ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಸಂಸ್ಕಾರವನ್ನು ಕಲಿಯಬೇಕು ಎಂದು ಸಾಲಿಗ್ರಾಮದ ಶ್ರೀ ದ್ವಯ ಸಿದ್ಧಾಂತ ಪೀಠ ಶ್ರೀ ಭಾಷ್ಯಕಾರ ಸ್ವಾಮಿ ದೇವಸ್ಥಾನದ ಶ್ರೀ ದನುರ್ಧಾಸ ರಾಮಾನುಜ ಜೀಯರ್ ಸ್ವಾಮಿಗಳು ಹೇಳಿದರು.



ಅವರು ಸಾಲಿಗ್ರಾಮ ಪಟ್ಟಣದಲ್ಲಿ ಸಾಧನ ಶಿಕ್ಷಣ ಸಂಸ್ಥೆ ಮತ್ತು ಸಾಧನ ಟ್ಯುಟೋರಿಯಲ್ ಆಯೋಜಿಸಿದ್ದ ಐದನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶಿಸ್ತು, ಸಂಯಮ, ಸಂಸ್ಕಾರದಂತಹ ಉತ್ತಮ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಶಿಕ್ಷಕರುಗಳು ಮಕ್ಕಳಿಗೆ ಪಠ್ಯದಲ್ಲಿರುವ ವಿಷಯಗಳನ್ನು ಕಲಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಮಾಡಬೇಕು ಆ ಮೂಲಕ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳನ್ನು ಗಳಿಸಬೇಕು ಎಂದರು. ಪೋಷಕರುಗಳು ಮಕ್ಕಳ ಕಲಿಕೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್ ಮಾತನಾಡಿ ಶಾಲಾ ವಾರ್ಷಿಕೋತ್ಸವಗಳು ವಿದ್ಯಾರ್ಥಿಗಳ ಕಲಾ ಪ್ರತಿಭೋತ್ಸವವಾಗಿ ಅರ್ಥಪೂರ್ಣವಾಗಿ ಆಚರಣೆಗಳಾಗಬೇಕು ಎಂದರು.
ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅಂತಹ ಕಲೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅತ್ಯವಶ್ಯಕವಾಗಿದ್ದು ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೆ ತಮಗೆ ಗೊತ್ತಿರುವ ವಿವಿಧ ಕಲೆಗಳ ಪ್ರದರ್ಶನವನ್ನು ಮಾಡಬೇಕು. ಪೋಷಕರಗಳು ಹಾಗೂ ಶಿಕ್ಷಕರುಗಳು ಮಕ್ಕಳು ಯಾವ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಆ ಕ್ಷೇತ್ರದಲ್ಲಿ ಅವರು ಉತ್ತಮ ಸಾಧನೆ ಮಾಡಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ, ಗಣ್ಯರುಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ಮುಖಂಡರಾದ ಸುನಿಲ್, ಎಸ್.ಜಿ.ಅಮರಜಿತ್ ಜೈನ್, ಸವಿತ ಅಮರಜಿತ್, ಸಂಸ್ಥೆಯ ಅಧ್ಯಕ್ಷ ಪುನೀತ್ ಕುಮಾರ್, ಉಪಾಧ್ಯಕ್ಷ ಆರ್.ಪಿ.ಅಮಿತ್ ಕುಮಾರ್, ಖಜಾಂಚಿ ಹರೀಶ್ ಕುಮಾರ್, ನಿರ್ದೇಶಕ ಭರತ್ ಜೈನ್, ಮುಖ್ಯ ಶಿಕ್ಷಕರಾದ ಸುಮಾಮಣಿ, ವಿನಾಯಕನಾಯಕ, ಯಶಸ್ವಿನಿ, ಚಾಮುಂಡೇಶ್ವರಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಅಮಿತ್ ಕುಮಾರ್, ಕಿರಿಯ ತರಬೇತಿ ಅಧಿಕಾರಿ ಆರ್.ಸೋಮಶೇಖರ್, ಪತ್ರಕರ್ತ ಎಸ್.ಬಿ.ಬಸವರಾಜು, ನೃತ್ಯ ತರಬೇತುದಾರ ಅವಿನಾಶ್, ಶಿಕ್ಷಕರಾದ ಬಿ.ಆರ್.ಮಹೇಶ್, ಹರೀಶ್ ಕುಮಾರ್, ಉಷಾ, ದರ್ಶನ್, ಸಿಮ್ರಾನ್ ತಾಜ್, ರಾಜೇಶ್ವರಿ, ಅರ್ಚನಾ, ಪೋಷಕರು, ವಿದ್ಯಾರ್ಥಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.