ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ) : ಬೆಂಗಳೂರಿನ ವೀರಭದ್ರ ನಗರದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಜಿಯವರ ಪ್ರತಿಮೆಯನ್ನು ವಿರೂಪ ಗೊಳಿಸಿರುವ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಭಕ್ತರ ಬಳಗ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಘಟಕಗಳ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಪಟ್ಟಣದ ಗಾಂಧಿ ವೃತ್ತದಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಾವೀರ ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿಗೆ ತೆರಳಿ ಗ್ರೇಡ್ 2 ತಹಶೀಲ್ದಾರ್ ಸಣ್ಣರಾಮಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.



ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಮಹಾ ಮಾನವತಾವಾದಿಯಾಗಿ ಸರ್ವಧರ್ಮ, ಸರ್ವ ಜನಾಂಗಕ್ಕೆ ಜೀವನಪೂರ್ತಿ ತ್ರಿವಿಧ ದಾಸೋಹ ಸೇವೆಯನ್ನು ಸಲ್ಲಿಸಿದ ನಡೆದಾಡುವ ದೇವರು ಎಂದು ಹೆಸರು ಪಡೆದ ಶತಮಾನದ ಶ್ರೇಷ್ಠ ಸಂತರಾದ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಪ್ರತಿಮೆಯನ್ನು ವಿರೂಪ ಗೊಳಿಸುವ ಮೂಲಕ ಪೂಜ್ಯರಿಗೆ ಅಪಮಾನ ಮಾಡಿದ್ದಾರೆ. ಈ ಘಟನೆಯಿಂದ ಸ್ವಾಮೀಜಿಯವರ ಕೋಟ್ಯಂತರ ಅಭಿಮಾನಿಗಳಿಗೆ ನೋವುಂಟಾಗಿದೆ. ಇಂತಹ ಕೃತ್ಯವನ್ನು ಎಸಗುವವರನ್ನು ಸೂಕ್ತ ಕಾನೂನು ಬಳಸಿ ಕಠಿಣವಾದ ಶಿಕ್ಷೆಯಾಗುವಂತೆ ಮಾಡಬೇಕು. ಮುಂದೆ ಯಾರೂ ಕೂಡ ಇಂತಹ ಹೀನ ಕೃತ್ಯವನ್ನು ಎಸಗದಂತೆ ಮುಂಜಾಗ್ರತೆ ವಹಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಇಂತಹ ಘಟನೆ ಪುನರಾವರ್ತನೆ ಆದರೆ ಡಾ.ಶಿವಕುಮಾರ ಸ್ವಾಮೀಜಿಯವರ ಅಭಿಮಾನಿಗಳು ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ಇದುವರೆಗೂ ಈ ಘಟನೆಯ ಬಗ್ಗೆ ಯಾವುದೇ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಘಟನೆಯು ದೊರೆಯಿತು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಾಡ್ಯ ಮಠದ ಶ್ರೀ ಬಸವರಾಜಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ
ಸಿ.ಪಿ.ರಮೇಶ್ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ಪ್ರಕಾಶ್, ಒಕ್ಕೂಟದ ಖಜಾಂಚಿ ದಡದಹಳ್ಳಿ ನಟರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸರಗೂರು ಶಿವು, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆಡಗನಟರಾಜ್, ಕುಪ್ಪಹಳ್ಳಿ ಸೋಮಶೇಖರ್, ಮುಖಂಡರುಗಳಾದ ಮಲ್ಲಪ್ಪ, ಸಣ್ಣಲಿಂಗಪ್ಪ, ನಾಗೇಶ್, ನವೀನ್, ತೇಜುಮೂರ್ತಿ, ಮಹೇಶ್, ಮಧು, ಆನಂದ್, ಯತೀಶ್, ಸತೀಶ್, ಕುಮಾರಸ್ವಾಮಿ, ತ್ರಿಜೇಂದ್ರ, ಲಿಂಗಪ್ಪ, ಲೋಕೇಶ್, ಕುಮಾರ್, ಮೂರ್ತಿ, ಬಸವರಾಜ್,
ಹೆಚ್.ಕೆ.ಮಹೇಂದ್ರ, ಸುಧಾರೇವಣ್ಣ, ಗುಣಪಾಲಜೈನ್, ಚಂದ್ರು, ಸ್ವೀಟ್ ಪ್ರಕಾಶ್, ಶಿವಮೂರ್ತಿ, ಸೋಮಪ್ಪ, ರಾಮಣ್ಣ, ನರಸಿಂಹ, ರಾಣಿಸತೀಶ್, ಕಿಜರ್ ಪಾಷಾ, ಚಂದು, ರಾಘವನ್ ಗೌಡ, ಮುತ್ತಾರ್ ಪಾಷ, ಶೌಕತ್, ಕುಬೇರ, ಪರಮೇಶ್, ನಟಬುದ್ಧಿ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.