳಲ್ಲಿ ಜಗಳ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಗಣೇಶ ಕೂರಿಸಿದ ನಂತರ ವ್ಯವಸ್ಥಾಪಕರು ಸಂಪೂರ್ಣ ಹಗಲು ರಾತ್ರಿ ಗಣೇಶನ ಮೂರ್ತಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಇಲಾಖೆಯಿಂದ ಸಹಕಾರ ನೀಡಲಾಗುವುದು ಎಂದರು.

ಮುಖಂಡ ಎಂ.ವೈ.ಟಿ.ಸ್ವಾಮಿ ಮಾತನಾಡಿ, ಪಟ್ಟಣದಲ್ಲಿ 9 ವರ್ಷಗಳಿಂದ ಹಿಂದೂ ಮಹಾಗಣಪತಿ ಉತ್ಸವ ಜರುಗುತ್ತಿದೆ. 9ನೇ ವರ್ಷದ ಆಚರಣೆಯನ್ನು ವಿಶೇಷವಾಗಿ ಅಯೋಜಿಸಲಾಗಿದೆ. ಒಂಭತ್ತು ದಿನಗಳ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ
ಹಾಗು
ನೀಡಬೇಕು. ಪಟ್ಟಣದಲ್ಲಿ ಕೋಮು ಸಾಮರಸ್ಯಕ್ಕೆ ಸುದೀರ್ಘ ಇತಿಹಾಸವಿದೆ. ತಾಳ್ಮೆ ಸಮಾಧಾನದಿಂದ ಉತ್ಸವ ಆಯೋಜಿಸಬೇಕು. ದೇಶ ಭಕ್ತಿ ಹಾಗೂ ದೈವ ಭಕ್ತಿಗಳು ಈ ಹಬ್ಬದ ವಿಶೇಷಗಳಾಗಿವೆ ಎಂದು ಹೇಳಿದರು. ಹಿಂದೂ ಗಣಪತಿ ಪ್ರತಿಷ್ಠಾಪನೆ ಪೆಂಡಾಲ್ ಭೂಮಿ, ಪೂಜೆ, ಭಗವಾಧ್ವಜಾರೋಹಣ ಹಾಗೂ ಗೋ ಪೂಜೆ ಕಾರ್ಯಕ್ರಮ ಜರುಗಿತು.

ಪಟ್ಟಣ ಪಂಚಾಯತಿ ಸದಸ್ಯರಾದ ಜೆ ಆರ್ ರವಿಕುಮಾರ್, ಎನ್. ಮಹಾಂತಣ್ಣ, ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಶಿವಣ್ಣ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಆರ್ ಪಾಲಯ್ಯ ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ಹೋಬಳಿ ಘಟಕ ಅಧ್ಯಕ್ಷ ಕೆ.ಜಿ. ಮಂಜುನಾಥ ಜೋಗಿಹಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕ ಅಧ್ಯಕ್ಷ ಪ್ರಕಾಶ್, ಬಾಬು ರಾಜು, ಗುಂತಕೋಲ್ಮನಹಳ್ಳಿ ವಿಷ್ಣು, ಕೆ ತಿಪ್ಪೇಸ್ವಾಮಿ, ಮಧು, ವೆಂಕಟೇಶ್, ಮಾರುತಿ, ಶಂಕರ್, ಸುದೀಪ್, ಮಹಾಂತೇಶ್, ಸಾಗರ್, ಪೊಲೀಸ್ ಪೇದೆ ಅಣ್ಣಪ್ಪ ನಾಯ್ಕ,ಮತ್ತಿತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading