ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕಲಾವಿದರಿದ್ದಾರೆ ಅವರನ್ನು ಮುಖ್ಯ ವಾಹಿನಿಗೆ ಕರೆ ತರುವ ಕೆಲಸವಾಗಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ಹೇಳಿದರು.


ಭಾನುವಾರ ರಾತ್ರಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದಲ್ಲಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಪ್ರಯುಕ್ತ ಶ್ರೀ ಗಾದ್ರೇಶ್ವರ ನವ ತರುಣ ನಾಟ್ಯ ಕಲಾ ನಾಟಕ ಸಂಘ ವತಿಯಿಂದ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಇವರ ಸಹಕಾರದೊಂದಿಗೆ ಹೂವಿಗಾಗಿ ದುಂಬಿ ಸಾವು ಅರ್ಥಾತ್ ಬಿರುಗಾಳಿಗೆ ಸಿಲುಕಿದ ಪ್ರೇಮಿಗಳು ಎಂಬ ಸುಂದರ ಸಾಮಾಜಿಕ ನಾಟಕವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ವರ್ಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಪ್ರಯುಕ್ತ ಗ್ರಾಮದ ಕಲಾವಿದರು ಸಾಮಾಜಿಕ ನಾಟಕ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ ಈ ವರ್ಷವೂ ಸಹ ಉತ್ತಮವಾಗಿ ನಾಟಕ ಪ್ರದರ್ಶನವಾಗಲಿ ಮತ್ತು ಇಂದಿನ ಯುವ ಪೀಳಿಗೆ ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ತಮ್ಮ ನಿಜ ಜೀವನದಲ್ಲಿ ರೂಡಿಸಿಕೊಳ್ಳಲಿ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಎಂ ಟಿ ಮಂಜುನಾಥ್ ಮಾತನಾಡಿದರು ನಮ್ಮ ಗ್ರಾಮದಲ್ಲಿ ಭಜನೆ ಜಾನಪದ ಯಕ್ಷಗಾನ ಪೌರಾಣಿಕ ಕೋಲಾಟ ಸೋಬಾನ ಕಲಾವಿದರಿದ್ದಾರೆ ಅವರಿಗೆ ಸೂಕ್ತ ವೇದಿಕೆಗಳ ಅವಶ್ಯಕತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ರೈತ ಸಹಕಾರ ಸಂಘದ ಸದಸ್ಯ ಗೊಂಚಿಗಾರ್ ಪಾಲಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ನಾಯಕನಹಟ್ಟಿ ಹೋಬಳಿ ಘಟಕ ಅಧ್ಯಕ್ಷ ಕೆ .ಜಿ .ಮಂಜುನಾಥ್ ಜೋಗಿಹಟ್ಟಿ, ಟ್ಯಾಕ್ಟರ್ ಮಾಲಿಕ ಲೋಕೇಶ್, ಡಿ. ಗ್ರೂಪ್ ನೌಕರ ಮೈಲಾರಪ್ಪ, ಡಿ ಈಶ್ವರ, ಸೇರಿದಂತೆ ಸಮಸ್ತ ಜಾಗನೂರಹಟ್ಟಿ ಗ್ರಾಮಸ್ಥರು ಕಲಾವಿದರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.