
ಚಳ್ಳಕೆರೆ ಅ.16
ನಗರಸಭೆ ಆಡಳೀತ ಅಧಿಕಾರಿಗಳ ಅವಧಿಯಲ್ಲಿ ಏನಾಗಿದೆ ಎಂಬುದು ಮಾಹಿತಿಯೂ ಇಲ್ಲ ಸಭೆಯೂ ಕರೆದಿಲ್ಲ ಹಿಂದಿನ ಸಭೆಯ ನಡವಳಿ ಓದಿ ಸಭೆ ಮಾಡುವಂತೆ ವಿರೋಧ ಪಕ್ಷದ ಸದಸ್ಯರು ಪಟ್ಟು ಇಡಿದರು.
.ನಗರದ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಅಧಕ್ಷೆ ಜಯತುಂಬಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆ ನಡವಳಿ ಓದಿ ಹೇಳುವ ವಿಷಯ ಬಂದಾಗ ಸದಸ್ಯರು ಅಕ್ರೋಶ ಹೊರಹಾಕಿ ಜಿಲ್ಲಾಧಿಕಾರಿ ನಗರಸಭೆ ಆಡಳಿತ ಅಧಿಕಾರಾವಧಿಯಲ್ಲಿ ಚಳ್ಳಕೆರೆ ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳ ಕೌನ್ಸಿಲ್ ಸಭಾಡಿದರು ಆಡಳಿತ ಅಧಿಕಾರಿಗಳಅವಧಿಯಲ್ಲಿಏನು ಮಾಡಿದ್ದಾರೆ ಎಂದು ಸಭೆ ಗಮನಕ್ಕೆ ಸಭೆ ಮುಂದುವರಿಸುವಂತೆ ವಿರೋಧ ಪಕ್ಷದ ಸದಸ್ಯರು ಪಟ್ಟು ಇಡಿದರು ಇದಕ್ಕೆ ಅಧಿಕಾರಿಗಳು ಅಧ್ಯಕ್ಷರು ಉತ್ತರ ನೀಡದೆ ಮೌನಕ್ಕೆ ಜಾರಿದ್ದರು.
ಸದಸ್ಯರಾದ ಮಲ್ಲಿಕಾರ್ಜುನ್ .ವಿಶ್ ಕುಮಾರ್ ಮಾತಮಾಡಿ ನಗರ ಅಭಿವೃದ್ಧಿ ಒಂದು ಕಡೆಯಿರಲಿ ಸತ್ತವರನ್ನು ಅಂತ್ಯ ಸಂಸ್ಕಾರ ಮಾಡಲು ಜಾಗವಿಲ್ಲ ಮಳೆ ನೀರು ನಿಂತು ಕರೆಯಾಗಿದೆ ಸ್ಮಶಾನದಲ್ಲಿ ಮಳೆ ನೀರು ಹೋಗದಂತೆ ಮಾಡಿ ಎಂದರು.

ಜಯಣ್ಣ ಮಾತನಾಡಿ ಪುಟ್ ಬಾತ್ ಮೇಲಿರುವ ಸ್ಲಾಬ್ ಗಳು ಮುರಿದು ಬಿದ್ದಿವೆ ಯಾರಾದರೂ ಬಿದ್ದು ಸತ್ತರೆ ಯಾರು ಹೊಣೆ ಒಳಗೆ ಹುಳುಕು ಹೊರಗೆ ತಳಕು ಎಂಬಂತೆ ಡಿವೈಡರ್ ಗಳಿಗೆ ಬಣ್ಣ ಹೊಡೆದರೆ ಸಾಕೆ ರಸ್ತೆ ಬದಿಯಲ್ಲಿ ಹಾಕಿದ ಕಂಬಿಗಳು ಎಲಹೋಗಿವೆ ಕೂಡಲೆ ರಸ್ತೆ ಮೇಲೆ ಸ್ಲಾಬ್ ಹಾಕಿ ಎಂದು ಸಭೆ ಗಮನ ಸೆಳೆದರು.
ಚಳ್ಳಕೆರೆ ನಗರಸಭೆ ಸಾಮಾನ್ಯ ಸಭೆಯಲ್ಲಿಸ್ಥಾಯಿ ಸಮಿತಿ ರಚಿಸುವ ವಿಷಯ ಬಂದಾಗ ಸಭೆಗೆ ವಿಷಯ ತಂದಿದ್ದೀರಿ ಚುನಾವಣೆ ಈಗಲೆ ಮಾಡಿ ಎಂದು ಪಟ್ಟು ಇಡಿದರು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ ಸಮರ ನಡೆಯಿತು ವಿರೋಧ ಪಕ್ಷದ ಸದಸ್ಯರು ಸಭೆಯಿಂದ ಹೊರ ನಡೆಯಲು ಮುಂದಾದ ನಗರಸಭೆ ಅಧಿಕಾರಿಗಳು ಮನವೊಲಿಸಿ ಮತ್ತೆ ಸಭೆಗೆ ಕರೆದ ತಂದರು.
ಸಭೆ ಚಿಕನ್ ಅಂಗಡಿಗಳನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ
ಬೀದಿ ನಾಯಿ.ಬಿಡಾಡಿ ದನಗಳಿಗೆ ಕಡಿವಾಣ ಹಾಕುಂತೆ ಜಯಲಕ್ಷ್ಮಿ. ಪ್ರಮೋದ್ ಗಮನ ಸೆಳೆದರು.






ನಗರಸ ಶಿಥಿಲವಾದ ವಾಣಿಜ್ಯ ಮಳಿಗೆ ತೆರವುಗೊಳಿಸಿ ನೂತ ಮಳಿಗೆ ನಿರ್ಮಾಣ. ನೂತವಾಗಿ ಕಟ್ಟಿರುವ ಮಳಿಗೆ ಹರಾಜು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆದವು.
ಉಪಾಧ್ಯಕ್ಷೆ ಓ.ಸುಜಾತ.ಪೌರಯುಕ್ತ ಜಗರೆಡ್ಡಿ.ವ್ಯವಸ್ಥಾಪಕ ಲಿಂಗರಾಜ್ ಸದಸ್ಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.