ಚಿತ್ರದುರ್ಗಜುಲೈ17:
ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕಾನಿಕಲ್ ಮತ್ತು ಎಲೆಕ್ಟ್ರೀಕಲ್) ಹುದ್ದೆಗಳ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 21 ಅರ್ಜಿ ಸಲ್ಲಿಸಲು ಕೊನೆಯ ದಿನ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. 18 ರಿಂದ 30 ವರ್ಷಗಳು (ಎಸ್.ಸಿ./ಎಸ್.ಟಿ./ಒ.ಬಿ.ಸಿ/ಇ.ಎಸ್.ಎಮ್) ಇತರ ನಿರ್ದಿಷ್ಟ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. 2025ರ ಅಕ್ಟೋಬರ್‍ನಲ್ಲಿ ಪರೀಕ್ಷೆ ನಡೆಯಲಿದೆ. ನಿಖರ ದಿನಾಂಕವನ್ನು ಎಸ್‍ಎಸ್‍ಸಿ ವೆಬ್‍ಸೈಟ್ ಮೂಲಕ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಎಸ್.ಎಸ್.ಸಿ ವೆಬ್‍ಸೈಟ್ www.ssckkr.kar.nic.in / https://ssc.nic.in ಗೆ ಭೇಟಿ ನೀಡಬಹುದು. ಸಿಬ್ಬಂದಿ ನೇಮಕಾತಿ ಆಯೋಗದ ದೂರವಾಣಿ ಸಂಖ್ಯೆ 080-25502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 9945587060, 7022459064 ಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.