September 16, 2025
IMG-20250916-WA0155.jpg

ಭಾರತದ ಹೆಮ್ಮೆಯ ಪುತ್ರ ನರೇಂದ್ರ ಮೋದಿಜಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಭಾರತ ಹೆಮ್ಮೆಯ ತಾಯಿಯ ಮಡಿಲಿನಲ್ಲಿ ಸೂರ್ಯನ ಹೊಂದಿರದಂತೆ ಶೌರ್ಯ ಪರಾಕ್ರಮಗಳನ್ನು ಭಾರತದ ಇತಿಹಾಸದ ಪುಟಗಳನ್ನು ನಿರ್ಮಿಸಲೆಂದೆ ದಿನಾಂಕ 17 ಒಂಬತ್ತು 1951ರಲ್ಲಿ ಗುಜರಾತಿನ ಮೆಸ್ಸಾನ ವಾಡ ನಗರದಲ್ಲಿ ಜನಿಸಿದ ದಾಮೋದರ್ ದಾಸ್ ಮತ್ತು ಹಿರಾಬೇನ ರವರ್ ಉದರದಲ್ಲಿ ಮಗು ಜನಿಸುತ್ತೆ ಆ ಮಗುವಿನ ನಾಮಾಂಕಿತದೆ ನರೇಂದ್ರ…

ಭಾರತ ಕಂಡ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಮಗುವಿಗೆ ತಂದೆ ತಾಯಿಗಳು ಇಡುತ್ತಾರೆ ಆ ಪ್ರಕಾಶತೆಯು ಪ್ರಬುದ್ಧತೆಯು ನರೇಂದ್ರ ಮೋದಿಯವರಿಗೆ ಅದು ಬೆಳೆಯುತ್ತಾ ಬೆಳೆಯುತ್ತಾ ನಾಯಕ ಗುಣಗಳನ್ನ ಬೆಳೆಸಿಕೊಳ್ಳುತ್ತಾ ಸಂಘ ಜೀವಿಯಾಗಿ ಶಾಲಾ ಶಿಕ್ಷಣವನ್ನು ಪಡೆದುಕೊಂಡು ಬೆಳೆಯತೊಡಗಿದೆ ಮೋದಿಜಿ,, ಸ್ವತಂತ್ರ ಪೂರ್ವದಕಾಲದಲ್ಲಿ ಆಂಗ್ಲರ ಹಂಗಿನಲ್ಲಿ ಕೋಮು ಗಲಭೆಗಳ ಮಧ್ಯದಲ್ಲಿ ರಾಷ್ಟ್ರದ ರಾಷ್ಟ್ರೀಯತೆಯ ರಾಷ್ಟ್ರ ಪ್ರೇಮವ ಕಟ್ಟಿಕೊಡುವ ಕಾಲಘಟ್ಟದಲ್ಲಿ ಆರಂಭವಾಗಿರುವ ರಾಷ್ಟ್ರೀಯ ಸ್ವಯಂಸೇವಕರ ಸಂಘವನ್ನ ತಮ್ಮ 20ನೇ ವಯಸ್ಸಿನಲ್ಲಿ ಅಂದರೆ 1970ರಲ್ಲಿ ಸೇರಿಕೊಳ್ಳುತ್ತಾರೆ.

