ಕರ್ನಾಟಕ ವಾರ್ತೆ.ಮಾ.16:
ಆರೋಗ್ಯವಂತ ಮಕ್ಕಳು ಆರೋಗ್ಯವಂತ ರಾಷ್ಟ್ರ ಎಂದು ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಿ ಶಿವಕುಮಾರ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕ್ ಅರೋಗ್ಯ ಅಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ಸೋಮವಾರ ರಾಷ್ಟ್ರೀಯ ಲಸಿಕಾ ದಿನದ ಪ್ರಯುಕ್ತ ಸಾರ್ವಜನಿಕರಿಗೆ ಆಯೋಜಿಸಿದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರಾದ್ಯಂತ ಒಂದು ವರ್ಷದ ಒಳಗಿನ ಮಕ್ಕಳಿಗೆ 12 ಮಾರಕ ರೋಗಗಳ ವಿರುದ್ಧ ಉಚಿತವಾಗಿ ಲಸಿಕೆಗಳನ್ನು ನೀಡುವ ಮುಖಾಂತರ ಮಾರಕ ರೋಗಗಳನ್ನು ತಡೆಯಲಾಗುತ್ತದೆ ಹಾಗೂ ರಾಷ್ಟ್ರಾದ್ಯಂತ ಗರ್ಭಕಂಠದ ಕ್ಯಾನ್ಸರ್ ತಡೆಯಲು 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್ ಪಿ ವಿ ಲಸಿಕೆ ನೀಡಲಾಗುತ್ತಿದ್ದು, ಇದರ ಸದುಪಯೋಗ ಅರ್ಹರು ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಅರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾಹಿತಿ ನೀಡಿ, ದೇಶದ ಜನರಿಗೆ ಲಸಿಕೆಗಳ ಮಹತ್ವ ತಿಳಿಯಲು ಪ್ರತಿವರ್ಷ ಮಾರ್ಚ್ 16 ರಂದು ರಾಷ್ಟ್ರೀಯ ಲಸಿಕಾ ದಿನವನ್ನು ಆಚರಿಸಲಾಗುತ್ತದೆ. ಲಸಿಕೆಯಿಂದಾಗಿ ಉಂಟಾಗುವ ವ್ಯಾಪಕ ರೋಗನಿರೋಧಕ ಶಕ್ತಿಯು ಸಿಡುಬನ್ನು ವಿಶ್ವದಾದ್ಯಂತ ನಿರ್ಮೂಲನೆ ಮಾಡಲು ಮತ್ತು ಪೋಲಿಯೋ, ದಡಾರ, ಟೆಟನಸ್ ನಂತಹ ರೋಗಗಳನ್ನು ಹೆಚ್ಚು ಪ್ರಮಾಣದಲ್ಲಿ ತಡೆಯಲು ಕಾರಣವಾಗಿದೆ. 1995 ರಿಂದ ಭಾರತದಲ್ಲಿ ಪೋಲಿಯೋ ವಿರುದ್ಧ ಮೌಕಿಕ ಲಸಿಕೆ ನೀಡುತ್ತಿದ್ದು, ಸಾರ್ವಜನಿಕರ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಆರೋಗ್ಯ ಇಲಾಖೆಯ ಪರಿಶ್ರಮದಿಂದ ದೇಶದಲ್ಲಿ ಪೋಲಿಯೋ ನಿರ್ಮೂಲನೆ ಮಾಡಲಾಗಿದೆ ಎಂದರು. ಮಾರಕ ರೋಗಗಳ ತಡೆಗೆ ಲಸಿಕೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು ಸಕಾಲಕ್ಕೆ ಸಾರ್ವಜನಿಕರು ಮಕ್ಕಳಿಗೆ ಲಸಿಕೆ ಹಾಕಿಸಿ ಆರೋಗ್ಯ ಕಾಪಾಡಿಕೊಂಡು ದೇಶಾಭಿವೃದ್ಧಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ, ಮಹಾಮಾರಿ ಕೋವಿಡ್ ಬಂದಂತಹ ಸಂದರ್ಭದಲ್ಲಿ ಲಸಿಕೆಯನ್ನು ಪಡೆಯುವ ಮುಖಾಂತರ ನಾವುಗಳೆಲ್ಲರೂ ರಕ್ಷಣೆ ಪಡೆದಿದ್ದೇವೆ ಎಂದರು.
ಆಶಾ ಮೆಂಟರ್ ತಬಿತ ಮಾತನಾಡಿ, ತಾಯಂದರೂ ಗರ್ಭಿಣಿ ಎಂದು ತಿಳಿದ ತಕ್ಷಣ ಆಶಾ ಕಾರ್ಯಕರ್ತೆ ಅಥವಾ ಆರೋಗ್ಯ ಅಧಿಕಾರಿಗಳಲ್ಲಿ ಹೆಸರು ನೋಂದಾಯಿಸಿ ತಾಯಿ ಕಾರ್ಡ್ ಪಡೆದು ಸೂಕ್ತ ಲಸಿಕೆ ಹಾಕಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ, ಪೌಷ್ಠಿಕ ಆಹಾರ ಸೇವಿಸಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಲಸಿಕಾ ಕಾರ್ಡ್ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಸಿಹೆಚ್‍ಒ ಶಾಂತಲಾ, ಪ್ರಯೋಗಶಾಲ ತಂತ್ರಜ್ಞಾಧಿಕಾರಿ ಅಭಿದಾಲಿ. ಎಸ್‍ಡಿಎ ಮದಕರಿ, ಆರೋಗ್ಯ ಸಿಬ್ಬಂದಿಗಳಾದ ಮಂಜುನಾಥ, ಹಿಂದುಮತಿ ಹಾಗೂ ಸಾರ್ವಜನಿಕರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.