ಹಿರಿಯೂರು:17.ರ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆ ಹರಿಯಬ್ಬೆ ಹಾಗೂ ಅರಿಯಬ್ಬೆ ಗೆಳೆಯರ ಬಳಗದ ವತಿಯಿಂದ “ಪಕ್ಷಿ ಲೋಕ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.






ಈ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಪಕ್ಷ ತಜ್ಞರು ಇವರಿಂದ ನಮ್ಮ ನಾಡಿನ ಪಕ್ಷಿಗಳ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಕ್ಷಿಯಿಂದ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು . ಇಂದಿನ ಆಧುನಿಕ ಯುಗದಲ್ಲಿ ಪಕ್ಷಿಗಳ ಮೇಲಾಗುತ್ತಿರುವ ಪ್ರಹಾರ ಅವುಗಳ ಸಂತತಿ ನಾಶದಿಂದ ಪರಿಸರದಲ್ಲಾಗುತ್ತಿರುವ ಅಸಮತೋಲನ ಇವುಗಳ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟರು. ಮುಂದಿನ ದಿನದಲ್ಲಿ ಮಕ್ಕಳು ಪಕ್ಷಿಗಳ ಸಂತತಿಯನ್ನು ಹೆಚ್ಚಿಸುವ ಬಗ್ಗೆ ಅರಿವು ಮೂಡಿಸುವ ಉಪನ್ಯಾಸ ನೀಡಿದರು. ಮುಂದುವರೆದು ಪಕ್ಷಿಗಳನ್ನು ಅವುಗಳ ಧ್ವನಿಯಿಂದ ಗುರಿತಿಸುವುದು ಹೇಗೆ ಅವುಗಳ ರೆಕ್ಕೆ ಪುಕ್ಕಗಳಿಂದ ಅವುಗಳ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಎಂಬ ಬಗ್ಗೆ ಧ್ವನಿ ಮತ್ತು ದೃಶ್ಯದ ಮೂಲಕ ಮಕ್ಕಳಿಗೆ ಪರಿಚಯಿಸಿದರು.
ಪೂಜಾರ ಶಿವಣ್ಣ ಈ ದಿನದ ಕಾರ್ಯಕ್ರಮದ ಪ್ರಾಯೋಜಕರಾಗಿದ್ದು, ಬೆಂಗಳೂರಿನ ವಕೀಲರಾದ ಕುವೆಂಪು- ತೇಜಸ್ವಿ ಪ್ರತಿಷ್ಠಾನದ ಜಿ ಟಿ ನರೇಂದ್ರ ಕುಮಾರ್ ಹೈಕೋರ್ಟ್ ವಕೀಲರು ಎಲ್ಲಾ ಮಕ್ಕಳಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸಲು ಮಣ್ಣಿನ ಮಡಿಕೆಗಳನ್ನು ವಿತರಿಸಿದರು. ಪ್ಲಾಸ್ಟಿಕ್ ಬಳಕೆಯಿಂದಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಹಾಗೂ ಸ್ಥಳೀಯ ಕುಂಬಾರಿಕೆ ಕಲೆಯನ್ನು ಉತ್ತೇಜಿಸಲು ಎಲ್ಲಾ ಮಕ್ಕಳಿಗೂ ಮಣ್ಣಿನ ಮಡಿಕೆಗಳನ್ನು ಉಚಿತವಾಗಿ ನೀಡಿದ್ದು ಆದರ್ಶಪ್ರಾಯವಾಗಿತ್ತು .
ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳು ಹರಿಯೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದು ಇದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಮುಂದಿನ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆದರ್ಶಪ್ರಾಯ ಕಾರ್ಯಕ್ರಮವಾಗಿದ್ದು ಇದರ ರೂವಾರಿಗಳಾದ ಹರಿಯಬ್ಬೆ ಗೆಳೆಯರ ಬಳಗದ ಎಲ್ಲಾ ಸದಸ್ಯರಿಗೂ ಶಾಲೆಯ ಪರವಾಗಿ ಮುಖ್ಯೋಪಾಧ್ಯಾಯಎಂ ಜೆ ರುದ್ರಮುನಿ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಎಸ್ ಡಿ ಎಮ್ ಸಿ ಅಧ್ಯಕ್ಷ ರಂಗನಾಥ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜಣ್ಣ, ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟಗೌಡ ಹಾಜರಿದ್ದು ಕಾರ್ಯಕ್ರಮಕ್ಕೆ ಕಳೆತಂದರು.
About The Author
Discover more from JANADHWANI NEWS
Subscribe to get the latest posts sent to your email.