ಆರಂಭದ ಕೌಶಲ್ಯದಲ್ಲಿ ಎಲ್ಲರನ್ನ ತಮ್ಮತ್ತ ಸೆಳೆಯುವ ಹೃದಯವಂತ ವಿಶಾಲ ಮನೋಭಾವದ ಅಗ್ರಜನಾಗಿ ನರೇಂದ್ರ ದಾಮೋದರ್ ಮೋದಿ ಆರ್ ಎಸ್ ಎಸ್ ನ ಸ್ವಯಂಸೇವಕರಾಗಿ ಗುಜರಾತಿನ ಭಾಗದ ಪ್ರಮುಖ ಪ್ರಚಾರಕನಾಗಿ ಸೇವೆ ಸಲ್ಲಿಸುತ್ತಾ ದೇಶಕ್ಕೆ ಬಂದಂತಹ 1977ರ ತುರ್ತು ಪರಿಸ್ಥಿತಿಯ ಆ ಕಾಲಘಟ್ಟದ ಕರಾಳತೆಯ ಕರಿಚಾಯನ ಸೂರ್ಯನ ಹೊಂಗಿರಣದಂತೆ ಬೆಳಕನ್ನು ಚೆಲ್ಲಿ ಮತ್ತೆ ಹೊಸತನವನ್ನು ಸೃಷ್ಟಿಸಿದ ನರೇಂದ್ರ ಮೋದಿಜಿ 1980 ರಲ್ಲಿ ಪ್ರತಿ ಹಳ್ಳಿಯಲ್ಲೂ ಕೂಡ ಆರ್ ಎಸ್ ಎಸ್ ಸಿ ನ ಶಾಖೆಗಳು ಪ್ರಾರಂಭವಾಗಬೇಕೆಂಬ ಆಸೆ ಇಟ್ಟುಕೊಂಡು ಸಾಗುತ್ತಾ ಸಾಗುತ್ತಾ ಅದೆಷ್ಟು ಹಳ್ಳಿಗಳಲ್ಲಿ ರಾಷ್ಟ್ರ ಪ್ರೇಮದ ಮಾತಿನ ಚಾಕ ಚಕ್ಕತೆಯಲ್ಲಿ ಮೋದಿಜಿ ಪಯಣ ಸಾಗುತ್ತೆ ಎಲ್ಲರ ಸ್ನೇಹದಲ್ಲಿ , ಸಮಾನತೆಯಲ್ಲಿ ಎಲ್ಲರೂ ಭಾರತ ಮಾತೆಯ ಮಕ್ಕಳಂತೆ ಕಾಣುವ ಗುಣದ ವ್ಯಕ್ತಿ ಒಂದು ಶಕ್ತಿಯಾಗಿ ನಿಲ್ತಾರೆ ಗುಜರಾತ್ ನಲ್ಲಿ,, ಪದವೀಧರರಾಗಿ ವಿಶೇಷವಾದ ಮಿತ್ರರ ಕೊಡುಗೆಯಲ್ಲಿ ರಾಷ್ಟ್ರ ಪ್ರೇಮವನ್ನ ಭವ್ಯ ಭಾರತಕ್ಕೆ ಸಮರ್ಪಣೆಗೆ ಸಿದ್ದರಾಗಿರುತ್ತಾರೆ.

ವಿವಾಹವನ್ನ ಜಶೋದಾಬಿನ್ ರವರ ಜೊತೆ ನಡೆಯುತ್ತೆ.. ಜನ ಮೆಚ್ಚುಗೆ ಪಡೆದ ಜನನಾಯಕನಾಗಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪಟ್ಟ ಶಿಷ್ಯನಾಗಿ ಅಯೋಧ್ಯ ರಾಮಮಂದಿರದ ಜಾಗೃತ ಸಮಾವೇಶ ಸಭೆಗಳನ್ನು ನಡೆಸುತ್ತಾ ಸನಾತನ ಗುಣಗಳನ್ನು ಬೆಳೆಸಿಕೊಂಡ ನರೇಂದ್ರ ಮೋದಿಜಿಯವರನ್ನ ಪ್ರಥಮ ಬಾರಿಗೆ 2001 