
ಹಿರಿಯೂರು :
ಇಂದಿನ ಮಕ್ಕಳೇ ಮುಂದಿನ ಭಾವೀ ಭವಿಷ್ಯದ ಪ್ರಜೆಗಳು, ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ನಾಡಿನ ಪ್ರಜ್ಞಾವಂತ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂಬುದಾಗಿ ನಗರದ ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜಿನಿ ಕಾಡುಗೊಲ್ಲಅವರು ಹೇಳಿದರು.
ನಗರದ ಮೂರನೇ ವಾರ್ಡ್ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಡಿತ್ ಜವಹರ್ ಲಾಲ್ ನೆಹರು ರವರಿಗೆ ಮಕ್ಕಳೆಂದರೆ ಅಪಾರವಾದ ಪ್ರೀತಿ ಆದ್ದರಿಂದ ಅವರ ಅಭಿಲಾಷೆಯಂತೆ ಜವಹರ್ ಲಾಲ್ ನೆಹರುರವರ ಜನ್ಮ ದಿನಾಚರಣೆಯನ್ನು ನಾವು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಕಾವ್ಯ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.