
ಪರಿಶಿಷ್ಟ ಜಾತಿಯಲ್ಲಿನ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸರ್ವೆ ಕಾರ್ಯ ನಡೆಸಲು ಆಯೋಗದ ಸದಸ್ಯರು ಬಂದಾಗ ತಮ್ಮ ಮೂಲ ಜಾತಿಗಳ ಹೆಸರನ್ನು ನೋಂದಾಯಿಸಿ: ಪ್ರಕಾಶ್ ಮೂರ್ತಿ .
ಚಳ್ಳಕೆರೆ: ಪರಿಶಿಷ್ಟ ಜಾತಿಯಲ್ಲಿನ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ನೇಮಿಸಿದ್ದ ನ್ಯಾ. ನಾಗಮೋಹನ್ ದಾಸ್ ರವರ ಮಧ್ಯಂತರ ವರದಿ ಪ್ರಕಾರ ಪರಿಶಿಷ್ಟ ಜಾತಿಯ ಸರ್ವೆ ಕಾರ್ಯ ನಡೆಸಬೇಕು ಎಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂಗನವಾಡಿ ನೌಕರರು ಹಾಗೂ ಶಿಕ್ಷಕರ ಮೂಲಕ ಸರ್ವೆ ಕಾರ್ಯಕ್ಕೆ ಮುಂದಾಗಿದ್ದು ಪರಿಶಿಷ್ಟ ಜಾತಿಯ ಅಡಿಯಲ್ಲಿ ಬರುವ ಸಮುದಾಯಗಳು ತಮ್ಮ ಮೂಲ ಉಪ ಜಾತಿಗಳನ್ನು ಸರ್ವೆ ಕಾರ್ಯ ನಡೆಸುವಾಗ ನಮೂದಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ್ ಮೂರ್ತಿ ಕರೆ ನೀಡಿದ್ದಾರೆ.



ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡರ ಜೊತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 30 ವರ್ಷಗಳಿಂದ ಒಳ ಮೀಸಲಾತಿಯನ್ನು ದಕ್ಕಿಸಿಕೊಳ್ಳಲು ಮಾದಿಗ ಸಮುದಾಯ ದೇಶಾದ್ಯಂತ ಹಲವು ಹೋರಾಟಗಳನ್ನು ನಡೆಸುತ್ತಾ ಬಂದಿದ್ದರ ಫಲವಾಗಿ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿ ತೀರ್ಪನ್ನು ನೀಡಿರುವುದರಿಂದ ರಾಜ್ಯ ಸರ್ಕಾರ ಸರ್ವೆ ಕಾರ್ಯ ನಡೆಸಲು ಮುಂದಾಗಿದೆ. ಆದ್ದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಪರಿಶಿಷ್ಟ ಜಾತಿಯ ಸಮುದಾಯಗಳು ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಆಂಧ್ರ ಎಂದು ನಮೂದಿಸುವುದರ ಜೊತೆಗೆ ತಮ್ಮ ಮೂಲ ಉಪಜಾತಿಗಳನ್ನು ನಮೂದಿಸುವ ಮೂಲಕ ಒಳ ಮೀಸಲಾತಿ ಪಡೆಯಲು ಅನುಕೂಲ ಕಲ್ಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾದಿಗ ಸಮುದಾಯದ ಮುಖಂಡ ಮೈತ್ರಿ ದ್ಯಾಮಯ್ಯ ಮಾತನಾಡಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಗಳಲ್ಲಿ ಮಾದಿಗ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ಭರವಸೆಯನ್ನು ನೀಡಿ ಅಧಿಕಾರವನ್ನು ನಡೆಸುತ್ತಿವೆ ಕಾಂಗ್ರೆಸ್ ಪಕ್ಷ ಒಳ ಮೀಸಲಾತಿಯನ್ನು ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆ ಹಾಗೂ ಅಧಿವೇಶನದಲ್ಲಿ ಜಾರಿ ಮಾಡುವುದಾಗಿ ಹೇಳಿದ್ದರು ಆದರೆ ಈಗ ನೆಪಗಳನ್ನು ಹೇಳಿ ಮುಂದೂಡುತ್ತಾ ಬಂದಿದೆ ಸುಪ್ರೀಂ ಕೋರ್ಟ್ ಆದೇಶದ ನಂತರ ಇದರ ಬಗ್ಗೆ ರಾಜ್ಯ ಸರ್ಕಾರ ಮನಸ್ಸು ಮಾಡಿದ್ದು ಉಮಾ ಮಹದೇವನ್ ಎಂಬ ನೋಡಲ್ ಅಧಿಕಾರಿಯನ್ನು ಸರ್ವೆ ಕಾರ್ಯದ ನಿಮಿತ್ತ ಉಸ್ತುವಾರಿಯಾಗಿ ನೇಮಿಸಿದ್ದು ಪರಿಶಿಷ್ಟ ಜಾತಿಯ ಜನರು ಸರ್ವೆ ಕಾರ್ಯಕ್ಕೆ ತಮ್ಮ ನಿವಾಸಗಳಿಗೆ ಭೇಟಿ ನೀಡಿದಾಗ ಮೂಲ ಜಾತಿಗಳನ್ನು ನಮೂದಿಸಬೇಕು ಎಂದು ತಿಳಿಸಿದರು.
ಮುಖಂಡ ದಯಾನಂದ್ ಮಾತನಾಡಿ ನ್ಯಾ. ನಾಗಮೋಹನ್ ದಾಸ್ ರವರ ಆಯೋಗವು ಎಂ ಪಿರಿಕಲ್ ಡಾಟಾವನ್ನು ಕೇಳಿದ್ದರಿಂದ ಈ ಸಮಸ್ಯೆ ಉದ್ಭವಾಗಿದ್ದು ಈ ಹಿಂದಿನ ಕಾಂತರಾಜ್ ಆಯೋಗ ಹಾಗೂ ಸದಾಶಿವ ಆಯೋಗದ ವರದಿಗಳನ್ನು ಇಟ್ಟುಕೊಂಡು ಸರ್ವೆ ಕಾರ್ಯ ನಡೆಸಿದ್ದರೆ ಇಂತಹ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಇದರಿಂದ ನಮಗೆ ನಿರಾಸೆ ಉಂಟಾಗಿದೆ ಮುಂದಿನ ದಿನಗಳಲ್ಲಿ ಈ ರೀತಿಯ ಗೊಂದಲಗಳು ಆಗಬಾರದು ಎಂಬ ದೃಷ್ಟಿಯಿಂದ ಸರ್ವೆ ಮಾಡಲು ಮುಂದಾಗಿದ್ದು ಉಪಜಾತಿ ಕಾಲಂನಲ್ಲಿ ತಮ್ಮ ಜಾತಿಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ನಿರ್ಭೀತಿಯಿಂದ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಒಳ ಮೀಸಲಾತಿಯ ಫಲವನ್ನು ಅನುಭವಿಸುವಂತಾಗಬೇಕು ಇದರ ಬಗ್ಗೆ ಸಮುದಾಯದ ಮುಖಂಡರು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಬೇಕುಎಂದರು.
ನೋಂದಣಿಗೆ ಬೇಕಾದ ದಾಖಲಾತಿಗಳು: ಸರ್ವೆ ಕಾರ್ಯ ನಡೆಸಲು ಆಯೋಗವು ತಮ್ಮ ಮನೆ ಬಾಗಿಲಿಗೆ ಬಂದಾಗ ಕೇವಲ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಗಳನ್ನು ಹೊಂದಿದ್ದರೆ ಸಾಕಾಗುತ್ತದೆ ಯಾವುದೇ ಜಾತಿ ಪ್ರಮಾಣ ಪತ್ರವನ್ನು ತೋರಿಸುವ ಅಗತ್ಯವಿರುವುದಿಲ್ಲ ಎಂದು ಇದೇ ವೇಳೆ ಮುಖಂಡರುಗಳು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿಪಿ ಪ್ರಕಾಶ್ ಮೂರ್ತಿ, ಡಿಟಿ.ಜಗನ್ನಾಥ್, ನಗರಸಭೆ ನಾಮ ನಿರ್ದೇಶನ ಸದಸ್ಯ ವೀರಭದ್ರಪ್ಪ,
ಶ್ರೀನಿವಾಸ್, ಭೀಮಣ್ಣ, ಭೂತರಾಜ್, ಸಿಜೆ ಕುಮಾರ್, ಉಮೇಶ್ ಚಂದ್ರ ಬ್ಯಾನರ್ಜಿ, ಮೈತ್ರಿ ದ್ಯಾಮಣ್ಣ, ರುದ್ರಮುನಿ, ತಿಪ್ಪೆ ರುದ್ರಪ್ಪ , ರಂಗಸ್ವಾಮಿ ,ಚೆನ್ನಿಗರಾಮಯ್ಯ, ಡಿ.ದಯಾನಂದ, ತಿಪ್ಪೇಸ್ವಾಮಿ, ವಿರುಪಾಕ್ಷ ,ಡಿಟಿ ಹನುಮಂತ್ ರಾಯ , ಹರೀಶ್, ಪ್ರಕಾಶ್, ಇತರರು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.