September 16, 2025
1758028045686.jpg


ಹಿರಿಯೂರು:
ತಾಲ್ಲೂಕಿನ ಕಲ್ವಳ್ಳಿಭಾಗದ ದಿಂಡಾವರ ಗ್ರಾಮದಲ್ಲಿ ವಿಚಿತ್ರ ಸಾಂಕ್ರಾಮಿಕ ರೋಗವಾದ ಚರ್ಮಬೇನೆ ಹಾಗೂ ಚರ್ಮದ ತುರಿಕೆ ಇಡೀ ಊರಿನ ಅರ್ಧ ಜನಗಳಿಗೆ ಆಗಿದ್ದು, ಈ ಬಗ್ಗೆ ಗ್ರಾಮದ ಜನರಲ್ಲಿ ತೀವ್ರ ಆತಂಕ ಮನೆಮಾಡಿದೆ ಎಂಬುದಾಗಿ ಗ್ರಾಮದ ಮುಖಂಡರಾದ ಡಿ.ಚಂದ್ರಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗ್ರಾಮದ ಬಹಳಷ್ಟು ಜನರು ಇದೇನೋ ಗುಪ್ತ ಕಾಯಿಲೆ ಎನ್ನುವ ಹಾಗೆ ಹೆದರಿ ಗಾಬರಿಗೊಂಡಿದ್ದು, ವೈದ್ಯರುಗಳಿಗೆ ತೋರಿಸುತ್ತಿಲ್ಲ, ಹಾಗೂ ಈ ತುರಿಕೆ ಹೆಚ್ಚು ಮಾರ್ಮಾಂಗಗಳ ಜಾಗದಲ್ಲಿ ಆಗಿದ್ದು, ರೋಗಿಗಳು ಮುಜುಗರಕ್ಕೆ ಒಳಪಟ್ಟು ಈ ರೋಗವನ್ನು ವೈದ್ಯರಿಗೆ ತೋರಿಸುವುದಿಲ್ಲ. ಅಲ್ಲದೆ,
ಕೆಲವು ಗ್ರಾಮಸ್ಥರು ಹೇಳುವ ಪ್ರಕಾರ ಈ ತುರಿಕೆ ಎಷ್ಟು ಆಸ್ಪತ್ರೆಗೆ ತೋರಿಸಿದರೂ ಸಹ ಆ ಜಾಗದಲ್ಲಿ ಹೋಗಿ ಬೇರೆಕಡೆ ಕಾಣಿಸಿಕೊಳ್ಳುತ್ತದೆ ಎಂಬುದಾಗಿ ಹೇಳುತ್ತಿದ್ದಾರೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಗ್ರಾಮದಲ್ಲಿ ಪರಸ್ಪರ ಸಂಪರ್ಕದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂಬುದಾಗಿ ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಈ ಸಾಂಕ್ರಾಮಿಕ ರೋಗ ಹರಡಲು ಕಾರಣವೇನೆಂದು ತಿಳಿದುಕೊಳ್ಳುವುದು ಆರೋಗ್ಯ ಇಲಾಖೆಗೆ ಅವಶ್ಯಕವಾಗಿದ್ದು, ಜನಗಳಿಗೆ ಈ ರೋಗದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಗಮನಹರಿಸುವ ಮೂಲಕ ತಜ್ಞ ವೈದ್ಯರನ್ನು ಗ್ರಾಮಕ್ಕೆ ಕಳುಹಿಸಿಕೊಡಬೇಕಾಗಿದೆ ಎಂದರಲ್ಲದೆ,
ಈ ವಿಚಾರವನ್ನು ಜಿಲ್ಲಾಡಳಿತ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಗ್ರಾಮದಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗಕ್ಕೆ ತುರ್ತಾಗಿ ದಿಂಡಾವರಕ್ಕೆ ಉತ್ತಮ ಚರ್ಮರೋಗ ತಜ್ಞ ವೈದ್ಯರನ್ನು ಕರೆಸಿ, ಅಲ್ಲಿಯ ಜನರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಈ ರೋಗವನ್ನು ತಡೆಗಟ್ಟಬೇಕು ಎಂಬುದಾಗಿ ಅವರು ಗ್ರಾಮಸ್ಥರ ಪರವಾಗಿ ಮನವಿ ಮಾಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading