ಚಳ್ಳಕೆರೆ: ಪೊಲೀಸ್ ವ್ಯವಸ್ಥೆ ಬಲಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರವು ಮುಖ್ಯವಾಗುತ್ತದೆ ಸಾರ್ವಜನಿಕರಿಗಾಗಿ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದ್ದು ಸಾರ್ವಜನಿಕರಿಂದ ಯಾವುದೇ ಆರೋಪಗಳು ಬಂದರು ಸಹ ದಿನದ 24 ಗಂಟೆಯೂ ಪೊಲೀಸರು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಾರೆ. ಎಂದು ಡಿ ವೈ ಎಸ್ ಪಿ ಜೆ ಎಸ್ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.



ವೃತ್ತ ನಿರೀಕ್ಷಕ ಹುದ್ದೆಯಿಂದ ಡಿವೈಎಸ್ಪಿ ಹುದ್ದೆಗೆ ಮುಂಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಎಲ್ಐಸಿ ದುಗ್ಗಾವರ ರಂಗಸ್ವಾಮಿ ಸ್ನೇಹ ಬಳಗದ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಪೊಲೀಸ್ ಇಲಾಖೆಯಲ್ಲಿ ಮುಂಬಡ್ತಿ ಹೊಂದುವುದು ಹೊಸತೆನಲ್ಲ ಇದು ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ ಅಲ್ಲದೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಪ್ರೇರಣೆ ನೀಡಿದಂತಾಗುತ್ತದೆ. ಚಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಎನ್ ಉಪಾರಟ್ಟಿ ನನ್ನ ಜನ್ಮ ಸ್ಥಳವಾಗಿದ್ದು ತಾಲೂಕಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯವಾಗಿದೆ. ಎಂದು ತಿಳಿಸಿದರು.
ಸ್ನೇಹ ಬಳಗದ ಎಲ್ಐಸಿ ರಂಗಸ್ವಾಮಿ ಮಾತನಾಡಿ ಜೆ ಎಸ್ ತಿಪ್ಪೇಸ್ವಾಮಿಯವರು ಈ ಹಿಂದೆ ಚಳ್ಳಕೆರೆಯಲ್ಲಿ ವೃತ್ತ ನಿರೀಕ್ಷಕರಾಗಿ ಅತ್ಯುತ್ತಮ ಸೇವೆ ಮಾಡಿದ್ದರು ಇಂತಹ ದಕ್ಷ ಅಧಿಕಾರಿಗಳ ಸೇವೆಯಿಂದಾಗಿ ತಾಲೂಕಿನ ಜನತೆ ಶಾಂತಿ ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ ಎಂದರು.
ನೇತಾಜಿ ಆರ್ ಪ್ರಸನ್ನ ಮಾತನಾಡಿ ಜಿಲ್ಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಲೋಕ್ ಕುಮಾರ್ ಡಿವೈಎಸ್ಪಿ ಡಾ. ಅಶ್ವಿನಿ ಉಪನಿರೀಕ್ಷಕ ಟಿ ರಂಗಪ್ಪ ಸೇರಿದಂತೆ ಹಲವರು ಉತ್ತಮ ಸೇವೆಯಿಂದಾಗಿ ಜನರ ಮನದಲ್ಲಿ ಇಂದಿಗೂ ನೆಲೆಸಿದ್ದಾರೆ ಜೆಎಸ್ ತಿಪ್ಪೇಸ್ವಾಮಿ ಅವರು ಕಾನೂನಿನ ಜೊತೆಗೆ ಮೌಲ್ಯಯುತವಾದ ವೃತ್ತಿ ಧರ್ಮವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಹಾಗೂ ಅಪರಾಧಿಗಳಿಗೆ ತಿಳಿ ಹೇಳುವ ಮೂಲಕ ತಾಲೂಕಿನಲ್ಲಿ ಉತ್ತಮ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು ಇಂತಹ ಅಧಿಕಾರಿಗಳ ಸೇವೆ ತಾಲೂಕಿಗೆ ಇನ್ನಷ್ಟು ದೊರೆತು ಪೊಲೀಸರಿಗೆ ಸಾರ್ವಜನಿಕರು ಗೌರವ ನೀಡುವಂತಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ ಐ ಸಿ ಕಚೇರಿಯ ಶಾಖಾಧಿಕಾರಿ ಚೆನ್ನಪ್ಪ ತಿಪ್ಪೇಸ್ವಾಮಿ ವಿಜಯಣ್ಣ ಪಾಪಣ್ಣ ಟಿ ವೆಂಕಟೇಶ್ ಸಂಜೀವಪ್ಪ ಬೋರಯ್ಯ ಉಮೇಶ್ ಕುಮಾರ್ ಆರ್ ರುದ್ರಮನಿ ಮಹಾಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.