
ಚಳ್ಳಕೆರೆ ಜುಲೈ17:
ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದುರ್ಗ ಗ್ರಾಮದಲ್ಲಿ ಮಂಗಳವಾರ ಕಿಲಾರಿ ಪಶುಪಾಲಕ ಅನನ್ಯತೆ-ಸಮುದಾಯದಿಂದ ಸಮಾಜದೆಡೆಗೆ 10 ದಿನಗಳ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ವತಿಯಿಂದ 10 ದಿನಗಳ ಸಮಾಜಕಾರ್ಯ ಶಿಬಿರ ಆಯೋಜಿಸಲಾಗಿದ್ದು, ಪ್ರಯುಕ್ತ ಗ್ರಾಮದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮ, ಜಾಥಾ, ಗ್ರಾಮ ಮುಖಂಡರ ಸಭೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಬೆಂಗಳೂರು ವಿಶ್ವವಿದ್ಯಾನಿಲಯ ರಾಮನಗರ ಸ್ನಾತಕೋತ್ತರ ಕೇಂದ್ರ ಸಮಾಜಕಾರ್ಯ ವಿಭಾಗದ ಅಧ್ಯಾಪಕರು ಮತ್ತು ಶಿಬಿರದ ಸಂಯೋಜಕ ಡಾ.ಜಿ.ಎಂ.ರಶ್ಮಿ ಅವರು ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನೆಲಗೇತನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎನ್. ಮುತ್ತಯ್ಯ ಹಾಗೂ ರಾಮದುರ್ಗ ಗ್ರಾಮದ ಬಂಗಾರಯ್ಯ ಅವರು ಜುಲೈ 15 ರಿಂದ 24 ರವರೆಗೆ ಒಟ್ಟು 10 ದಿನಗಳ ಹಮ್ಮಿಕೊಂಡಿರುವ ಸಮಾಜಕಾರ್ಯ ಶಿಬಿರಕ್ಕೆ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ಶಿಬಿರದ ಸಂಯೋಜಕರು ಹಾಗೂ ಅಧ್ಯಾಪಕ ಡಾ.ದೇವಿಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಬೋಸಯ್ಯ, ದ್ರಾಕ್ಷಾಯಣಮ್ಮ, ಚಿದಾನಂದ್, ಲಿಂಗರಾಜ್ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.


About The Author
Discover more from JANADHWANI NEWS
Subscribe to get the latest posts sent to your email.