ಭದ್ರಾ ಮೇಲ್ದಂಡೆ ಯೋಜನೆಗೆ ₹5000 ಕೋಟಿ ಮೀಸಲಿಡಲು ಸಿಎಂಗೆ ಮನವಿ
ಗೋನೂರು ಅಕ್ವಾಡಕ್ಟ್‌ವರೆಗೆ ನೀರು ಹರಿಸಲು ತುರ್ತಾಗಿ ₹300 ಕೋಟಿ ಬಿಡುಗಡೆಗೆ ಆಗ್ರಹ
ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ₹5000 ಕೋಟಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ Siddaramaiah ಅವರಿಗೆ ಜನಪ್ರತಿನಿಧಿಗಳ ನಿಯೋಗ ಮನವಿ ಸಲ್ಲಿಸಿತು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಶಾಸಕರಾದ ಟಿ.ರಘುಮೂರ್ತಿ.ಎನ್.ವೈ.ಗೋಪಾಲಕೃಷ್ಣ. ಕೆ.ಸಿ.ವೀರೇಂದ್ರಪಪ್ಪಿಹಾಗೂ ಬಿ. ಜಿ.ಗೋವಿಂದಪ್ಪ ಅವರೊಂದಿಗೆ ಇಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಹಕ್ಕೊತ್ತಾಯ ಮಂಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವುದರಿಂದ ಜಿಲ್ಲೆಯ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಯೋಜನೆಯ ವಿವಿಧ ಹಂತಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ವೇಗವಾಗಿ ಪೂರ್ಣಗೊಳಿಸಲು ಈ ಬಾರಿ ಬಜೆಟ್‌ನಲ್ಲಿ ₹5000 ಕೋಟಿ ಅನುದಾನ ಮೀಸಲಿಡುವುದು ಅಗತ್ಯವಾಗಿದೆ ಎಂದು ನಿಯೋಗ ಒತ್ತಾಯಿಸಿದೆ.
ಇದಲ್ಲದೆ, ಗೋನೂರು ಅಕ್ವಾಡಕ್ಟ್‌ವರೆಗೆ ನೀರು ಹರಿಸಲು ತುರ್ತಾಗಿ ₹300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಭಾಗದ ಕಾಮಗಾರಿ ಪೂರ್ಣಗೊಂಡರೆ ಹಲವಾರು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಪ್ರತಿನಿಧಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
About The Author
Discover more from JANADHWANI NEWS
Subscribe to get the latest posts sent to your email.