March 16, 2026
FB_IMG_1773664280131.jpg

ಚಿತ್ರದುರ್ಗ ಮಾರ್ಚ್ 16:
ಜಿಲ್ಲೆಯಲ್ಲಿ ಗೃಹ ಬಳಕೆ ಎಲ್.ಪಿ.ಜಿ ಸಿಲಿಂಡರ್‍ಗಳ ಕೊರತೆಯಿಲ್ಲ, ನಿಯಮಾನುಸಾರವೇ ಆನ್‍ಲೈನ್ ನಲ್ಲಿ ಸಿಲಿಂಡರ್ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ಇಲಾಖೆ ಹಾಗೂ ಎಲ್.ಪಿ.ಜಿ ಸರಬರಾಜುದಾರರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅನಗತ್ಯ ಬುಕ್ಕಿಂಗ್ ಮಾಡುವ ಮೂಲಕ ಕೃತಕ ಅಭಾವ ಸೃಷ್ಟಿಸಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಪ್ರಸ್ತುತ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮವಾಗಿ ಉದ್ಭವಿಸಿರುವ ಎಲ್.ಪಿ.ಜಿ ಸರಬರಾಜು ವ್ಯತ್ಯಯವನ್ನು ನಿವಾರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 4,14,512 ಗ್ರಾಹಕರಿದ್ದು, (IOC- 1,02,358, BPC- 2,69,789 , HPC- 42,365), ಜಿಲ್ಲೆಗೆ ಅಗತ್ಯವಿರುವಷ್ಟು ದಾಸ್ತಾನು ಲಭ್ಯವಿದೆ ಎಂದು ತೈಲ ಕಂಪನಿಗಳ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬುಕ್ಕಿಂಗ್ ನಿಯಮಗಳು: ಒಂದು ಸಿಲಿಂಡರ್ ಡೆಲಿವರಿ ಪಡೆದ ನಂತರದಲ್ಲಿ ಮತ್ತೊಂದು ಸಿಲಿಂಡರ್ ಬುಕ್ಕಿಂಗ್ ಮಾಡಲು ನಗರ ಪ್ರದೇಶದಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್, ಕಂಪನಿ ಆ್ಯಪ್‍ಗಳು, ವಾಟ್ಸಾಪ್ ಅಥವಾ ಐವಿಆರ್‍ಎಸ್ ಮೂಲಕ ಮಾತ್ರ ಬುಕ್ಕಿಂಗ್ ಮಾಡಬೇಕು. ಆನ್‍ಲೈನ್ ಬುಕ್ಕಿಂಗ್ ಆಗದ ಹೊರತು ನೇರವಾಗಿ ಏಜನ್ಸಿಗಳು ಸಿಲೆಂಡರ್ ನೀಡುವುದಿಲ್ಲ. ವಿನಾಕಾರಣ ಸಾರ್ವಜನಿಕರು ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲಬಾರದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋರಿದ್ದಾರೆ.
ಅಕ್ರಮಗಳ ವಿರುದ್ಧ ಎಚ್ಚರಿಕೆ: ಗೃಹ ಬಳಕೆ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಅಥವಾ ಅನಧಿಕೃತವಾಗಿ ರೀಫಿಲ್ಲಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ‘ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000’ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದ್ದಾರೆ.
ಸಿಲೆಂಡರ್ ಸಮಸ್ಯೆಗೆ ಅಧಿಕಾರಿಗಳನ್ನು ಸಂಪರ್ಕಿಸಲು ಸೂಚನೆ:
************ ಎಲ್.ಪಿ.ಜಿ ಸರಬರಾಜಿನಲ್ಲಿ ಸಮಸ್ಯೆ ಕಂಡುಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಚಿತ್ರದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ರಚನಾ ಎಂ. (9591381329), ಶಬಾನಾ ಪರ್ವೀನ್ (8792244006), ನಿರಂಜನ್ (9164488263) ಹಾಗೂ ತಿಪ್ಪೇಸ್ವಾಮಿ, (8618966123). ಹೊಸದುರ್ಗ ತಾಲ್ಲೂಕಿಗೆ ಸಂಬಂಧಿಸಿದ ಗಂಗಾಧರ್, (7760084045), ಲಿಂಗರಾಜ್ (8904806637), ಮತ್ತು ಉಮಾದೇವಿ (8722544472), ಹಿರಿಯೂರು ತಾಲ್ಲೂಕಿಗೆ ಸಂಬಂದಿಸಿದಂತೆ ನಾಗೇಂದ್ರ.ಜಿ (7411462337), ಚಳ್ಳಕೆರೆ ತಾಲ್ಲೂಕಿಗೆ ಸಂಬಂದಿಸಿದಂತೆ ಶ್ರೀನಿವಾಸ್ (9448566953), ಹಾಗೂ ಗಿರೀಧರ್ (9880186797), ಮೊಳಕಾಲ್ಮೂರು ತಾಲ್ಲೂಕಿಗೆ ಸಂಬಂದಿಸಿದಂತೆ ಗೀತಾಂಜನೇಯ (9880649688) ಹಾಗೂ ಜಿಲ್ಲಾ ಮಟ್ಟದ ಮಾಹಿತಿಗಾಗಿ ಜಂಟಿ ನಿರ್ದೇಶಕರ ದೂರವಾಣಿ ಸಂಖ್ಯೆ 08194-222408 ಗೆ ಕರೆ ಮಾಡಬಹುದು.
ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಬಿಪಿಸಿಎಲ್ ಕಂಪನಿಯ ಸುಶ್ರೀಮ ಬೇಹರಾ, ಹೆಚ್‍ಪಿಸಿಎಲ್ ಕಂಪನಿಯ ಮ್ಯಾನೇಜರ್‍ಗಳಾದ ಪ್ರಸೂನ್ ಮಾಲ್, ಭರತ್ ಚಂದ್ರ, ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರು ಇದ್ದರು.

===========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading