ನಾಯಕನಹಟ್ಟಿ- 2026ರ ಯುಗಾದಿ ಹಬ್ಬದಲ್ಲಿ ನಾಯಕನಹಟ್ಟಿ- ಹೋಬಳಿಯಲ್ಲಿ ಸಾರ್ವಜನಿಕರು ಯುಗಾದಿ ಹಬ್ಬದಲ್ಲಿ ಜೂಜಾಟ ಆಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಜಿ.ಪಾಂಡುರಂಗಪ್ಪ. ತಿಳಿಸಿದರು.
ಸೋಮವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 2026ರ ಯುಗಾದಿ ಹಬ್ಬದಲ್ಲಿ ನಾಯಕನಹಟ್ಟಿ ಹೋಬಳಿಯಾದ್ಯಂತ ಯಾವುದೇ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಹಾಗೂ ಇತರೆ ಬಗೆಯ ಜೂಜಾಟಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಜೂಜಾಟ ಕಾನೂನು ಬಾಹಿರವಾಗಿದ್ದು ಸರ್ಕಾರ ರದ್ದು ಮಾಡಿರುತ್ತದೆ ಆದ್ದರಿಂದ ಸಾರ್ವಜನಿಕರು ಯಾವುದೇ ಅಂಗಡಿ ಶಾಮಿಯನ್ ಮನೆಗಳಲ್ಲಿ ತೋಟದ ಮನೆ ಹೋಟೆಲ್ಗಳಲ್ಲಿ ಹಾಗೂ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಬೇರೆ ಯಾವುದೇ ಸ್ಥಳದಲ್ಲಿ ಇಸ್ಪೀಟ್ ಆಡುವಂತಿಲ್ಲ ಇಸ್ಪೀಟ್ ಆಟ ಆಡಲು ಕುಮ್ಮಕ್ಕು ಅಥವಾ ಸಹಕರಿಸಿದ ಯಾವುದೇ ಅಂಗಡಿ ಮನೆ ತೋಟದಮನೆ ಹೋಟೆಲ್ಗಳ ಮಾಲೀಕರ ಆರೋಪಿಗಳನ್ನಾಗಿ ಕಾನೂನು ಕ್ರಮ ಜಗಿಸಲಾಗುವುದು ಸಾರ್ವಜನಿಕರಿಗೆ ಇಸ್ಪೀಟ್ ಆಟ ಆಡುವುದು ಕಂಡು ಬಂದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಹಾಗೂ ಪೊಲೀಸ್ ತುರ್ತು ಸಹಾಯವಾಣಿ 112. ಹಾಗೂ ನಾಯಕನಹಟ್ಟಿ- ಪೋಲಿಸ್ ಠಾಣೆ ಪಿಎಸ್ಐ ಪಾಂಡುರಂಗಪ್ಪ ಮೊಬೈಲ್ ಸಂಖ್ಯೆ-9480803158 ಗೆ ಕರೆ ಮಾಡಿ ತಿಳಿಸಲು ಕೋರಿದೆ
About The Author
Discover more from JANADHWANI NEWS
Subscribe to get the latest posts sent to your email.