September 15, 2025
IMG-20250416-WA0148.jpg

ಜಾತಿ ಗಣತಿ ವೈಜ್ಞಾನಿಕ ವಾಗಿದ್ದರೆ ಮಾತ್ರ ನಮ್ಮ ಜನಾಂಗದ ಸಮ್ಮತಿ ಇದೆ ಎಂದು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ತಿಪ್ಪೇಸ್ವಾಮಿಹೇಳಿದರು
ಅವರು ನಾಯಕನಹಟ್ಟಿ ಪಟ್ಟಣದಲ್ಲಿ ಶ್ರೀ ವಾಲ್ಮೀಕಿ ಭವನದ ಹೊಸಲು ಮತ್ತು ಬಾಗಿಲನ್ನು ಇಡುವಂತಹ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಕಾಂತರಾಜ್ ಅವರ ಜಾತಿ ಗಣತಿ ವರದಿಯಲ್ಲಿ 42 ಲಕ್ಷ ವಾಲ್ಮೀಕಿ ಜನಾಂಗದ ಜನಸಂಖ್ಯೆ ಇದೆ ಎಂದು ಉಲ್ಲೇಖಿಸಲಾಗಿದೆ ಆದರೆ 2011ರ ಜನಗಣತಿಯಲ್ಲಿ ರಾಜ್ಯದಲ್ಲಿವಾಲ್ಮೀಕಿ ಜನಾಂಗ 42 ಲಕ್ಷ ಇದೆ ಇದಾದ ನಂತರ ರಾಜ್ಯದಲ್ಲಿ ನಾಯಕ ಜನಾಂಗದ ಉಪಜಾತಿಗಳಾದ ತಳವಾರ ಮತ್ತಿತರ ಜಾತಿಗಳನ್ನು ಸೇರಿಸಲಾಗಿದೆ ಈ ಜಾತಿಗಳ ಜನಸಂಖ್ಯೆ ರಾಜ್ಯದಲ್ಲಿ 14 ಲಕ್ಷ ಇದೆ ಮತ್ತು 2011 ರಿಂದ 2024ರವರೆಗಿನ ಜನಸಂಖ್ಯೆಯು ಸೇರಿದಂತೆ ಅಂದಾಜು 60 ಲಕ್ಷ ಜನಸಂಖ್ಯೆಯು ವಾಲ್ಮೀಕಿ ನಾಯಕ ಜನಾಂಗದ ರಾಜ್ಯದಲ್ಲಿದೆ ನಾಯಕನಹಟ್ಟಿ ತಾಲೂಕು ಭಾಗದಲ್ಲಿನ ಯಾವುದೇ ಮನೆಗಳಿಗೆ ಸಮೀಕ್ಷೆಯ ಗಣತಿ ದಾರರು ಬಂದಿರುವುದಿಲ್ಲ ಈಗ ಸರ್ಕಾರಕ್ಕೆ ನೀಡಿರುವಂತಹ ಜಾತಿಗಣತಿ ವರದಿಯಲ್ಲಿ ಈ ಎಲ್ಲಾ ನ್ಯೂನ್ಯತೆಗಳಿವೆ ಆದುದರಿಂದ ಜಾತಿ ಗಣತಿಯನ್ನು ಸರ್ಕಾರ ಒಪ್ಪುವುದಾದರೆ ವೈಜ್ಞಾನಿಕವಾಗಿ ಜಾತಿಗಣತಿ ಮಾಡಿ ಅಂತಿಮ ನಿರ್ಧಾರಕ್ಕೆ ಬರಬೇಕು ಇಲ್ಲದೆ ಹೋದಲ್ಲಿ ಜನಾಂಗದ ಅಸ್ತಿತ್ವ ಮತ್ತು ಸ್ವಾಭಿಮಾನದ ಪ್ರಶ್ನೆ ಇದು ಉಗ್ರ ಹೋರಾಟದ ದಿಕ್ಕಿನಲ್ಲಿ ಜನಾಂಗ ಸಾಗುವುದು ನಿಶ್ಚಿತ ಎಂದು ಹೇಳಿದರು
ತದನಂತರ ಕಲ್ಯಾಣ ಮಂಟಪದ ಹೊಸಲು ಮತ್ತು ಬಾಗಿಲನ್ನು ಇಟ್ಟು ಪೂಜೆ ನೆರವೇರಿಸಿ ಮಾತನಾಡಿ ಸರ್ಕಾರದಿಂದ ನೀಡಿರುವಂತಹ ಮೂರು ಕೋಟಿಗೆ ಈ ಭವನ ನಿರ್ಮಾಣವಾಗುವುದು ಕಷ್ಟ ಉತ್ತಮವಾದಂತಹ ನೆಲಹಾಸು ಟೈಲ್ಸ್ ಗಳು ನಲ್ಲಿಗಳು ಎಸ್ ಎಸ್ ಸ್ಟೀಲ್ ಮತ್ತು ವಿದ್ಯುತ್ ದೀ ಪಗಳನ್ನು ಈ ಮೊಬ ಲಿಗಿನಲ್ಲಿ ಅಸಾಧ್ಯ ಆದುದರಿಂದ ಈ ಭವನ ಪರಿಪೂರ್ಣವಾಗಿ ಆಗಲು ಎಚ್ಚರವಾಗಿ 50 ಲಕ್ಷಗಳ ಅನುದಾನದ ಅವಶ್ಯಕತೆ ಇರುವುದರಿಂದ ಈ ಭಾಗದ ಶಾಸಕರು ಈ ವಿಚಾರದ ಬಗ್ಗೆ ಆದ್ಯ ಗಮನ ಹರಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ಭಾಗದ ಲೋಕಸಭಾ ಸದಸ್ಯರು ಶಾಸಕರು ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲೆಯ ಉಳಿದಂತ ಶಾಸರುಗಳನ್ನು ಸಂಪರ್ಕ ಮಾಡಿ ಪರಿಪೂರ್ಣವಾದ ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಲು ಜನಾಂಗದ ಎಲ್ಲ ಮುಖಂಡರು ತೀರ್ಮಾನಿಸಿದ್ದಾರೆ ಎಂದು ಹೇಳಿದರು

ಸಮಾರಂಭದಲ್ಲಿ ಬೊರುಸ್ವಾಮಿ ಬಸಪ್ಪ ನಾಯಕ ಬೈಯಣ್ಣ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading