ನಾಯಕನಹಟ್ಟಿ ಪಟ್ಟಣದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ
ನಾಯಕನಹಟ್ಟಿ ಪಟ್ಟಣದಲ್ಲಿ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಡಾ|| ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಬ್ರೇಡ್ ಹಣ್ಣು ವಿತರಣೆ
ನಾಯಕನಹಟ್ಟಿ :






ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ಉಚಿತ ಕಣ್ಣಿನ ಶಿಬಿರ ಹಮ್ಮಿಕೊಳ್ಳಲಾಯಿತು. ನಂತರ ಮಾತನಾಡಿದ ಅವರು ಹೊರ ಜಗತ್ತನ್ನು ನೋಡುವುದಕ್ಕೆ ಆನಂದಿಸಬೇಕಾದರೆ ಜೋಪಾನವಾಗಿ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕು. ಯಾವುದೇ ಒತ್ತಡ ತೆಗೆದುಕೊಳ್ಳಬೇಡಿ, ಅರಾಮವಾಗಿರಿ. ದೇಹದ ಆರೋಗ್ಯ ರಕ್ಷಣೆಯ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಡಜನರಿಗೆ, ನಿರ್ಗತಿಕರಿಗೆ ಉಚಿತವಾಗಿ ಕಣ್ಣಿನ ಶಿಬಿರ ತಪಾಸಣೆ ಹಮ್ಮಿಕೊಂಡಿದ್ದು ಮದರ್ ತರೇಸಾ ಗ್ರಾಮೀಣ ಸಂಸ್ಥೆ ಅಧ್ಯಕ್ಷ ನಾಗರಾಜ ಹೇಳಿದರು.
ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಸತತ 5 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಕಂಪ್ಯೂಟರ್ ತರಬೇತಿ, ಶಾಲಾ ಕಾಲೇಜ್‌ಗಳಿಗೆ ಪ್ರವೇಶ ಪಡೆಯಲು ಉಚಿತ ತರಬೇತಿ ನೀಡುತ್ತಿದ್ದು ಇದರ ಜೊತೆಗೆ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಹಿರಿಯ ನಾಗರಿಕರ ಕಣ್ಣಿನ ಸ್ವಾಸ್ಥ್ಯಕ್ಕಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವಿಶೇಷ ಅಭಿಯಾನ ಯೋಜನೆಯನ್ನು ಪ್ರತಿ ತಿಂಗಳು ಸರ್ಕಾರಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ಹಿರಿಯ ನಾಗಕರಿಗೆ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಿಕೊಂಡು ಬಂದಿದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಅರೋಗ್ಯ ಶಿಬರಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಜಾಗನೂರಹಟ್ಟಿ ಮುತ್ತಯ್ಯ ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಮದರ್ ತೆರೇಸಾ ಸಂಸ್ಥೆ ಸಂಸ್ಥಾಪಕ ಶಿವಮೂರ್ತಿ ಬಿ, ಹೋಬಳಿ ಅಧ್ಯಕ್ಷ ಕೆ.ಜಿ.ಮಂಜುನಾಥ, ಕರ್ನಾಟಕ ಮದಕರಿ ಸೇನೆ ಮಹಿಳಾ ರಾಜ್ಯಾಧ್ಯಕ್ಷೆ ತಿಪ್ಪಮ್ಮ ಚಿನ್ನಮಲ್ಲಯ್ಯ, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಮಂಜುನಾಥ, ನಗರ ಘಟಕದ ಅಧ್ಯಕ್ಷ ಓ.ತಿಪ್ಪೇಸ್ವಾಮಿ, ಪ್ರೇಮ್‌ಕುಮಾರ್, ತ್ಯಾಗರಾಜ್ ಶಂಕರ ಕಣ್ಣಿನ ಆಸ್ಪತ್ರೆ ವೈಧ್ಯರು, ಸಿಬ್ಬಂಬದಿಗಳು ಹಾಗೂ ಇನ್ನೂ ಇತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.