
ಹಿರಿಯೂರು :
ವಿವಿಧ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದ 101 /48 ಕುಲ ಬೆಡಗಿನ ಕುಂಚಿಟಿಗರು ಮನೆ ದೇವರುಗಳ ಭಾವೈಕ್ಯತಾ ಪ್ರವಾಸದ ಮೂಲಕ ಒಂದುಗೂಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂಬುದಾಗಿ ತಾಲ್ಲೂಕು ಕುಂಚಿಟಿಗರ ಸಂಘದ ಅಧ್ಯಕ್ಷರಾದ ಮೈಸೂರುಶಿವಣ್ಣ ಅವರು ಹೇಳಿದರು.
ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಷ್ಟಾರ್ಥ ಸಿದ್ಧಿಗಾಗಿ ಕುಂಚಿಟಿಗರ ಪಂಚದೈವ ಯಾತ್ರೆ ಅಂಗವಾಗಿ ತುಮಕೂರು ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷರಾದ ಲಲಿತ ಮಲ್ಲಪ್ಪ,ನವರ ನೇತೃತ್ವದಲ್ಲಿ ಮಾರಿಕಣಿವೆ ಕಣಿವೆ ಮಾರಮ್ಮ ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರಿಗೆ ಅತಿಥಿ ಸತ್ಕಾರ ಮಾಡಿ ಶಾಲು ಹೊದಿಸಿ ಸನ್ಮಾನಿಸಿ ಅವರು ಮಾತನಾಡಿದರು.
ತುಮಕೂರು ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷರಾದ ಲಲಿತ ಮಲ್ಲಪ್ಪ ಮಾತನಾಡಿ, ಕುಂಚಿಟಿಗರ 101 ಕುಲ ದೈವಗಳ ಆಶೀರ್ವಾದದಿಂದ ಕುಂಚಿಟಗರಿಗೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಆದಷ್ಟು ಬೇಗ ಸಿಗಲಿ ಎಂಬುದಾಗಿ ಅವರು ಪ್ರಾರ್ಥಿಸಿದರು.
ಕಾತ್ರಿಕೇನಹಳ್ಳಿ ಮಂಜುನಾಥ್ ಮಾತನಾಡಿ, ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಹೋರಾಟದ ಭಾಗವಾಗಿ ಮಹಿಳೆಯರು ಕೂಡ ಸಂಘಟಿತರಾಗಿದ್ಧಾರೆ. ಇದೇ ರೀತಿ ದಕ್ಷಿಣ ಭಾರತದಲ್ಲಿ ಕುಂಚಿಟಿಗರ ಕುಲದೈವಗಳ ಯಾತ್ರೆ ನಿರಂತರವಾಗಿ ನಡೆಯಲಿ ಎಂಬುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹುಲುಗಲಕುಂಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶಶಿಕಲಾ, ನಿಜಲಿಂಗಪ್ಪ, ಚೇತನ್, ಚಂದ್ರಕಾಂತ್, ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ಧರು.
About The Author
Discover more from JANADHWANI NEWS
Subscribe to get the latest posts sent to your email.