ರಲ್ಲಿ ಮುಖ್ಯಮಂತ್ರಿ ಆಗಿ ಗುಜರಾತಿನ ಸಾರ್ವಭೌಮತ್ವದ ಪ್ರಜಾಸತ್ತಾತ್ಮಕತೆಯ ಮುಖ್ಯಮಂತ್ರಿ ಗದ್ದುಗೆ ಇರ್ತಾರೆ ಮತ್ತೆ ವಿಶ್ವಾಸದಲ್ಲಿ ಇನ್ನೆರಡು ಬಾರಿ ಮುಖ್ಯಮಂತ್ರಿಯಾಗಿ ಒಟ್ಟು ಮೂರು ಬಾರಿ ಗುಜರಾತಿನ ಮುಖ್ಯಮಂತ್ರಿಯಾಗಿ ಪ್ರಸ್ತುತ ಈಗ ಮೂರನೇ ಬಾರಿ ರಾಷ್ಟ್ರದ ಪ್ರಧಾನಿಯಾಗಿ ವಿಶ್ವವನ್ನೇ ಭಾರತದ ಹತ್ತಿರ ಮಾಹಿತಿಗೆ ಸಹಾಯಕ್ಕೆ ಸಹಕಾರಕ್ಕೆ ತಂತ್ರಜ್ಞಾನಕ್ಕೆ ಮತ್ತು ಹಲವು ಯೋಜನೆಗಳ ಕಾರ್ಯ ಯೋಜನೆಗೆ ಕೈಜೋಡಿಸುವಂತೆ ಕೇಳುತ್ತಿವೆ ಇದು ಮೋದಿಜಿ ಅವರ ದಿಟ್ಟ ನಿರ್ಧಾರ ಯಾವ ರಾಜ್ಯದಲ್ಲಿ ಇರುವ ಮಾತೃಭಾಷೆಯನ್ನೇ ಒಂದೆರಡು ಸಾಲುಗಳಲ್ಲಿ ಉಚ್ಚರಿಸುತ್ತಾ ಅಲ್ಲಿರುವ ಹಿರಿಯ ನಾಯಕರನ್ನು ಯೋಧರನ್ನ ಹಾಗೆ ಶರಣರನ್ನ ಗುರುಗಳನ್ನ ಮತ್ತು ಸಾಧನೆಗೈದ ಮಹಾಪುರುಷರನ್ನ ಹಾಡಿ ಹೊಗಳಿ ಅವರ ತ್ಯಾಗ ಬಲಿದಾನವನ್ನ ನೆರೆದಿರುವ ಜನಸ್ತೋಮಕ್ಕೆ ಆ ಹೃದಯದ ಮಿಡಿತಕ್ಕೆ ಪುಳಕಿತಗೊಳ್ಳುವಂತೆ ರವಾನಿಸುವುದು ಮೋದಿಜಿ ಅವರ ಪ್ರಭುತ್ವದ ಕೈಗನ್ನಡಿಯಾಗಿದೆ…

ತನಗೆ ತನ್ನ ಸ್ವಂತಕ್ಕೆ ತನ್ನವರಿಗಾಗಿ ಬೇಕು ಎಂಬ ಸ್ವಾರ್ಥಭಾವವಿಲ್ಲದೆ ಸರ್ವೇ ಜನ ಸುಖಿನೋ ಭವಂತು ಎಂಬಂತೆ ವಿಶ್ವಕ್ಕೆ ಭಾರತವೇ ವಿಶ್ವಗುರು ಆಗುವ ಎಲ್ಲಾ ಸದೃಢತೆಯನ್ನ ಧೈರ್ಯ ಸ್ಥೈರ್ಯ ಶಿಕ್ಷಣ ಉದ್ಯೋಗ ಆಡಳಿತ ವ್ಯವಹಾರ ಅಂತರಾಷ್ಟ್ರದ ಗಡಿಗಳ ಭದ್ರತೆ ಯೋಧರ ಬಲವನ್ನ ಹೆಚ್ಚಿಸುವ ಸಾಧನಗಳ ಖರೀದಿ ಹಾಗೆ ಬಡತನ ನಿರ್ಮೂಲನೆ ಸ್ವಚ್ಛ ಭಾರತ ಕಲ್ಪನೆ ಅಂತರಾಷ್ಟ್ರೀಯ ಯೋಗವನ್ನ ಕೊಂಡೊಯ್ಯುವ ಹೆಗ್ಗಳಿಕೆ ಮತ್ತು ಸದಾ ಸಕ್ರಿಯರಾಗಿ ದೇಶ-ವಿದೇಶಗಳನ್ನ 75ರ ಈ ಇಳಿ ವಯಸ್ಸಿನಲ್ಲಿ ಸುಸ್ತು ಕಾಣದೆ ಮುಖದಲ್ಲಿ ಮಂದಹಾಸ ಹೃದಯದಲ್ಲಿ ಸ್ಥೈರ್ಯ ಕಾಲಿನಲ್ಲಿ ಬಲತ್ವ ಮತ್ತು ಯೋಗದ ಪ್ರತಿನಿತ್ಯದ ಜೀವನ ಕ್ರಮ ಮಿತ ಆಹಾರ ಹೀಗೆ ವಿಶೇಷವಾದ ರಕ್ಷಣಾ ಭದ್ರತೆಯಲ್ಲಿ ನಮ್ಮೆಲ್ಲರಿಗೂ ಹೆಮ್ಮೆಯಾಗುವಂತೆ ಮೋದಿಜಿ ವಿದೇಶದಲ್ಲೂ ಕೂಡ ರಾಷ್ಟ್ರಧ್ವಜ ರಾಷ್ಟ್ರಗೀತೆ ಮತ್ತು ಭಾರತದ ವಿಶೇಷವಾದ ಇತಿಹಾಸವನ್ನ ಕೇಳುವಂತೆ ವಿದೇಶಿಗರಿಗೂ ಮೆಚ್ಚುಗೆ ಆಗುವ ಪ್ರಧಾನಿಯಾಗಿ ಭಾರತ ಕಂಡ ಪ್ರತಿಮಾ ಪ್ರಬುದ್ಧ ಪ್ರಾಮಾಣಿಕ ಪರೋಪಕಾರಿ ನರೇಂದ್ರ ಮೋದಿಜಿಯವರ ಹುಟ್ಟುಹಬ್ಬ ಈ ಸಂಭ್ರಮದಲ್ಲಿ ನಾವಿದ್ದೇವೆ ದೈವಭಕ್ತರಾಗಿ ಸದಾ ಚಿಂತನಶೀಲರಾಗಿ ಮನ್ ಕಿ ಬಾತ್ ಎಂಬ ಬಹುನ್ನತವಾದ ಅವರ ವಿಚಾರ ವಿನಿಮಯವನ್ನು ಪ್ರತಿವಾರ ಎಲ್ಲರ ಕೇಳುಗರ ಕಿವಿಗೆ ಕಳಿಸುತ್ತಾ ತಂತ್ರಜ್ಞಾನದಲ್ಲಿ ಹಾಗೆ ಬಾಹ್ಯಾಕಾಶದ ಪ್ರಯೋಗಗಳಲ್ಲಿ ಅವಿಸ್ಕಾರದಲ್ಲಿ ಸದಾ ಎಲ್ಲರ ಒಟ್ಟಿಗೆ ಇರುವ ಮೋದಿಜಿ ಅವರು ಪ್ರಕೃತಿ ವಿಕೋಪ ವಾದಾಗ ಯುದ್ಧದ ಅಪಾಯಗಳಿದ್ದಾಗ ಕಷ್ಟಗಳು ತೆಲೆದೂರಿದಾಗ ಜನಗಳ ಹತ್ತಿರ ಸ್ಪಂದಿಸುವ ನಾಡಿಮಿಡಿತ ಮೋದಿಜಿ ಅವರಿಗೆ ದೈವ ದತ್ತ ವರವಾಗಿ ಬಂದಿದೆ .

ಎಲ್ಲರಿಗೂ ಮಾರ್ಗ ದರ್ಶಕರಾಗಿ ಪಾಠ ಪ್ರವಚನಗಳ ಚಿಂತನೆಗಳ ಮಠಮಾನ್ಯ ದೇಗುಲಗಳ ಹಾಗೂ ವಿಕಾಸದ ಹಾದಿಯಲ್ಲಿ ಸಾಗುವ ನರೇಂದ್ರ ಮೋದಿಜಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading