February 17, 2026
IMG-20260217-WA0143.jpg

ಚಳ್ಳಕೆರೆ: ಸಂಪೂರ್ಣ ಒಳ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿ 2026ರ ಫೆಬ್ರವರಿ 23ರಂದು ಜಿಲ್ಲಾ ಸಚಿವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಈ ಸಂಬಂಧ ಪೂರ್ವಭಾವಿ ಸಭೆಯನ್ನು ಸ್ಥಳೀಯವಾಗಿ ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹುಲ್ಲೂರು ಕುಮಾರಣ್ಣ ವಹಿಸಿಕೊಂಡು ಮಾತನಾಡಿ, ಒಳ ಮೀಸಲಾತಿ ಜಾರಿಯಾಗದೇ ಇರುವುದರಿಂದ ಸಮುದಾಯದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಸರ್ಕಾರವು ವಿಳಂಬ ಮಾಡದೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಭೀಮನಕೆರೆ ಶಿವಮೂರ್ತಿ, ಕೆ. ರಾಜಣ್ಣ, ಯೋಗರಾಜ್, ಹನುಮಂತಪ್ಪ, ತಮಠಕಲ್ಲು ಪ್ರಕಾಶ್, ಎಐಬಿಎಸ್‌ಪಿ (AIBSP) ಜಿಲ್ಲಾ ಅಧ್ಯಕ್ಷ ಮಾರುತಿ, ಡಿಎಸ್ಸೆಸ್ (DSS) ಮುಖಂಡ ಎಂ.ಆರ್. ಶಿವರಾಜ್, ಎಸ್.ಆರ್. ತಿಪ್ಪೇಸ್ವಾಮಿ, ಬಿ.ಎನ್. ಜೀವೇಶ್, ಜಿ. ದಯಾನಂದ್, ಶಂಕರ್, ಕೆಂಚವೀರಪ್ಪ, ಹೊಸದುರ್ಗ ಮಲ್ಲಿಕಾರ್ಜುನ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರತಿಭಟನೆಯನ್ನು ಶಾಂತಿಯುತವಾಗಿ ಹಾಗೂ ಶಿಸ್ತಿನಿಂದ ನಡೆಸಲು ತೀರ್ಮಾನಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮುಖಂಡರು ಕರೆ ನೀಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading