ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತದಂತಹ ತುರ್ತು ಅಂದರೆ ಗೋಲ್ಡನ್ ಅವರ್ ಸನ್ನಿವೇಶಗಳಲ್ಲಿ ಸರ್ಕಾರ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಹೆಸರಿನಲ್ಲಿ ಸುಮಾರು 40 ರಿಂದ 50,000 ಬೆಲೆಬಾಳುವ ಟೆನೆಕ್ಟ ಪ್ಲಸ್ ಎನ್ನುವ ಇಂಜೆಕ್ಷನ್ ಅನ್ನು ಕೊಡಬೇಕೆಂದು ಸರ್ಕಾರದ ಯೋಜನೆ ಇದೆ ಈ ಇಂಜೆಕ್ಷನ್ ನಿಂದ ಹೆಪ್ಪುಗಟ್ಟಿರುವ ರಕ್ತ ತೆಳುವಾಗಿ ರೋಗಿ ಹೆಚ್ಚಿನ ಚಿಕಿತ್ಸೆ ಪಡೆಯಲು ದೂರದೂರಿಗೆ ಪ್ರಯಾಣ ಮಾಡಲು ಅನುಕೂಲವಾಗಿ ಸಾವಿನಿಂದ ಪಾರಾಗುತ್ತಾನೆ. ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇದನ್ನು ಹೃದಯಾಘಾತದಂತಹ ಸನ್ನಿವೇಶಗಳಲ್ಲಿ ಬಳಸಬೇಕೆಂದರೆ ಇದಕ್ಕೆ ನುರಿತ ವೈದ್ಯರು, ಸಿಬ್ಬಂದಿ, ಹಾಗೂ ಐಸಿಯು ಸಲಕರಣೆಗಳು ಲಭ್ಯವಿಲ್ಲ ಎಂದು ಆಡಳಿತ ಅಧಿಕಾರಿ ಡಾ. ವಿಜಯಕುಮಾರ್ ಹೇಳುತ್ತಾರೆ. ಹಾಗಾದರೆ ಸರ್ಕಾರ ಇಂತಹ ಇಂಜೆಕ್ಷನ್ ಒದಗಿಸಿ ,ಇನ್ನೊಂದು ಕಡೆ ಸೌಲಭ್ಯ ಒದಗಿಸದೆ ರೋಗಿಗಳಿಗೆ ಯಾವ ರೀತಿಯ ಅನುಕೂಲವಾಗುತ್ತದೆ. ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತೆ ಇದನ್ನು ಬಳಸುವ ವ್ಯವಸ್ಥೆ ಇಲ್ಲದ ಮೇಲೆ ಈ ಯೋಜನೆಯನ್ನು ರದ್ದುಪಡಿಸಬೇಕು. ಹಾಗೂ ಇದೇ ಇಂಜೆಕ್ಷನ್ ಅನ್ನು ಹಿರಿಯೂರಿನ ಖಾಸಗಿ ವೈದ್ಯರ ಬಳಿ 50,000ಕ್ಕೂ ಹೆಚ್ಚು ಹಣ ಕೊಟ್ಟು ಜೀವ ಉಳಿಸಿಕೊಳ್ಳಬೇಕಾದ ಸನ್ನಿವೇಶ ಇದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು ತುರ್ತಾಗಿ ಇದಕ್ಕೆ ವ್ಯವಸ್ಥೆ ಮಾಡಿ ಕೊಡಬೇಕೆಂದು ಒತ್ತಾಯಿಸಿ ದಿನಾಂಕ 18.10:25ರಂದು ಹಿರಿಯೂರ್ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದೇವೆ. ಈ ಸತ್ಯಾಗ್ರಹದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಸಪ್ತಗಿರಿ ಸ್ಟುಡಿಯೋ ಮಾಲೀಕರಾದ ಗೋವರ್ಧನ್, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ನಿವೃತ್ತ ಸಂಘದ ರಾಜ್ಯಾಧ್ಯಕ್ಷರಾದ ನಾರಾಯಣ ಆಚಾರ್, ವಂದೇ ಮಾತರಂ ಜಾಗೃತಿ ವೇದಿಕೆ ಅಧ್ಯಕ್ಷರಾದ ಮಲ್ಲಪ್ಪನಹಳ್ಳಿ ಗಿರಿಧರ್. ಆಲೂರು ಚೇತನ್, ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಗೂ ತಾಲೂಕಿನ ಜೀವಪರ ಕಾಳಜಿ ಉಳ್ಳ ಸಂಘ-ಸಂಸ್ಥೆಗಳವರು ನಾಗರೀಕರು ಇತರರು ಭಾಗವಹಿಸುವರು
About The Author
Discover more from JANADHWANI NEWS
Subscribe to get the latest posts sent to your email.