
ಚಳ್ಳಕೆರೆ ನ.16
ಶಾಲೆಯಲ್ಲಿ ಮಕ್ಕಳ ಸಂಸತ್ ಚುನಾವಣೆ. ಚುನಾವಣೆ ಅಂದರೆ ಇಲ್ಲಿ ಮಕ್ಕಳೇ ಸ್ಪರ್ಧಾಳುಗಳು, ಮಕ್ಕಳ ಜತೆ ಪೋಷಕರು. ಸ್ನೇಹಿತರು ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಶಾಲೆಯಲ್ಲಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ಕಾತುರರಾಗಿದ್ದಾರೆ. ಇಡೀ ಶಾಲಾ ವಾತಾವರಣ ಸಾವತ್ರಿಕ ಚುನಾವಣಾ ಪ್ರಕ್ರಿಯೆಯಲ್ಲಿ ಮುಳುಗಿಹೋಗಿತ್ತು.
ಹೌದು ಇದು ಚಳ್ಳಕೆರೆ ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆಯ ಆವರದಲ್ಲಿ ಶಾಲೆಯ ಆವರಕ್ಕೆ ಬಂದ ಪಾಲಕರಿಗೆ ಹಾಗೂ ಮತದಾರರಿಗೆ ಅಭ್ಯರ್ಥಿಗಳು ನಮ್ಮ ಗುರುತಿಗೆವಮತ ನೀಡುವಂತೆ ಮತಯಾಚನೆಅಡುತ್ತಿದ್ದ ದೃಶ್ಯ ಕಂಡು ಬಂದರೆ ಇನ್ನು ಕಣದಲ್ಲಿ ನಿಂತ ವಿದ್ಯಾರ್ಥಿಯ ಪೋಷಕರೂ ಸಹ ಸ್ನೇಹಿತರನ್ನು ಕರೆ ತಂದು ತಮ್ಮ ಮಕ್ಕಳ ಗೆಲುವಿಗಾಗಿ ಮತಹಾಕಿಸುತ್ತಿರುವ ದೃಶ್ಯ ಕಂಡು ಬಂತು.
ಒಟ್ಟು 13 ಸ್ಥಾನಗಳಿಗೆ 47 ವಿದ್ಯಾರ್ಥಿ ಅಭ್ಯರ್ಥಿಗಳು ನಾಲ್ಕು ಪಕ್ಷದಿಂದ ಕಣಕ್ಕಿಳಿದಿದ್ದರು.
ವಿದ್ಯರ್ಥಿಗಳೇ ಮತಗಟ್ಟೆ ಅಧಿಕಾರಿಗಳು ಪೋಲಿಸರಾಗಿ ಕೈಯಲ್ಲಿ ಬೆತ್ತಹಿಡಿದು ಮತದಾರರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವ ದೃಶ್ಯ ಕಂಡು ಬಂತು.
ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ಮತಚಲಾಯಿಸಿ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ದಿನ ನಾಯಕರು ಎಂದು ಹೇಳುವಂತೆ ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಎದ್ದು ಕಾಣುತ್ತಿದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಂಸತ್ ಎಂಬುದು ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಜವಬ್ದಾರಿ ನಿರ್ವಹಣೆಯ ಜೊತೆಗೆ ಶಾಲಾ ಆಡಳಿತದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ಭಾವೀ ನಾಗರಿಕರನ್ನು ಬೆಳೆಸಲು ಅನುಕೂಲವಾಗುತ್ತದೆ.

























ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡಾ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ ಎಂದರು.
ಚುನಾವಣೆ ಪ್ರಕ್ರಿಯೆ ಹೀಗಿತ್ತು ಚುನಾವಣೆ ದಿನಾಂಕಘೋಷಣೆ. ನೀತಿ ಸಂಹಿತೆ. ನಾಮಪತ್ರ ಸಲ್ಲಿ. ಹಿಂಪಡೆಯುವುದು. ಪ್ರಚಾರ.ಬಹಿರಂಗ ಸಭೆ.’ಮತಗಟ್ಟೆ, ಬ್ಯಾಲೆಟ್ ಪೇಪರ್, ಬೆರಳಿಗೆ ಶಾಹಿ ಮತದಾನ ಶನಿವಾರ ಬೆಳಗ್ಗೆ 9 ಗಂಟೆಯಿಂದ 3-30 ಮತದಾನದ ಸಮಯ ನಿಗದಿಯಾಗಿತ್ತು ಮತದಾನ ಮುಗಿದ ನಂತರ ಭದ್ರತಾ ಕೊಠಡಿಯಲ್ಲಿ ಶೇಖರಣೆ ಮಾಡಿ ಎರಡು ದಿನಗಳ ನಂತರ ಮತ ಎಣಿಕೆ ನಡೆಯಲಿದೆ ಎಲ್ಲವನ್ನೂ ಶಾಲಾ ಚುನಾವಣೆಯಲ್ಲಿ ಬಳಸಲಾಗಿತ್ತು ಮಕ್ಕಳ ಸಂಸತ್ ಚುನಾವಣೆ ಸಾರ್ವತ್ರಿಕ ಚುನಾವಣೆಯನ್ನು ಅಣುಕಿಸುವಂತಿತ್ತು.
ಹೊಂಗಿರಣ ಸಂಸ್ಥೆಯ ಅಧ್ಯಕ್ಷ ಕಾರ್ಯದರ್ಶಿ ಹಾಗೂ ಸಹ ಶಿಕ್ಷಕರು ಚುನಾವಣೆ ಪ್ರಕ್ರಿಯಲ್ಲಿ ಭಾಗವಹಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.