
ಚಿತ್ರದುರ್ಗ ನ.16 ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25 ನೇ ವರ್ಷದ ಕಾರ್ಯಕ್ರಮವು ದಿನಾಂಕ 16-11-2024 ರಂದು 60 ದಿನಗಳ ಕಾಲ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಲೆ ಧರಿಸಿದ ಸ್ವಾಮಿ ಗಳಿಗೆ ಪ್ರತಿನಿತ್ಯ ಉಚಿತ ಅನ್ನದಾನ ಕಾರ್ಯಕ್ರಮ ನೆರವೇರ ಸಲಾಗುವುದು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶನಿವಾರ ದಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಗಣ ಹೋಮ ಶ್ರೀ ಚಂಡಿಕಾ ಹೋಮ ಪೂಜಾ ಕಾರ್ಯಕ್ರಮ ನೆರವೇರಿ ಸಲ್ಲಾಗುವುದು. ಮಧ್ಯಾಹ್ನ 12:45 ಗಂಟೆಗೆ ಪೂರ್ಣಾವತಿ ನಡೆಸಲಾಯಿತು. ಈ ಹೋಮದ ನೇತೃತ್ವವನ್ನು ಸತೀಶ್ ಶರ್ಮ ಹಾಗೂ ಸಂಘಟಿಕರಿಂದ ನೆರವೇರಸಲಾಯಿತು. ಹಾಗೂ ಅನ್ನದಾನದ ಕಾರ್ಯಕ್ರಮದ ಉದ್ಘಾಟನೆಯನ್ನು ಸುಜಾತಾ ಲಿಂಗ ರೆಡ್ಡಿ ಎಸ್ ಆರ್ ಎಸ್ ವಿದ್ಯಾಸಂಸ್ಥೆ ಹಾಗೂ ವಿನಯ್ ಕುಮಾರ್ ಕುಮಾರ್ ಗ್ರಾಮ ಪಂಚಾಯತ್. ನೆರವೇರಿಸಿದರು. ಇದರ ಅಧ್ಯಕ್ಷತೆಯನ್ನು ಶರಣಕುಮಾರ್ ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ .ಚಿತ್ರದುರ್ಗ ಇವರು ನೆರವೇರಿಸುವವರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು .18-12-2024 ಬುಧುವಾರ ರಂದು ಸಂಜೆ ಏಳು ಗಂಟೆಗೆ 18 ಮೆಟ್ಟಿಲುಗಳ ಪಡಿಪೂಜ ಕಾರ್ಯಕ್ರಮ ಇರುವುದು. 22-12-2024 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಾ ಅನ್ನದಾನ ಕಾರ್ಯಕ್ರಮವಿರುತ್ತದೆ.13-01-2025 ಸೋಮವಾರ ಸಂಜೆ 6:00ಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವರ ಆಭರಣ ಮೆರವಣಿಗೆ ನಗರದಲ್ಲಿ ನೆರವೇರಿಸಲಾಗುವುದು. ದಿನಾಂಕ 14.01.2025 ಮಂಗಳವಾರ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಿಸಲಾಗುವುದು. ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಕಲ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ. ಅಧ್ಯಕ್ಷರು ಶರಣ್ ಕುಮಾರ್ ಸ್ವಾಮಿ ಸೇವಾ ಟ್ರಸ್ಟ್. ಹಾಗೂ ದೇವಸ್ಥಾನದ ಕಾರ್ಯದರ್ಶಿಯಾದ ವೆಂಕಟೇಶ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ದೇವಸ್ಥಾನದ ಪದಾಧಿಕಾರಿ ಗಳಾದ ಸೂರಪ್ಪ ರೇಷ್ಮೆ ಮಂಜುನಾಥ್ ಚಂದ್ರಶೇಖರ್ ಇಂದ್ರನ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.






About The Author
Discover more from JANADHWANI NEWS
Subscribe to get the latest posts sent to your email.