
ಚಳ್ಳಕೆರೆ: ನಮ್ಮ ದೇಶವನ್ನು ಕ್ಷಯರೋಗ ಮುಕ್ತ ಮಾಡಲು ಸಮಾಜದಲ್ಲಿ ಇರುವ ಪ್ರತಿಯೂಬ್ಬರು ಕೈ ಜೋಡಿಸಿದಾಗ ಮಾತ್ರ ಕ್ಷಯರೋಗ ಮುಕ್ತ ಮಾಡಲು ಸಾಧ್ಯ ಎಂದು ಮುಸ್ಟಲಗುಮ್ಮಿ ಆರೋಗ್ಯ ನಿರೀಕ್ಷಣಾ ಅಧಿಕಾರಿ ಅಶೋಕ್ ಹೇಳಿದರು.







ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮದಲ್ಲಿ ಆಯುಷ್ ಇಲಾಖೆ, ಬೆಂಗಳೂರು ಜಿಲ್ಲಾ ಪಂಚಾಯತ್, ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆ, ಚಿತ್ರದುರ್ಗ,ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ, ಚಿತ್ರದುರ್ಗ ಚಳ್ಳಕೆರೆ ಟಿ.ಬಿ.ಘಟಕ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಅಬ್ಬೇನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗದ ಬಗ್ಗೆ ಅರಿವು ಅಂದೋಲನ ಕಾರ್ಯಕ್ರಮ ಹಾಗೂ ಆಯುಷ್ ಇಲಾಖೆಯಿಂದ ಕ್ಷಯ ರೋಗಿಗಳಿಗೆ ಚವನ್ ಪ್ರಶ್ ಮತ್ತು ಅಶ್ವ ಗಂಧ ಚೂರ್ಣ ಔಷಧಿ ವಿತರಣೆ ಮಾಡಿ ಮಾತನಾಡಿದ ಅವರು
ಹಳ್ಳಿಯಲ್ಲಿ ಇರುವ ಕ್ಷಯ ರೋಗಿಗಳಿಗೆ ಬೇಕಾದ ಪ್ರೊಟೀನ್ ಮತ್ತು ವಿಟಮಿನ್ ಸಿಗುವುದು ಕಷ್ಟ ಸಾಧ್ಯ ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಆಯುರ್ವೇದ ಔಷಧಿಯಿಂದ ಐಟಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕ್ಷಯರೋಗ ಗುಣ ಪಡಿಸಬಹುದಾದ ಖಾಯಿಲೆಯಾಗಿದೆ ಇದರಿಂದ ಕ್ಷಯ ರೋಗಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿ ಕೊಂಡು ಆರೋಗ್ಯವಂತರಾಗಿ ಎಂದರು.



ಆಯುಷ್ ವೈದ್ಯರಾದ ಡಾಕ್ಟರ್ ಬೊಮ್ಮಣ್ಣ ಮಾತನಾಡಿ ಆಯುರ್ವೇದ ಔಷಧಿ ತುಂಬಾ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿವೆ.. ಇದನ್ನು ಸೇವಿಸುವುದಕ್ಕೆ ಕಹಿ ಯಾಗಿದ್ದರೂ ತುಂಬಾ ಉಪಯುಕ್ತ ವಾದ ಔಷಧಿ ಗುಣವನ್ನು ಹೊಂದಿದೆ ಇದರಲ್ಲಿ ಯಾವುದೇ ರೀತಿಯ ಅರೋಗ್ಯದ ಮೇಲೆ ಅಡ್ಡಪರಿಣಾಮ ಬೀರದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ನಯನ ,ಚೇತನ, ಜ್ಯೋತಿ,ಆಶಾ ಕಾರ್ಯರ್ತೆಯರು, ಅಬ್ಬೇನಹಳ್ಳಿ ವ್ಯಾಪ್ತಿಯ ಕ್ಷಯ ರೋಗಿಗಳು ಗ್ರಾಮಸ್ಥರು ಇದ್ದರು..
About The Author
Discover more from JANADHWANI NEWS
Subscribe to get the latest posts sent to your email.