September 14, 2025
IMG-20250816-WA0218.jpg

.ವರದಿ ಕೆ.ಟಿ. ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ:-ನಮ್ಮ ಮಕ್ಕಳನ್ನು ದೇವರಂತೆ ಆರಾಧಿಸೋಣ ನಮ್ಮ ಸನಾತನ ಧರ್ಮ ಭಾರತೀಯ ಸಂಸ್ಕೃತಿ ಪ್ರತಿಯೊಬ್ಬರಿಗೂ ಪಸರಿಸೋಣ.ರಾಧಾಕೃಷ್ಣ ವೇಷಧರಿಸಿದ ಮಕ್ಕಳನ್ನು ದೈವಿ ಭಾವನೆಯಿಂದ ಕಾಣಬೇಕಿದೆ ಇವರನ್ನು ದೈವತ್ವಕ್ಕೆ ಹೋಲಿಸಬೇಕು.

ನಾಯಕನಹಟ್ಟಿ ಪಟ್ಟಣದಲ್ಲಿ ಮೂರನೇ ಬಾರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಇಸ್ಕಾನ್ ನರಸಿಂಹ ಗಿರೀಧಾರಿ ಮಂದಿರ ಬೆಂಗಳೂರು ಇವರ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ.ಯಾವುದೇ ಜಾತಿ ಮತ ಭೇದ ಭಾವವಿಲ್ಲದೆ ಶ್ರೀಕೃಷ್ಣನ ಜಯಂತಿ ಕಾರ್ಯಕ್ರಮವನ್ನು ಜಾತಿಭೇದ ಮರೆತು ನಾವೆಲ್ಲರೂ ಮಾನವ ಧರ್ಮ ಎಂಬುವ ಮನೋಭಾವನೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಭಗವಂತನ ನಾಮ ಸ್ಮರಣೆಯಿಂದ ಕಲಿಯುಗದ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತವಾಗಿ ಭಗವಂತನಿಗೆ ಆರತಿ ಪ್ರವಚನ ಮಕ್ಕಳಿಂದ ನಾಟಕ ಪ್ರಸ್ತುತ ಪಡಿಸಲಾಗಿದೆ.

ಶ್ರೀಕೃಷ್ಣನು ಸನಾತನ ಧರ್ಮದ ಜೀವಂತ ಪ್ರತೀಕ. ಅವರು ಕೇವಲ ಪೌರಾಣಿಕ ವ್ಯಕ್ತಿ ಅಲ್ಲ, ಧರ್ಮ, ಭಕ್ತಿ, ಪ್ರೀತಿ ಮತ್ತು ಜ್ಞಾನಗಳ ಸಾರವನ್ನು ಬೋಧಿಸಿದವರು.

ಶ್ರೀಕೃಷ್ಣನು ಸನಾತನ ಧರ್ಮ ಸಂರಕ್ಷಕ,ಶ್ರೀಕೃಷ್ಣನು ರಾಧೆ-ಗೋಪಿಕರೊಂದಿಗೆ ನಡೆಸಿದ ಪ್ರೇಮಲೀಲೆಗಳು ಕೇವಲ ಆಟವಲ್ಲ; ಅದು ಭಕ್ತಿ-ಪ್ರೇಮದ ಪರಮ ರೂಪ.ಮಹಾಭಾರತದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ನೀಡಿದ ಭಗವದ್ಗೀತೆ ಜಗತ್ತಿನ ಅತ್ಯಂತ ಮಹತ್ತರ ಧಾರ್ಮಿಕ ಗ್ರಂಥ. ಅದು ಸನಾತನ ಧರ್ಮದ ತತ್ವಶಾಸ್ತ್ರದ ಸಾರ.ಫಲಾಪೇಕ್ಷೆಯಿಲ್ಲದೆ ಕರ್ತವ್ಯ ಮಾಡುವುದನ್ನು ಶ್ರೀಕೃಷ್ಣನು ಕಲಿಸಿದರು. ಇದು ಸನಾತನ ಧರ್ಮದ ಪ್ರಮುಖ ತತ್ವ.ಕೃಷ್ಣನು ಯಾವಾಗಲೂ ಸತ್ಯ, ನೀತಿ ಮತ್ತು ನ್ಯಾಯದ ಪರವಾಗಿದ್ದನು.

ಸನಾತನ ಧರ್ಮ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.ಪ್ರೀತಿ, ದಯೆ, ಭಕ್ತಿ ಜೀವನದ ಆಧಾರ.ದೇವರಲ್ಲಿ ಶರಣಾಗುವುದು ಮುಕ್ತಿಗೆ ದಾರಿ.ಕರ್ಮವೇ ಪೂಜ್ಯ, ಆದರೆ ಅದು ಧರ್ಮಸಮ್ಮತವಾಗಿರಬೇಕು.
ಆದ್ದರಿಂದ ಶ್ರೀಕೃಷ್ಣನು ಸನಾತನ ಧರ್ಮದ ದಾರಿದೀಪ, ಭಕ್ತರ ಹೃದಯದ ಚಿರಂತನ ದೇವರು ಎಂದು ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮನ್ ಮುರಾರಿ ಮಾಧವ ದಾಸ್ ಪ್ರಭುಜಿ ಯವರು ತಿಳಿಸಿದ್ದರು.

ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಪಟ್ಟಣ ಪಂಚಾಯ್ತಿ ಸದಸ್ಯ ಜೆ.ಆರ್. ರವಿಕುಮಾರ್, ಶ್ರೀಕಾಂತ್, ಹಾಗೂ ನಲಗೇತನಹಟ್ಟಿ ಶ್ರೀಮತಿ ಸುಮಾ ಜಿ.ವೈ.ತಿಪ್ಪೇಸ್ವಾಮಿ. ಉಮಾ ಬೋರಸ್ವಮಿ. ರಾಮಕಮಲೇಸ್ ದಾಸ್ ಪ್ರಭುಜಿ. ಸುಧಾ ರಂಗಸ್ವಾಮಿಮಾತಾಜಿ. ಕಾವ್ಯ ಮಾನಸ. ನಾಗರತ್ನ ಮಮತಾ ರೂಪ ದೇವಿಕಾ ಎಲ್ಲ ವೈಷ್ಣವ ಭಕ್ತರು ಪಂಚಾಯತಿ ಸದಸ್ಯರುಅಮಸ್ತ ಸಮಸ್ತ ನಾಯಕನಹಟ್ಟಿ ಗ್ರಾಮಸ್ಥರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading