
ಧಾರವಾಡ:: ನ.16.ಕನ್ನಡ ನಾಡಿನ ನೆಲ ಜಲ ಭಾಷೆ ಮತ್ತು ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಸಾಧನೆಗೈತ್ತಿರುವ ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದ ಪತ್ರಕರ್ತ ಕೆ ಟಿ ಓಬಳೇಶ್ ರವರಿಗೆ .
ಶುಕ್ರವಾರ ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ (ರಿ) 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ”ಕನ್ನಡ ನುಡಿ ಸಂಭ್ರಮ-2024″ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ನಲಗೇತನಹಟ್ಟಿ ಪತ್ರಕರ್ತ ಕೆ ಟಿ ಓಬಳೇಶ್ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನೂ ನಲಗೇತನಹಟ್ಟಿ ಪತ್ರಕರ್ತ ಕೆ ಟಿ ಓಬಳೇಶ್ ರವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದೆ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಕರ್ನಾಟಕ ಸೇವ ರತ್ನ ಪ್ರಶಸ್ತಿ, ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ, ಅಕ್ಷರ ಮಾಂತ್ರಿಕ ಪ್ರಶಸ್ತಿ, ಸಿದ್ದಗಂಗಾ ಸೇವರತ್ನ ಪ್ರಶಸ್ತಿ, ರಾಜ್ಯಮಟ್ಟದ ಸಮಾಜ ಸೇವ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ದಿವ್ಯ ಸಾನಿದ್ಯ ಪ.ಪೂ.ಶ್ರೀ ರಮೇಶ್ ಮಹಾಸ್ವಾಮಿಗಳು ಜ್ಞಾನಶ್ರಮ ಗೋವಿನಾಳ,ತಾ.ಲಕ್ಷ್ಮೇಶ್ವರ, ಹಿರಿಯ ಸಾಹಿತಿಗಳು ಡಾ.ಬೆ.ಗೋ.ರಮೇಶ್ ಬೆಂಗಳೂರು, ಗೌರವಾಧ್ಯಕ್ಷರು ಶ್ರೀ ಲಕ್ಕಮ್ಮದೇವಿ ಕಲಾಪೋಷಕ ಸಂಘ (ರಿ) ಬ್ಯಾಕೋಡ ಡಾ. ಸಿದ್ದಣ್ಣ ಬಾಡಿಗಿ, ಅಧ್ಯಕ್ಷರು ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ (ರಿ )ಬ್ಯಾಕೂಡ ಸಿದ್ರಾಮ ಎಮ್ ನಿಲಜಗಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಧಾರವಾಡ ಎಸ್ ಹೆಚ್ ಮಿಟ್ಟಲಕೋಡ, ನಿರ್ದೇಶಕರು ರಂಗಾಯಣ ಧಾರವಾಡ ಡಾ. ರಾಜು ತಾಳಿಕೋಟೆ, ಸಂಪಾದಕರು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಡಾ. ಎಸ್ ಎಸ್ ಪಾಟೀಲ, ಇನ್ನೂ ಮುಂತಾದವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.