ಹೊಸದುರ್ಗ, ಮಾ. 16 : ತಾಲ್ಲೂಕಿನ ಜನರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ಸರಗಳ್ಳರು ಕೊನೆಗೂ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ. ಹೊಸದುರ್ಗ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಮನೆ ಹಾಗೂ ಸರಗಳ್ಳರನ್ನು ಬಂಧಿಸಿ, ಬಂಧಿತರಿಂದ ಸುಮಾರು 8,90,000-00 ರೂ ಬೆಲೆಬಾಳುವ 125 ಗ್ರಾಂ ತೂಕದ ಬಂಗಾರದ ಒಡವೆಗಳು ಮತ್ತು 1,00,000-00 ರೂ ಬೆಲೆಬಾಳುವ 01 ಮೋಟಾರ್ ಸೈಕಲ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತರನ್ನು ಭದ್ರಾವತಿ ತಾಲ್ಲೂಕಿನ ಗಂಗೂರು ಗ್ರಾಮದ ಸಂತೋಷ (46 ವರ್ಷ) ಮತ್ತು ಶಿವಮೊಗ್ಗ ತಾಲ್ಲೂಕಿನ ಗಾಜನೂರು ಹೊಸಳ್ಳಿ ಗ್ರಾಮದ ಹೊನ್ನಕುಮಾರ (36 ವರ್ಷ)
ಎಂದು ಗುರುತಿಸಲಾಗಿದೆ. ಇವರು ಹೊಸದುರ್ಗ ಪೊಲೀಸ್ ಠಾಣೆಯ 03 ಸರಗಳ್ಳತನ ಪ್ರಕರಣ ಹಾಗೂ ಒಂದು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರುಈ ಪ್ರಕರಣವನ್ನು ಬೇಧಿಸಲು
ಎ.ಎಸ್.ಪಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಹಿರಿಯೂರು ಉಪವಿಭಾಗದ ಡಿ.ವೈ.ಎಸ್.ಪಿ. ಟಿ.ಎಂ.ಶಿವಕುಮಾರ್, ಪಿ.ಐ.ಎನ್.ತಿಮ್ಮಣ್ಣನವರ ನೇತೃತ್ವದಲ್ಲಿ ಭೀಮನಗೌಡ ಪಾಟೀಲ್ ಪಿ.ಎಸ್.ಐ, ಮಹೇಶ್ ಕುಮಾರ್ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಸತ್ಯನಾರಾಯಣ ಹೆಚ್.ಸಿ, ಕುಮಾರ ಹೆಚ್.ಸಿ, ಗಂಗಾಧರ ಪಿಸಿ, ರಾಜಣ್ಣ ಪಿಸಿ, ಚಾಲಕರಾದ ನಟರಾಜ್, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ರಾಘವೇಂದ್ರ.ಎ.ಎಸ್.ಐ ಹಾಗೂ ಸಿಬ್ಬಂದಿಯವರ ತಂಡದವರ ಈ ಕಾರ್ಯಾಚರಣೆಯನ್ನು ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿರುತ್ತಾರೆ.
About The Author
Discover more from JANADHWANI NEWS
Subscribe to get the latest posts sent to your email.